ಕೋಲಾರ : ಪುಂಡಪೋಕರಿಗಳನ್ನು ಮಟ್ಟಹಾಕಲು ಸಜ್ಜಾದ ಪೊಲೀಸ್ ಪಡೆ
ಕೋಲಾರ : ಪುಂಡಪೋಕರಿಗಳನ್ನು ಮಟ್ಟಹಾಕಲು ಸಜ್ಜಾದ ಪೊಲೀಸ್ ಪಡೆ
ಕೋಲಾರ ಜಿಲ್ಲೆ ಮಾಲೂರು ಠಾಣೆಯ ಮುರಳಿ ಯುವಕರಿಗೆ ಶಿಸ್ತಿನ ಪಾಠ ಕಲಿಸಿದ ಸಬ್ ಇನ್ಸ್ ಪೆಕ್ಟರ್ , ದಾರಿಯಲ್ಲಿ ಅಬ್ಬೇಪಾರಿಗಳ ತರ ಅಲೆದಾಡುತ್ತಿರುವವರನ್ನು ಹಿಡಿದು ಎಚ್ಚರಿಸಿದ್ದಾರೆ.
ಕಳೆದ ಗುರುವಾರ ಮಾಲೂರು ಪಟ್ಟಣದಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಮಾಡಿ ಕೊಲೆಗೈದ ಘಟನೆ ನಡೆದಿತ್ತು. ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ವಿದ್ಯಾರ್ಥಿನಿ ಹತ್ಯೆ ಪ್ರಕರಣ, ಎಚ್ಚೆತ್ತ ಪೋಲಿಸ್ ಇಲಾಖೆ ಯುವಕರಿಗೆ ಶಿಸ್ತಿನ ಪಾಠ ಕಲಿಸಲು ಹೂರಟಿದ್ದು ಪುಂಡಪೋಕರಿಗಳನ್ನು ಮಟ್ಟಹಾಕಲು ಹಲವಾರು ಕ್ರಮಗಳನ್ನು ಕೈಗೊಂಡಿರುವರು,
ಪೋಲಿಸ್ ಇಲಾಖೆ ರೋಡ್ ರೋಮಿಯ, ಬೈಕ್ ವಿಲೀಂಗ್ ಮಾಡುವ ಯುವಕರನ್ನು ಪತ್ತೆಹಚ್ಚಿ ಶಿಸ್ತಿನ ಪಾಠ ಕಲಿಸುತ್ತಿರುವರು ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ವರದಿ: ಪ್ರವಿಣ್ ಹುಬ್ಬಳ್ಳಿ
Follow us On
Google News |