ಇಂಡಿಯನ್ ಬುಕ್ ಆಪ್ ರೆಕಾರ್ಡ್ ಜೊತೆಗೆ ಹಲವು ಸಾಧನೆಗೈದ ತಾನೀಶ್. ಎನ್
ತಾನೀಶ್ ಎನ್ ಮಹತ್ತರ ಸಾಧನೆಯಲ್ಲಿ ಇಂಡಿಯನ್ ಬುಕ್ ಆಪ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ವಿಲ್ ಮೆಡಲ್ ಬುಕ್ ಆಫ್ ರೆಕಾರ್ಡ್, ಹಾಗೂ ಕಿಡ್ಸ್ ವರ್ಡ್ ರೆಕಾರ್ಡ್ ಮಾಡುವ ಮೂಲಕ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
(Kannada News) : ಚಿನ್ನದ ಜಿಲ್ಲೆ ಕೋಲಾರದ, ಮಾಸ್ತಿಯ ತವರು ಮಾಲೂರು ತಾಲ್ಲೂಕಿನ, ಪುಣ್ಯಕ್ಷೇತ್ರ ಚಿಕ್ಕತಿರುಪತಿಯ ಸಮೀಪದ, ಲಕ್ಕೂರು ಗ್ರಾಮದ ಕೇವಲ 2 ವರ್ಷ 4 ತಿಂಗಳ ಪುಟ್ಟ ಕಂದ ಪ್ರತಿಷ್ಠಿತ ಮಹತ್ತರ ಸಾಧನೆಯಲ್ಲಿ ಇಂಡಿಯನ್ ಬುಕ್ ಆಪ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ವಿಲ್ ಮೆಡಲ್ ಬುಕ್ ಆಫ್ ರೆಕಾರ್ಡ್, ಹಾಗೂ ಕಿಡ್ಸ್ ವರ್ಡ್ ರೆಕಾರ್ಡ್ ಮಾಡುವ ಮೂಲಕ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ನ ರಾಜ್ಯ ಅಧ್ಯಕ್ಷ, ಹಾಗೂ ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಯುವ ಕವಿ ಲಕ್ಕೂರು ಎಂ ನಾಗರಾಜ್ ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆ(ರಿ.) ಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ದಂಪತಿಯ ಪುತ್ರ ನಮ್ಮ ಪುಟ್ಟ ಸಾಧಕ ತಾನೀಶ್ ಎನ್.
ತಾನೀಶ್.ಎನ್ ದೇಶದ ಮೂವತ್ತು ರಾಜ್ಯಗಳ ಹೆಸರು ಮತ್ತು ರಾಜಧಾನಿಗಳ ಹೆಸರು, 150 ಜನ ಮಹಾನ್ ಸಾಧಕರ ಭಾವಚಿತ್ರಗಳ ಹೆಸರು, ಜ್ಞಾನಪೀಠ ಪ್ರಶಸ್ತಿ ಪಡೆದ ಪುರಸ್ಕೃತರ ಹೆಸರು, ಕರ್ನಾಟಕದ 30 ಜಿಲ್ಲೆಗಳು, ಪ್ರಂಪಚದ ವಿವಿಧ ದೇಶಗಳ ಹೆಸರುಗಳು, 90 ಪ್ಲಾಷ್ ಕಾರ್ಡ್ಸ್ ಹೆಸರುಗಳು, ಪ್ರಚಲಿತ ವಿದ್ಯಮಾನದ ಸಾಮಾನ್ಯ ಜ್ಞಾನದ 80 ಪ್ರಶ್ನೆಗಳಿಗೆ ಪಟಪಟನೆ ಉತ್ತರ ನೀಡುತ್ತಾನೆ.
ಹಣ್ಣುಗಳು, ತರಕಾರಿಗಳು, ಬಣ್ಣಗಳು, ವಾಹನಗಳು, ಮಾನವ ದೇಹದ ಅಂಗಾಗಳು, ಕನ್ನಡ ವರ್ಣಮಾಲೆ, 12 ತಿಂಗಳುಗಳು, A TO Z ಅಲ್ಪಬೇಟ್ಸ್, ಆಕ್ಷನ್ ವರ್ಡ್ಸ್ ಗಳನ್ನು ಬಹುಬೇಗನೆ ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಾನೆ.
ತಾನೀಶ್.ಎನ್ ನ ಮೇರು ಪ್ರತಿಭೆಯನ್ನು ಗುರ್ತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ವೀಲ್ ಮೆಡಲ್ ಬುಕ್ ಆಫ್ ರೆಕಾರ್ಡ್, ಹಾಗೂ ಕಿಡ್ಸ ವರ್ಡ್ ರೆಕಾರ್ಡ್ಸ್ ಪದಕ, ಮೇಡಲ್, ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದೆ. ಈ ಪುಟ್ಟ ಸಾಧಕನ ಅಪ್ರತಿಮ ಸಾಧನೆಗೆ ಚಿನ್ನದ ಜಿಲ್ಲೆಯ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ
ನನ್ನ ವಿಶ್ವಮಾನವ ಕಂದ ತಾನೀಶ್ ದೇಶದ ಮಹತ್ತರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಜೊತೆಗೆ 3 ರೆಕಾರ್ಡ್ಸ್ ಮಾಡಿರುವ ನನ್ನ ಮಗುವಿನ ಸಾಧನೆ ನನ್ನ ಚಿನ್ನದ ನೆಲದ ಗುರುತನ್ನು ಕನ್ನಡ ನಾಡು, ಭಾರತ ದೇಶಕ್ಕೆ ಪ್ರತಿಬಿಂಬಿಸುವ ಕಾರ್ಯವನ್ನು ನನ್ನ ಮಗ ಮಾಡುತ್ತಿರುವುದು ಬಹಳ ಹೆಮ್ಮೆ ಎಂಬುದು ಒಂದು ವಿಷಯವಾದರೆ ಇವನು ಈಗಾಗಲೇ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾದ ಭರತನಾಟ್ಯ ಕಲಿಕೆಯ ಜೊತೆಗೆ ಕರಾಟೆ, ತಬಲ, ಸ್ಕೇಟಿಂಗ್ ತರಗತಿಗಳ ತರಬೇತಿ ಪಡೆಯುವ ಮೂಲಕ ಮಹತ್ತರ ಸಾಧನೆಯತ್ತ ಗಿನ್ನೆಸ್ ದಾಖಲೆ ನಿರ್ಮಿಸುವ ಗುರಿಯತ್ತ ತನ್ನ ನಿರಂತರ ಅಭ್ಯಾಸವನ್ನು ಅಮ್ಮನ ಸಹಕಾರದಿಂದ ಪಡೆಯುತ್ತಿದ್ದಾನೆ ಇದು ನಮ್ಮ ಚಿನ್ನದ ನೆಲದ ನಿಮ್ಮ ಅಕ್ಕರೆಯ ಪ್ರತಿಭೆ ನೀವು ಸಹ ಹಾರೈಸಿ ಎಂದು ತಂದೆ ಲಕ್ಕೂರು ಎಂ ನಾಗರಾಜ್ ತಿಳಿಸಿದರು.
ಅಕ್ಕರೆಯ ಕಂದ ತಾನೀಶ್ ಗೆ ಯಾವುದೇ ವಿಷಯವನ್ನು ಒಮ್ಮೆ ಹೇಳಿದರೆ ಸಾಕು ಕೂಡಲೇ ಅರ್ಥೈಸಿಕೊಂಡು ಮರು ಕ್ಷಣದಲ್ಲಿಯೇ ನಮಗೆ ಹೇಳಿ ಕೋಡುವಷ್ಟು ಸಮರ್ಥವಾದ ಜ್ಞಾನವನ್ನು ಪಡೆದಿದ್ದಾನೆ.
ಇವನು ಎಲ್ಲಾ ಕ್ಷೇತ್ರದಲ್ಲಿಯೂ ಅಪ್ರತಿಮ ಸಾಧನೆ ಮಾಡಿ ನಮ್ಮ ಜಿಲ್ಲೆಯ ಛಾಯೆಯನ್ನು ಎಲ್ಲೆಡೆ ಪಸರಿಸುವ ಮೂಲಕ ವಿಶ್ವಮಾನವ ಕುವೆಂಪು, ಅಂಬೇಡ್ಕರ್, ಬುದ್ದ, ಬಸವ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ಸಾಗಲಿ ಎಂದು ಬಯಸುವೆ ಎಂಬ ಮಾತನ್ನು ತಾಯಿ ಶ್ರೀಮತಿ ಶ್ವೇತನಾಗರಾಜ್ ತಿಳಿಸಿದರು.
Web Title : Thanesh has accomplished several other achievements along with Indian Book of Records
Follow us On
Google News |