ಕೋಲಾರ : ನರೇಗಾ ರಾಜ್ಯದ ಉತ್ತಮ ಛಾಯಾಚಿತ್ರ ಪ್ರಶಸ್ತಿಗೆ ಕೋಲಾರ ಆಯ್ಕೆ

Kolar selected for Narega State's Best Photographic Award

ಕನ್ನಡ ನ್ಯೂಸ್ ಟುಡೇKolar News

ಕೋಲಾರ : ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ನಡೆದ ರಾಜ್ಯದ ಜಿಲ್ಲಾವಾರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2020ರ ವರ್ಷದ ಕ್ಯಾಲೆಂಡರನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಹಾಗೂ ಗ್ರಾಮೀಣಾಭಿವೃದ್ದಿ ಸಚಿವ
ಕೆ.ಎಸ್. ಈಶ್ವರಪ್ಪನವರು ಬಿಡುಗಡೆ ಮಾಡಿದರು.

ಕ್ಯಾಲೆಂಡರ್‍ನಲ್ಲಿ ಕೋಲಾರ ಜಿಲ್ಲೆಯ ಚೌಡದೇನಹಳ್ಳಿಯ ರೇಷ್ಮೆ ಅಭಿವೃದ್ದಿ ಬೆಳೆಯು ಆಯ್ಕೆಯಾಗಿದ್ದು, ಇದಕ್ಕೆ ನರೇಗಾ ಉತ್ತಮ ರಾಜ್ಯದ ವರ್ಷದ ಛಾಯಾಚಿತ್ರ ಪ್ರಶಸ್ತಿ ಬಂದಿದೆ. ಇದರ ಜೊತೆಗೆ ರಾಜ್ಯದ 12 ಛಾಯಾಚಿತ್ರಗಳು ಆಯ್ಕೆಯಾಗಿದೆ.

ಕೋಲಾರ : ನರೇಗಾ ರಾಜ್ಯದ ಉತ್ತಮ ಛಾಯಾಚಿತ್ರ ಪ್ರಶಸ್ತಿಗೆ ಕೋಲಾರ ಆಯ್ಕೆ - Kannada News

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕೆರೆ ಅಭಿವೃದ್ದಿ ಕಾಮಗಾರಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆಶಟ್ಟಿಹಳ್ಳಿಯ ಈರುಳ್ಳಿ ಅಭಿವೃದ್ದಿ ಕಾಮಗಾರಿ, ಉಡುಪಿ ಜಿಲ್ಲೆಯ ಕಾಡೂರು ಗ್ರಾಮ ಪಂಚಾಯಿತಿಯ ಕೋಳಿ ಶೆಡ್ ನಿರ್ಮಾಣ, ಚಿತ್ರದುರ್ಗ ಜಿಲ್ಲೆಯ ಮುದ್ದಾಪುರ ಗ್ರಾಮ ಪಂಚಾಯಿತಿಯ ಆಟದ ಮೈದಾನ, ಹಾವೇರಿ ಜಿಲ್ಲೆಯ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಆಚರಿಸಲಾದ ವಿಶ್ವ ನೀರಿನ ದಿನಾಚರಣೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕೃಷಿಹೊಂಡ ನಿರ್ಮಾಣ ಚಿತ್ರಗಳು ಆಯ್ಕೆಯಾಗಿದ್ದವು.

ಸಭೆಯಲ್ಲಿ ಗ್ರಾಮೀಣಾಭಿವೃದ್ದಿ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ ಅತೀಕ್, ಗ್ರಾಮೀಣಾಭಿವೃದ್ದಿ ಆಯುಕ್ತರಾದ ಅನಿರುದ್ಧ್ ಶ್ರವಣ್ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.

Web Title : Kolar selected for Narega State’s Best Photographic Award
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.

Follow us On

FaceBook Google News

Read More News Today