ಕನ್ನಡ ರಾಜ್ಯೋತ್ಸವ ಅಂಗವಾಗಿ “ಕರುನಾಡ ಸಂಭ್ರಮ-2021” ಬೃಹತ್ ಕಾರ್ಯಕ್ರಮ

Karnataka Rajyotsava - Karunada Sambhrama-2021 : ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್, ಸೌದಿ ಅರೇಬಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ "ಕರುನಾಡ ಸಂಭ್ರಮ-2021" ಬೃಹತ್ ಕಾರ್ಯಕ್ರಮ

🌐 Kannada News :

Karnataka Rajyotsava – Karunada Sambhrama-2021 :  66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅನಿವಾಸಿ ಕನ್ನಡಿಗರನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಒಂದುಗೂಡಿಸುವ ನಿಟ್ಟಿನಲ್ಲಿ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ವತಿಯಿಂದ ನವೆಂಬರ್ 25ರಂದು ನಡೆಯುವ “ಕರುನಾಡ ಸಂಭ್ರಮ-2021” ಎಂಬ ಕುಟುಂಬ ಸಮ್ಮಿಲನದ ಪತ್ರಿಕಾ ಗೋಷ್ಠಿ ಕಾರ್ಯಕ್ರಮವು ರಿಯಾದ್ ನ ಸೋಶಿಯಲ್ ಫೋರಂ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಪೂಂಜಲ್ಕಟ್ಟೆ, ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸದಾ ಆಸರೆಯಾಗಿ ನಿಲ್ಲುವ ಇಂಡಿಯನ್ ಸೋಶಿಯಲ್ ಫೋರಂ ಇದರ ಕಾರ್ಯಚಟುವಟಿಕೆಯನ್ನು ವಿವರಿಸುತ್ತಾ, ಕರುನಾಡ ಸಂಭ್ರಮ ಎಂಬ ಕಾರ್ಯಕ್ರಮದಲ್ಲಿ ಅನಿವಾಸಿ ಕನ್ನಡಿಗರ ಬೃಹತ್ ಸಮ್ಮಿಲನವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಗೊಳಿಸಬೇಕಾಗಿ ಎಲ್ಲಾ ಅನಿವಾಸಿಗಳಿಗೆ ಆಹ್ವಾನ ನೀಡಿದರು.

ಈ ಕಾರ್ಯಕ್ರಮವು ಸೌದಿ ಅರೇಬಿಯಾ, ರಿಯಾದ್ ನ ಅಲ್ ಅರಫಾತ್ ರಸ್ತೆಯಲ್ಲಿರುವ ವಾಹತ್ ಅಲ್ ರಿಯಾದ್ ಫಾರ್ಮ್ ಹೌಸ್ ನಲ್ಲಿ ನವೆಂಬರ್ 25 ರಂದು ನಡೆಯಲಿದ್ದು, ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು, ಸಾರ್ವಜನಿಕ ಭಾಷಣ ಮತ್ತು ವರ್ಣರಂಜಿತ ಕನ್ನಡದ ಪರಂಪರೆಯನ್ನು ಸಾರುವ ಎಕ್ಸ್ಪೋ ಕಾರ್ಯಕ್ರಮಗಳು ನಡೆಯಲಿರುವುದು.

ಸದಾ ವೃತ್ತಿಪರ ಜೀವನದಲ್ಲಿ ನಿರತರಾಗಿರುವ ಅನಿವಾಸಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸೌದಿ ಅರೇಬಿಯಾದಲ್ಲಿ ಕನ್ನಡದ ಸಂಪನ್ನು ಸವಿಯುವ ಮತ್ತು ಅನಿವಾಸಿ ಕನ್ನಡಿಗರೊಂದಿಗೆ ಬೆರೆಯುವ ಒಂದು ಮಹತ್ತರ ಅವಕಾಶ ನೀಡುತ್ತದೆ. ಕರುನಾಡ ಸಂಭ್ರಮ ಕಾರ್ಯಕ್ರಮದ ಯಶಸ್ವಿಗಾಗಿ ಪರಿಶ್ರಮಿಸಲು ಕಾರ್ಯಕರ್ತರಿಗೆ ಸಿದ್ದತೆಯ ಕರೆ ನೀಡಿದರು.

Karnataka Rajyotsava - Karunada Sambhrama-2021
Karnataka Rajyotsava – Karunada Sambhrama-2021

ಪೋಸ್ಟರ್ ಮತ್ತು ಲೋಗೊ ಬಿಡುಗಡೆ:

ಇದೇ ಸಂದರ್ಭದಲ್ಲಿ ಕರುನಾಡ ಸಂಭ್ರಮ ಕಾರ್ಯಕ್ರಮದ ಪ್ರಚಾರಾರ್ಥಕವಾಗಿ  ಪೋಸ್ಟರ್ ಮತ್ತು ಲೋಗೋವನ್ನು ಇಂಡಿಯನ್ ಸೋಶಿಯಲ್ ಫೋರಂನ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್, ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಸಜೀಪ, ಕಾರ್ಯದರ್ಶಿಗಳಾದ ಅಝ್ಗರ್ ಅಬೂಬಕ್ಕರ್ ಚಕ್ಕಮಕಿ ಮತ್ತು ಜವಾದ್ ಬಸ್ರೂರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಝೀರ್ ಹಂಡೇಲ್, ಮಿಹಫ್ ಸುಲ್ತಾನ್ ಉಪಸ್ಥಿತರಿದ್ದರು.Karunada Sambhrama Poster

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today