About Chandrashekhar Guruji, ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಬಗೆಗೆ ಒಂದಿಷ್ಟು ಮಾಹಿತಿ
Know about Chandrashekhar Guruji Life Profile: ಮೂಲತಃ ಬಾಗಲಕೋಟೆಯವರಾದ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಬಗ್ಗೆ ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ.
Know about Chandrashekhar Guruji Life Profile: ಮೂಲತಃ ಬಾಗಲಕೋಟೆಯವರಾದ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಬಗ್ಗೆ ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ.
ಪೊಲೀಸರ ಪ್ರಕಾರ, ಇಬ್ಬರು ವ್ಯಕ್ತಿಗಳು ಚಂದ್ರಶೇಖರ ಗುರೂಜಿ ಹೋಟೆಲ್‌ಗೆ ಪ್ರವೇಶಿಸಿದಾಗ ಹಲ್ಲೆ ನಡೆಸಿದರು, ಸ್ಥಳದಿಂದ ಪರಾರಿಯಾಗುವ ಮೊದಲು ಅವರನ್ನು ಅನೇಕ ಬಾರಿ ಇರಿದಿದ್ದಾರೆ. ಸರಳ ವಾಸ್ತು ತಜ್ಞ ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ ಅಲಿಯಾಸ್ ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜುಲೈ 5 ರಂದು) ಉತ್ತರ ಕರ್ನಾಟಕದ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಹತ್ಯೆ ಮಾಡಲಾಗಿದೆ.
ಇದನ್ನೂ ಓದಿ : ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಬಗ್ಗೆ ತಿಳಿಯಿರಿ
ಪೊಲೀಸ್ ಕಮಿಷನರ್, ಡಿಸಿಪಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಹಂತಕರನ್ನು ಪತ್ತೆ ಹಚ್ಚಲು ಶ್ವಾನ ದಳ ಕಾರ್ಯಾಚರಣೆ ನಡೆಸಿತ್ತು. ಕೊಲೆಯ ದೃಶ್ಯ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಚಂದ್ರಶೇಖರ್ ಗುರೂಜಿ ಕೆಲವು ದಿನಗಳಿಂದ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : Chandrashekhar Guruji Murder ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಕೊಲೆ
ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಬಗೆಗೆ ಒಂದಿಷ್ಟು ಮಾಹಿತಿ
ಮೂಲತಃ ಬಾಗಲಕೋಟೆಯವರಾದ (Bagalkot) ಚಂದ್ರಶೇಖರ್ ಗುರೂಜಿ, ತಮ್ಮ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಕಲಿತರು.
ಚಂದ್ರಶೇಖರ ಗುರೂಜಿ ಸಿವಿಲ್ ಇಂಜಿನಿಯರ್ ಪದವಿ ಪಡೆದಿದ್ದಾರೆ.
ಬಾಗಲಕೋಟೆಯ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ ಅವರು ಪದವಿ ಪಡೆದರು.
ಚಂದ್ರಶೇಖರ ಗುರೂಜಿ ಅವರಿಗೆ ಇಬ್ಬರು ಸಹೋದರರು, ಮೂವರು ಸಹೋದರರಿಯರು ಇದ್ದಾರೆ. ಓರ್ವ ಸಹೋದರಿ ನಿಧನರಾಗಿದ್ದಾರೆ.
ಸದ್ಯ ಅವರ ಕುಟುಂಬದ ಯಾವ ಸದಸ್ಯರು ಬಾಗಲಕೋಟೆಯಲ್ಲಿ ವಾಸವಾಗಿಲ್ಲ.
1988 ರಲ್ಲಿ ಚಂದ್ರಶೇಖರ ಗುರೂಜಿ ಬಾಗಲಕೋಟೆಯಿಂದ ಮುಂಬೈಗೆ (Mumabi) ತೆರಳಿದರು.
ಅವರು ಮುಂಬೈನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಮುಂಬೈನಿಂದ ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ಹೋದರು.
ಸಿಂಗಾಪುರದಲ್ಲಿ ವಾಸ್ತು ಶಾಸ್ತ್ರ (Vastu) ಕಲಿತ ಅವರು ಮುಂಬೈಗೆ ಬಂದು ಸರಳ ವಾಸ್ತು ಆರಂಭಿಸಿದರು.
ಅಲ್ಲಿಂದ ಕರ್ನಾಟಕಕ್ಕೆ ಬಂದ ಅವರು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಸಂಸ್ಥೆ ಕಚೇರಿ ಪ್ರಾರಂಭಿಸಿದರು.
ವಾಸ್ತುಶಾಸ್ತ್ರದಲ್ಲಿ ಖ್ಯಾತಿ ಪಡೆದಿದ್ದ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯಲ್ಲಿ ಹಾಡಹಗಲೆ ಕೊಲೆ ಮಾಡಲಾಗಿದೆ.
Follow us On
Google News |