Kolar , ಛತ್ರಪತಿ ಶಿವಾಜಿ ಅವರ ನಾಯಕತ್ವ ಇಡೀ ದೇಶಕ್ಕೆ ಮಾದರಿ – ಸಿ ಎಸ್ ವೆಂಕಟೇಶ್

The leadership of Chatrapati Shivaji is the model for the whole country, Says CS Venkatesh

KNT [Kannada News Today] – Kolar

ಕೋಲಾರ : ಮಹಾರಾಜ ಛತ್ರಪತಿ ಶಿವಾಜಿಯ ಅವರ ನಾಯಕತ್ವ ಇಡೀ ದೇಶಕ್ಕೆ ಮಾದರಿಯಾದದ್ದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ ಎಸ್ ವೆಂಕಟೇಶ್ ಅವರು ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Kolar , ಛತ್ರಪತಿ ಶಿವಾಜಿ ಅವರ ನಾಯಕತ್ವ ಇಡೀ ದೇಶಕ್ಕೆ ಮಾದರಿ - ಸಿ ಎಸ್ ವೆಂಕಟೇಶ್ - Kannada News

ಸರ್ಕಾರದ ವತಿಯಿಂದ ಆಚರಿಸುತ್ತಿರುವ ಇಂತಹ ಜಯಂತ್ಯೋತ್ಸವಗಳು ಸಮುದಾಯ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುತ್ತಿವೆ. ಶಿವಾಜಿಯ ತಾಯಿ ಜೀಜಬಾಯಿಯು ಬಾಲ್ಯದಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿದರು. ಹಾಗಾಗಿ ಇಂದಿನ ತಾಯಂದಿರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಏನು ಹೇಳಿಕೊಡುತ್ತೀರಿ ಅದನ್ನೇ ಮಕ್ಕಳು ಕಲಿಯುತ್ತಾರೆ ಎಂದು ಕಿವಿಮಾತು ಹೇಳಿದರು.

ಮರಾಠ ಸಮುದಾಯದವರು ಕೋಲಾರ ಮತ್ತು ಬಂಗಾರಪೇಟೆ ಭಾಗದಲ್ಲಿ ಹೆಚ್ಚಾಗಿದ್ದು ಸಮುದಾಯದವು ಸಂಘಟನೆಯಾಗುವುದರ ಜೊತೆಗೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗಾನಂದ ಕೆಂಪರಾಜ್ ಅವರು ಮಾತನಾಡಿ, ಛತ್ರಪತಿ ಶಿವಾಜಿಯ ಇತಿಹಾಸವು ನಮ್ಮೆಲ್ಲರಲ್ಲಿ ಧೈರ್ಯ ಹಾಗೂ ಸ್ಥೈರ್ಯವಂತರಾಗಲು ಸಹಕಾರಿಯಾಗಿದೆ. ಶಿವಾಜಿಯ ಇನ್ನಷ್ಟು ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಮರಾಠರಿಗೆ ಸ್ವರಾಜ್ಯ ಕಲ್ಪನೆಯನ್ನು ತುಂಬಿದವರು ಶಿವಾಜಿ. ಇವರ ದೇಶಭಕ್ತಿಯನ್ನು ನಾವೆಲ್ಲರೂ ಸ್ಮರಿಸಬೇಕು. ಶಿವಾಜಿಯ ಹೋರಾಟಗಳು ನಮಗೆ ಸ್ಪೂರ್ತಿಯಾಗಿವೆ. ಚಿಕ್ಕ ವಯಸ್ಸಿನಲ್ಲೇ ಸ್ವಾಭಿಮಾನವನ್ನು ಬೆಳೆಸಿಕೊಂಡರು ಎಂದು ತಿಳಿಸಿದರು.

ಕೋಲಾರ ತಹಶೀಲ್ದಾರ್‍ರಾದ ಆರ್. ಶೋಬಿತಾ ಅವರು ಮಾತನಾಡಿ. ಛತ್ರಪತಿ ಶಿವಾಜಿ ಜಯಂತೋತ್ಸವವನ್ನು ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬಂದಿದ್ದು ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬಾಲ ಗಂಗಾಧರ ತಿಲಕ್ ಅವರು ಶಿವಾಜಿ ಜಯಂತಿಯನ್ನು ಆಚರಣೆಗೆ ತಂದರು ಎಂದು ತಿಳಿಸಿದರು.

ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ಧರ್ಮವನ್ನು ಎತ್ತಿ ಹಿಡಿಯುವ ಕೆಲಸವನ್ನು ಶಿವಾಜಿ ಮಾಡಿದ್ದಾರೆ. ಮರಾಠ ಸಮುದಾಯವು 3 ಬಿ ಕೆಟಗರಿ ಸೇರಿದ್ದು ಸಮುದಾಯದ ಸಿಗಬೇಕಾದ ಸೌಲಭ್ಯಗಳನ್ನು ಕಂದಾಯ ಇಲಾಖೆಯಿಂದ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕರಾದ ರಾಕೇಶ್ ಅವರು ಮಾತನಾಡಿ ಒಂದು ಕಡೆ
ಮೊಘಲ್ ಸಾಮ್ರಾಜ್ಯ ಮತ್ತೊಂದು ಕಡೆ ಬಹುಮನಿ ಸುಲ್ತಾನರ ಸಾಮ್ರಾಜ್ಯ ಅಂತಹ ಪರಿಸ್ಥಿತಿಯಲ್ಲಿ ಮರಾಠ ಸಾಮ್ರಾಜ್ಯವನ್ನು ಶಿವಾಜಿ ಸ್ಥಾಪಿಸಿದರು. ಬಹಮನಿ ಅರಸರ ವಿರುದ್ಧ ತಲೆ ಎತ್ತಿ ಸೆಟೆದು ನಿಂತ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಶಿವಾಜಿ ಒಬ್ಬ ಆದರ್ಶ ಹಿಂದೂವಾಗಿದ್ದರೂ ಅನ್ಯಧರ್ಮಗಳನ್ನು ಸಮಾನ ದೃಷ್ಟಿಯಲ್ಲಿ ನೋಡಿದ ಉದರವಾದಿಯಾಗಿದ್ದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜುಗೌಡ. ಹಿರಿಯ ಪತ್ರಕರ್ತ ಪ್ರಹ್ಲಾದ್ ರಾವ್. ಸಮುದಾಯದ ಮುಖಂಡರಾದ ಫಲ್ಗುಣ. ರಾಜರಾಂ. ಶ್ರೀನಿವಾಸ್ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Web Title : The leadership of Chatrapati Shivaji is the model for the whole country, Says CS Venkatesh
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | TwitterYouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.
(ಕನ್ನಡ ಸುದ್ದಿಗಳು Kannada News Today, KNT News Network)


Follow us On

FaceBook Google News

Read More News Today