ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಾಸನ ಜಿಲ್ಲೆಯ ಹಲವಾರು ಗ್ರಾಮಸ್ಥರು ಕಂಬನಿ

ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಾಸನ ಜಿಲ್ಲೆಯ ಹಲವಾರು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ, ಮತ್ತೆ ಹುಟ್ಟಿ ಬನ್ನಿ ಅಪ್ಪು ಎಂದು ಘೋಷಣೆ ಕೂಗಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು

ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಾಸನ ಜಿಲ್ಲೆಯ ಹಲವಾರು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ, ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ಚನ್ನ ಹಳ್ಳಿ ಗ್ರಾಮಸ್ಥರು ಇಂದು ರಾತ್ರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.. ನಂತರ ಮೇಣದ ಬತ್ತಿ ಹಚ್ಚಿ ಪೂಜೆ ಸಲ್ಲಿಸಿ ಕಂಬನಿ ಮಿಡಿದರು.

ಈ ವೇಳೆ ಅತಿ ಚಿಕ್ಕವಯಸ್ಸಿನಲ್ಲೇ ನಮ್ಮನ್ನೆಲ್ಲ ಅಗಲಿದ ಮೇರು ನಟ ಪವರ್ ಸ್ಟಾರ್ ಅಪ್ಪು ನೆನೆದು ಅಭಿಮಾನಿಗಳು ಕಣ್ಣೀರು ಸುರಿಸಿದರು, ಮತ್ತೆ ಹುಟ್ಟಿ ಬನ್ನಿ ಅಪ್ಪು ಘೋಷಣೆ ಕೂಗಿದರು.

ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಾಸನ ಜಿಲ್ಲೆಯ ಹಲವಾರು ಗ್ರಾಮಸ್ಥರು ಕಂಬನಿ
ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಾಸನ ಜಿಲ್ಲೆಯ ಹಲವಾರು ಗ್ರಾಮಸ್ಥರು ಕಂಬನಿ

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಇಂಡಸ್ಟ್ರಿಯಲ್ಲಿ ಅಪಾರ ದುರಂತವನ್ನು ತುಂಬಿದೆ. ಈ ಸುದ್ದಿಯನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಪುನೀತ್ ಕುಟುಂಬ ಸದಸ್ಯರ ಸಂಕಷ್ಟವನ್ನು ವಿವರಿಸಲು ಪದಗಳಿಲ್ಲ. ಪುನೀತ್ ರಾಜ್ ಕುಮಾರ್ ಜಿಮ್ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪುನೀತ್ ರಾಜ್ ಕುಮಾರ್ ನಿಧನಕ್ಕೆ ಹಾಸನ ಜಿಲ್ಲೆಯ ಹಲವಾರು ಗ್ರಾಮಸ್ಥರು ಕಂಬನಿ - Kannada News

ಕುಟುಂಬದ ಕೆಲವರು.. ಅದರಲ್ಲೂ ಮಗಳು ಧೃತಿ ವಿದೇಶದಲ್ಲಿದ್ದರು..  ಭಾರತಕ್ಕೆ ಆಗಮಿಸುವುದು ತಡವಾದ ಕಾರಣ ಭಾನುವಾರಕ್ಕೆ ಅಂತ್ಯಕ್ರಿಯೆ ಮುಂದೂಡಲಾಗಿದೆ. ಅಮೆರಿಕದಲ್ಲಿ ನೆಲೆಸಿದ್ದ ಪುನೀತ್ ಪುತ್ರಿ ಧೃತಿ ಶನಿವಾರ ಸಂಜೆ ಭಾರತಕ್ಕೆ ಆಗಮಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಸ್ಟೇಡಿಯಂ ತಲುಪಿದ ಧೃತಿ, ತಂದೆಯ ಶವ ನೋಡಿ ಕಣ್ಣೀರಿಟ್ಟರು… ಆ ಭಾವುಕ ದೃಶ್ಯ ಕರಳು ಹಿಂಡುವಂತಿತ್ತು…

Follow us On

FaceBook Google News