Welcome To Kannada News Today

ಮಂಡ್ಯದಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನಕ್ಕೆ ಸಿದ್ಧತೆ

ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನದ ಸಮರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಮೊದಲ ಹಂತದಲ್ಲಿ ಮಂಡ್ಯ ಉಪವಿಭಾಗದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕಗಳ 126 ಗ್ರಾಮ ಪಂಚಾಯಿತಿ ಗಳಿಗೆ ಚುನಾವಣೆ ನಡೆಯಲಿದೆ.

🌐 Kannada News :

(Kannada News) : ಮಂಡ್ಯ: ಗ್ರಾಮ ಪಂಚಾಯಿತಿ ಮೊದಲ ಹಂತದ ಮತದಾನದ ಸಮರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಮೊದಲ ಹಂತದಲ್ಲಿ ಮಂಡ್ಯ ಉಪವಿಭಾಗದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕಗಳ 126 ಗ್ರಾಮ ಪಂಚಾಯಿತಿ ಗಳಿಗೆ ಚುನಾವಣೆ ನಡೆಯಲಿದೆ.

ಸೋಮವಾರ ಬೆಳಿಗ್ಗೆ ನಗರದ ಸರ್ಕಾರಿ ಮಹಾವಿದ್ಯಾಲಯದ ಮಾಸ್ಟ ರಿಂಗ್ ಕೇಂದ್ರದಿಂದ ಸಿಬ್ಬಂದಿಗಳು ಮತ ಪೆಟ್ಟೆಗೆಯೊಂದಿಗೆ ನಿಯೋಜಿತ ಮತ ಕೇಂದ್ರಗಳಿಗೆ ತೆರಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾಸ್ಟ ರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ ನೀಡಿದರು.

ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಲಿದ್ದು, ಚುನಾವಣಾ ಸಿಬ್ಬಂದಿಗಳು ಮತಪೆಟ್ಟಿಗೆ, ಬ್ಯಾಲೆಟ್‌ಪೇಪರ್ ಹಾಗೂ ಪರಿಕರಗಳನ್ನು ಪಡೆದುಕೊಂಡು ತೆರಳಿದರು. ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.

ಮರುಮತದಾನ ಇದ್ದಲ್ಲಿ ಡಿ.24 ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ.

ಮಂಡ್ಯ ತಾಲೂಕಿನಲ್ಲಿ ಪುರುಷರು 1,16,001, ಮಹಿಳೆಯರು 1,16,990, ಇತರೆ 35, ಮದ್ದೂರು ತಾಲೂಕಿನಲ್ಲಿ 1,12,762 ಪುರುಷರು, 1,15,699 ಮಹಿಳೆಯರು, 20 ಇತರೆ ಹಾಗೂ ಮಳವಳ್ಳಿ ತಾಲೂಕಿನ 1,04,521 ಪುರುಷರು, 1,01,815, ಇತರೆ 10 ಮತದಾರರಿದ್ದು, ಮೊದಲ ಹಂತದಲ್ಲಿ ಒಟ್ಟು 6,67,853 ಮಂದಿ ಮತ ಚಲಾಯಿಸಲಿದ್ದಾರೆ.

ಮೊದಲ ಹಂತದ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳಲ್ಲಿ 921 ಮತಗಟ್ಟೆ ಕೇಂದ್ರಗಳಿವೆ. ಮಂಡ್ಯ 327, ಮದ್ದೂರು 300 ಹಾಗೂ ಮಳವಳ್ಳಿಯಲ್ಲಿ 294 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯಲ್ಲಿ 1971 ಮತಕೇಂದ್ರ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 340 ಹೆಚ್ಚುವರಿ ಮತ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 1631 ಮುಖ್ಯ ಮತ ಕೇಂದ್ರಗಳಿದ್ದು, ಹೆಚ್ಚುವರಿಯಾಗಿ 340 ಕೇಂದ್ರಗಳು ಸೇರಿದಂತೆ 1971 ಮತಕೇಂದ್ರಗಳನ್ನು ತೆರೆಯಲಾಗಿದೆ.

ಜಿಲ್ಲೆಯ ಏಳು ತಾಲೂಕುಗಳಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ 230 ಚುನಾವಣಾಧಿಕಾರಿ ಹಾಗೂ 236 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಇವರನ್ನೊಳಗೊಂಡಂತೆ ಮತಗಟ್ಟೆಯೊಂದಕ್ಕೆ 4 ಸಿಬ್ಬಂದಿ ಇರಲಿದ್ದು, 1971 ಮತಗಟ್ಟೆಗೆ 6504 ಸಿಬ್ಬಂದಿ ನೇಮಕ ಮಾಡಲಾಗಿದೆ.

364 ಮಂದಿ ಅವಿರೋಧ ಆಯ್ಕೆ

ಮಂಡ್ಯ ಉಪ ವಿಭಾಗ ವ್ಯಾಪ್ತಿಯ ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕು ಗಳ 126 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಮಂಗಳವಾರ ಮತ ದಾನ ನಡೆಯಲಿದೆ.

ಒಟ್ಟು 126 ಗ್ರಾಮಗಳ 2011 ಸ್ಥಾನಗಳ ಪೈಕಿ 364 ಮಂದಿ ಅವಿ ರೋಧವಾಗಿ ಆಯ್ಕೆಯಾಗಿದ್ದು, ಉಳಿದ 1646 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮಂಡ್ಯ 713 ಸ್ಥಾನಗಳ ಪೈಕಿ 116, ಮದ್ದೂರು 686 ಸ್ಥಾನಗಳ ಪೈಕಿ 147 ಹಾಗೂ ಮಳವಳ್ಳಿ 612 ಸ್ಥಾನಗಳ ಪೈಕಿ 101 ಮಂದಿ ಅವಿರೋಧ ಆಯ್ಕೆಯಾಗಿ ದ್ದಾರೆ. ಅಂತಿಮವಾಗಿ 4010 ಮಂದಿ ಕಣದಲ್ಲಿದ್ದಾರೆ.

ಪರಿಶಿಷ್ಟ ಜಾತಿ 698, ಪಂಗಡ 152, ಹಿಂದುಳಿದ ವರ್ಗ(ಎ) 678, ಹಿಂದುಳಿದ ವರ್ಗ(ಬಿ) 195 ಹಾಗೂ ಸಾಮಾನ್ಯ 2287 ಮಂದಿ ಅಭ್ಯರ್ಥಿಗಳಿದ್ದಾರೆ.

📣 ಇನ್ನಷ್ಟು ಕನ್ನಡ ಕರ್ನಾಟಕ ನ್ಯೂಸ್ ಗಳಿಗಾಗಿ Karnataka News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today