Karnataka Corona Cases Today, ಕರ್ನಾಟಕದಲ್ಲಿ 41,457 ಹೊಸ ಕೊರೋನಾ ಪ್ರಕರಣಗಳು

Karnataka Corona Cases Today, ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ, ಸೋಂಕಿತರ ಸಂಖ್ಯೆಯಲ್ಲಿ ದಿನನಿತ್ಯ ಬದಲಾವಣೆ ಕಂಡುಬರುತ್ತಿದೆ, ಈ ವೇಳೆ ಕಳೆದ 24 ಗಂಟೆಗಳಲ್ಲಿ 41,457 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ

Karnataka Corona Cases Today, ಬೆಂಗಳೂರು (Bangalore) : ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ, ಸೋಂಕಿತರ ಸಂಖ್ಯೆಯಲ್ಲಿ ದಿನನಿತ್ಯ ಬದಲಾವಣೆ ಕಂಡುಬರುತ್ತಿದೆ, ಈ ವೇಳೆ ಕಳೆದ 24 ಗಂಟೆಗಳಲ್ಲಿ 41,457 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ (Dr Sudhakar) ತಿಳಿಸಿದ್ದಾರೆ. ಸುಧಾಕರ್ ಅವರು ಮಂಗಳವಾರ ಈ ಬಗ್ಗೆ ಟ್ವೀಟ್ (Tweet) ಮೂಲಕ ತಿಳಿಸಿದ್ದಾರೆ.

ರಾಜ್ಯದಲ್ಲಿ ಇಂದು ಪಾಸಿಟಿವ್ ಪ್ರಕರಣಗಳ ಸಂಖ್ಯೆ 41 ಸಾವಿರ ದಾಟಿದ್ದು, ಪಾಸಿಟಿವ್ ದರ ಶೇ. 22.30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಏಳು ಮಂದಿ ಸೇರಿದಂತೆ ರಾಜ್ಯದಲ್ಲಿ ಇಂದು 20 ಮಂದಿ ಕರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು 25,595 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಏಳು ಜನರು ಕೊರೊನಾವೈರಸ್‌ನಿಂದ ಸಾವನ್ನಪ್ಪಿದ್ದಾರೆ.

ಇಂದು ಒಟ್ಟು 8,353 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ “2,50,381 ಸಕ್ರಿಯ ಪ್ರಕರಣಗಳಿವೆ ಮತ್ತು ಇಂದು 1,85,872 ಜನರಿಗೆ ಪರೀಕ್ಷಿಸಲಾಗಿದೆ” ಎಂದು ಸುಧಾಕರ್ ಹೇಳಿದರು.

Test positivity rate crosses 22% as cases spike to 41k today : New cases in Karnataka State: 41,457

New cases in Bangalore: 25,595

Positivity rate in State: 22.30%

Discharges: 8,353

Active cases State: 2,50,381 (B’lore- 178k) Deaths:20 (B’lore- 07)

Covid Tests: 1,85,872

Follow Us on : Google News | Facebook | Twitter | YouTube