ಬೆಳಗಾವಿಯಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ಸುವರ್ಣ ಗಳಿಗೆಯಾಗಿರುವ ಈ ದಿನ (ನವೆಂಬರ್ ೧) ಬೆಳಗಾವಿ ಜಿಲ್ಲೆಯಾದ್ಯಂತ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು - Kannada Rajyotsava celebration in Belgaum

🌐 Kannada News :

( Kannada News Today ) : ಬೆಳಗಾವಿ : ಬೆಳಗಾವಿಯಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ :
ನವೆಂಬರ್ ೦೧ ಕನ್ನಡಿಗರು ಭೌಗೋಳಿಕವಾಗಿ ಒಗ್ಗೂಡಿದ ಸುವರ್ಣ ಗಳಿಗೆಯಾಗಿರುವ ಈ ದಿನ ಬೆಳಗಾವಿ ಜಿಲ್ಲೆಯಾದ್ಯಂತ ಕರ್ನಾಟಕ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಬಳಿಕ ಕರ್ನಾಟಕ ರಾಜ್ಯೋತ್ಸವ ಸಂದೇಶ ನೀಡಿದ ಸಚಿವ ರಮೇಶ ಜಾರಕಿಹೊಳಿ ಅವರು ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಂಕಷ್ಟದ ಕಾಲದಲ್ಲಿಯೂ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ.

ಪ್ರಸ್ತುತ ೨೦೨೦ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ರೈತರಿಗೆ ಬಿತ್ತನೆ ಕಾರ್ಯಕ್ಕೆ ಅನುಕೂಲಕರವಾಗಿದೆ. ಈ ಮುಂಗಾರಿನಲ್ಲಿ ಒಟ್ಟು ೬.೮೮ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಎಲ್ಲಾ ಬೆಳೆಗಳು ಸೇರಿದಂತೆ ಒಟ್ಟು ೬.೯೭ ಲಕ್ಷ ಹೆಕ್ಟೇರ್‌ಗಳಷ್ಟು ಅಂದರೆ ಶೇ. ೧೦೧ ರಷ್ಟು ಬಿತ್ತನೆಯಾಗಿದೆ.

ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಆಗಿರುವ ಹೆಚ್ಚು ಮಳೆಯಿಂದಾಗಿ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿ ಉದ್ಭವವಾಗಿ ಬೆಳೆಗಳಲ್ಲಿ ನೀರು ನಿಂತು ಸುಮಾರು ೧ ಲಕ್ಷ ೫೫ ಸಾವಿರ ಹೆಕ್ಟೇರ್ ಪ್ರದೇಶವನ್ನು ಬಾಧಿತ ಕ್ಷೇತ್ರವೆಂದು ಅಂದಾಜಿಸಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಕ್ಷೇತ್ರಕ್ಕೆ ಬೆಳೆ ಹಾನಿ ಪರಿಹಾರ ಕೋರಿ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಐಜಿಪಿ ರಾಘವೇಂದ್ರ ಸುಹಾಸ, ಪೋಲಿಸ್ ಆಯುಕ್ತ ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್.ವಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಹಿರಿಯ ಕನ್ನಡಪರ ಹೋರಾಟಗಾರರು ಸೇರಿದಂತೆ ನೂರಾರು ಜನರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಆರಂಭದಲ್ಲಿ ತಾಯಿ ಭುವನೇಶ್ವರಿ ಪ್ರತಿಮಿಗೆ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಎಲ್ಲ ಗಣ್ಯರು ಪೂಜೆ ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಚೆನ್ನಮ್ಮ ವೃತ್ತದಲ್ಲಿರುವ ರಾಣಿ ಚೆನ್ನಮ್ಮ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.

ಬೆಳಗಾವಿಯಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ
ಬೆಳಗಾವಿಯಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ಕೊರೊನಾ ವಾರಿಯರ್ಸ್ ಗೆ ಸನ್ಮಾನ:

ಕೋವಿಡ್-೧೯ ಸಂಕಷ್ಟದ ಸಂದರ್ಭದಲ್ಲಿ ಅತ್ಯತ್ತಮ ಸೇವೆಗೈದ ವಿವಿಧ ಇಲಾಖೆಯ ಅಧಿಕಾರಿ/ ಸಿಬ್ಬಂದಿ, ಮಾಧ್ಯಮದವರು ಹಾಗೂ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳನ್ನು ಜಿಲ್ಲಾಡಳಿತ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ದಿಲೀಪ್ ಕುರಂದವಾಡೆ (ಪಬ್ಲಿಕ್ ಟಿವಿ), ಡಾ|| ಗಿರೀಶ ಸೋನವಾಲ್ಕರ್ (ವೈದ್ಯರು), ಶಂಕರ ಪರಸನ್ನವರ (ಪಿ.ಆರ್.ಓ ಕೆ.ಎಲ್.ಇ ಆಸ್ಪತ್ರೆ), ಕಿರಣಕುಮಾರ ಪಾಟೀಲ್ (ಜೀವನ್ಮುಖಿ ಫೌಂಡೇಷನ್), ಆಸಿಫ್(ರಾಜು) ಸೇಠ (ಚೇರಮನ್ ಅಂಜುಮನ್ ಸಂಸ್ಥೆ), ವಿರೇಶ ಕಿವಡಸನ್ನವರ (ಸಮರ್ಥನಂ ಅಂಧ ಮಕ್ಕಳ ಸಂಸ್ಥೆ), ಶ್ರೀಮತಿ ಶ್ರೀದೇವಿ ಬಳೋಬಾಳ (ಸಮೃದ್ಧಿ ಪೌಂಡೇಷನ್), ಮಹ್ಮದ್ ಆಯುಬಖಾನ್ ರಸಾಲಖಾನ (ಶಿಕ್ಷಕರ-ಮರಣೋತ್ತರ),

ವಿರೇಶ ಹಿರೇಮಠ (ಪಿ.ಆರ್.ಓ ವಿಜಯಾ ಆಸ್ಪತ್ರೆ), ಶ್ರೀಕಾಂತ ಹೈಗರ (ಕಂದಾಯ ಇಲಾಖೆ), ಬಸವರಾಜ ಹೆಗನಾಯಕ (ಇ.ಓ- ಗೋಕಾಕ ತಾ.ಪಂ), ಬಸವರಾಜ ಯರನಾಳ(ಎಪಿಎಂಸಿ ಪೊಲೀಸ್ ಠಾಣೆ), ಗಂಗಾಧರ ಇ (ಮಹಾನಗರ ಪಾಲಿಕೆ ಕಾರ್ಯಕಾರಿ ಅಭಿಯಂತರರು), ಡಾ. ಜಗದೀಶ ಪಾಟ್ನಿ(ವೈದ್ಯಾಧಿಕಾರಿಗಳು, ರಾಮನಗರ) ಶ್ರೀಮತಿ ಗಿರಿಜಾ ಶಿಂತ್ರೆ (ಆಶಾ ಕಾರ್ಯಕರ್ತೆ, ಹಿರೇಬಾಗೇವಾಡಿ), ಶ್ರೀಮತಿ ಸುರೇಖಾ ಪಾಟೀಲ (ಯೋಜನಾ ನಿರ್ದೇಶಕರು, ಮಹಿಳಾ ಕಲ್ಯಾಣ ಸಂಸ್ಥೆ), ಶ್ರೀಮತಿ ಸರೋಜಿನಿ ಪಡಿಪಾಟೀಲ್ (ಅಂಗನವಾಡಿ ಕಾರ್ಯಕರ್ತೆ, ಹಿರೇಬಾಗೇವಾಡಿ), ಎಂ.ವಾಯ್.ಮೆಣಸಿನಕಾಯಿ (ಸಹ ಶಿಕ್ಷಕರು ನಂ.೧ ಮಾರ್ಕೆಟ್ ಶಾಲೆ), ಶ್ರೀಮತಿ ಉಷಾ ಎಸ್ (ಪಿ.ಡಿ.ಓ ಹಿರೇಬಾಗೇವಾಡಿ) ಇವರನ್ನು ಸನ್ಮಾನಿಸಲಾಯಿತು.

ಲ್ಯಾಪಟಾಪ್ ವಿತರಣೆ :

ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಗಳಲ್ಲಿ ಅಧ್ಯಯನ ಮಾಡಿರುವ ಶೈಕ್ಷಣಿಕ ಜಿಲ್ಲಾವಾರು ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಾದ ಸುಮನ ಮಾವಿನಕಟ್ಟಿ (ಸರಕಾರಿ ಪ್ರೌಢಶಾಲೆ ಮರಿಕಟ್ಟಿ ಬೈಲಹೊಂಗಲ), ರಶ್ಮಿ ಹೊಸೆಟ್ಟಿ (ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಗಳಿಹಾಳ ಖಾನಾಪೂರ), ಲಕ್ಷ್ಮೀ ಗರಗದ (ಸರಕಾರಿ ಪ್ರೌಢಶಾಲೆ ಕರಿಕಟ್ಟಿ ಸವದತ್ತಿ), ವೈಶಾಲಿ ತಾನಸಿ (ಸರಕಾರಿ ಪ್ರೌಢಶಾಲೆ ಮಾಸ್ತಮರಡಿ) ಇವರುಗಳಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಿ ಗೌರವಿಸಲಾಯಿತು.

Web Title : Kannada Rajyotsava celebration in Belgaum

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.