ಕೋಲಾರ : ರಾಷ್ಟ್ರೀಯ ತೋಟಗಾರಿಕೆ ಮೇಳ-2020

National Horticulture Fair -2020 in Kolar

🌐 Kannada News :

ಕನ್ನಡ ನ್ಯೂಸ್ ಟುಡೇKolar News

ಕೋಲಾರ : ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ವತಿಯಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ-2020 (ಕೃಷಿಯನ್ನು ಉದ್ದಿಮೆಯನ್ನಾಗಿಸಲು ತೋಟಗಾರಿಕೆ) ಅನ್ನು ಫೆಬ್ರವರಿ 5 ರಿಂದ 8 ರಂದು ಭಾ.ಕೃ.ಅನು.ಪ-ಐ.ಐ.ಹೆಚ್.ಆರ್ ಆವರಣ, ಹೆಸರಘಟ್ಟಕೆರೆ ಅಂಚೆ, ಬೆಂಗಳೂರು ಇಲ್ಲಿ ಆಯೋಜಿಸಲಾಗುವುದು.

ಮೇಳದಲ್ಲಿ ಭಾರತದ ಎಲ್ಲಾ ರಾಜ್ಯಗಳ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಮುಂತಾದ ಇಲಾಖೆಗಳು, ಭಾ.ಕೃ.ಅನು.ಪ ಸಂಶೋಧನಾ ಸಂಸ್ಥೆಗಳು, ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು, ಕೃಷಿ ಪರಿಕರ, ರಸಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ವಸ್ತುಗಳ ತಯಾರಕರು, ಬಿತ್ತನೆ ಬೀಜಗಳು ಮತ್ತು ನರ್ಸರಿ ಗಿಡಗಳ ವಿತರಕರು, ನವೋದ್ಯಮಗಳು, ಬಿಪಿಡಿ ಲೈಸನ್ಸ್‍ದಾರರು, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘ, ರೈತರ ಉತ್ಪಾದಕರ ಸಂಸ್ಥೆಗಳು ಮತ್ತು ರೈತರು ಭಾಗವಹಿಸುವವರು.

ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಹಣ್ಣು, ತರಕಾರಿ, ಅಲಂಕಾರಿಕೆ, ಔಷದೀಯ ಮತ್ತು ಸೌಗಂಧಿತ ಬೆಳೆ, ಅಣಬೆ ಪ್ಲಾಂಟೇಷನ್ ಮತ್ತು ಸಾಂಬಾರು ಬೆಳೆಗಳ ಉತ್ಪಾದನೆ ಮತ್ತು ಸಸ್ಯ- ಸಂರಕ್ಷಣಾ ತಂತ್ರಜ್ಞಾನಗಳು, ನರ್ಸರಿ ಮತ್ತು ಸಸ್ಯಪರಿಕರಗಳನ್ನು ಒದಗಿಸುವ ಮಳಿಗೆಗಳು, ಸಂರಕ್ಷಿತ ಬೇಸಾಯ ಪದ್ದತಿಗಳು, ತೋಟಗಾರಿಕೆ ಆಧಾರಿತ ಮಿಶ್ರ ಬೇಸಾಯ ಪದ್ದತಿಗಳು, ಕೊಯ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ, ತೋಟಗಾರಿಕೆಯ ಯಂತ್ರೋಪಕರಣಗಳು, ನಗರ ತೋಟಗಾರಿಕೆ-ಕಾರ್ಯಾಗಾರ ವಿಶೇಷತೆಗಳನ್ನು ಕಾಣಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; 9141704357, 080-28446010, 7760815475 ಅಥವಾ 080-23086100 ಅನ್ನು ಸಂಪರ್ಕಿಸಬಹುದಾಗಿದೆ.////

Quick Links : Kolar News Kannada


 

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile