ಕರ್ನಾಟಕ ಲಾಕ್​​ಡೌನ್​​ ​​​: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಮೇ 4 ರಿಂದ ಮತ್ತೆ ಎರಡು ವಾರಗಳ ಕಾಲ ಲಾಕ್​ಡೌನ್ ಮುಂದುವರಿಯುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

🌐 Kannada News :

ಬೆಂಗಳೂರು : ರಾಷ್ಟ್ರವ್ಯಾಪಿ ಲಾಕ್​ಡೌನ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಥಾವತ್ತಾಗಿ ರಾಜ್ಯದಲ್ಲಿಯೂ ಸಹ ಅದೇ ಮಾರ್ಗ ಸೂಚಿಗಳು ಜಾರಿಯಲ್ಲಿರುತ್ತವೆ. ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಂಚಾರ ನಿರ್ಬಂಧ, ಮಾಸ್ಕ್ ಧರಿಸುವುದು (ಈಗ ಮಾಸ್ಕ್ ಧರಿಸುವುದು ಕಡ್ಡಾಯ, ಇಲ್ಲದೆ ಹೋದಲ್ಲಿ ದಂಡ ಸಹ ತೆತ್ತಬೇಕಾಗುತ್ತದೆ) ಅಗತ್ಯ ವಸ್ತುಗಳ ಸೇವೆ ಹಾಗು ಅನವಶ್ಯಕ ಸಂಚಾರ ಹಾಗೂ ಇನ್ನಿತರ ಕಟ್ಟುನಿಟ್ಟಿನ ಕ್ರಮಗಳು ಮುಂದುವರೆಯುತ್ತವೆ.

ಕೇಂದ್ರ ಸರ್ಕಾರ ಮೂರನೇ ಬಾರಿ ಲಾಕ್ ಡೌನ್ ವಿಸ್ತರಿಸಿ ಆದೇಶಿಸಿದೆ, ಅಂದರೆ ಮೇ 17ರವರೆಗೂ ಲಾಕ್​​ಡೌನ್​​ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆ ನಡೆಯಿತು.

ಇಂದು ನಡೆದ ಸಭೆಯಲ್ಲಿ ಸಂಪುಟದ ಹಿರಿಯ ಸದಸ್ಯರು, ಉನ್ನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು.
ಇನ್ನು, ಕೇಂದ್ರದ ಹೊಸ ಮಾರ್ಗ ಸೂಚಿಯಂತೆ ಆದೇಶಗಳನ್ನು ಪಾಲನೆ ಮಾಡಲು ಸಿಎಂ ಸೂಚಿಸಿದ್ದಾರೆ. ಅದರಂತೆ ರೈಲು ಪ್ರಯಾಣ ಸೇರಿದಂತೆ ಅಂತರ್‌ರಾಜ್ಯ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ತಿಳಿದು ಬಂದಿದೆ.

ಅಂತೆಯೇ ಮೆಟ್ರೋ ರೈಲು ಸಂಚಾರ, ಮಂದಿರಗಳು, ಧಾರ್ಮಿಕ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳು, ಚಲನಚಿತ್ರ ಮಂದಿರಗಳು, ಮಾಲ್‌ಗಳು ಯಾವುದಕ್ಕೂ ಅನುಮತಿ ಇಲ್ಲ.

ಇನ್ನು ಗ್ರೀನ್ ಜೋನ್ ಗಳಲ್ಲಿ ಹಲವು ಸೇವೆಗಳಿಗೆ ಅನುಮತಿ ನೀಡಲಾಗಿದ್ದು, ಅಂತರ್‌ರಾಜ್ಯ ಸರಕು ಸಾಗಾಣೆಗೆ ಅವಕಾಶ ಕಲ್ಪಿಸಲಾಗಿದೆ, ಜೊತೆಗೆ ಬೇರೆ ರಾಷ್ಟ್ರಗಳಿಗೂ ಸರಕು ಸಾಗಾಣೆಗೆ ಅನುಮತಿ ನೀಡಿದೆ. ಇನ್ನು ಪ್ರಯಾಣಕ್ಕೆ ಅನುಮತಿ ನೀಡಿದ್ದು ಬಸ್ ನಲ್ಲಿ 50% ಸೀಟುಗಳನ್ನು ಮಾತ್ರ ಉಪಯೋಗಿಸಬೇಕು. ಇನ್ನು ವೈದ್ಯಕೀಯ ಸೌಲಭ್ಯವನ್ನು ಎಲ್ಲ ಜೋನ್ ನಲ್ಲಿ ಅನುಮತಿಸಿದೆ. ಎಲ್ಲ ಜೋನ್‌ಗಳಲ್ಲಿ ಅಸ್ಪತ್ರೆ ತೆರೆಯಲು ಅವಕಾಶ ನೀಡಿದೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile