Welcome To Kannada News Today

ನಿಲ್ಲಲಿಲ್ಲ ಕೊರೋನಾ ಅಟ್ಟಹಾಸ, ಕರ್ನಾಟಕದಲ್ಲಿ ಹೊಸದಾಗಿ 1,285 ಕೊರೊನಾ ಕೇಸ್ ಪತ್ತೆ

ಕರ್ನಾಟಕದಲ್ಲಿ ಇಂದು (ಆಗಸ್ಟ್ 2) ಹೊಸದಾಗಿ 1,285 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,08,284 ಕ್ಕೆ ಏರಿಕೆಯಾಗಿದೆ.

🌐 Kannada News :

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಆಗಸ್ಟ್ 2) ಹೊಸದಾಗಿ 1,285 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,08,284 ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪೈಕಿ 28,47,627 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 25 ಜನರ ಸಾವು ಸಂಭವಿಸಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,612 ಜನ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ 24,021 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 290 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ.

ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,28,038 ಕ್ಕೆ ಏರಿಕೆಯಾಗಿದೆ. 12,28,038 ಸೋಂಕಿತರ ಪೈಕಿ 12,03,482 ಜನರು ಗುಣಮುಖರಾಗಿದ್ದಾರೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile