ಪತ್ರಕರ್ತರಿಗೆ ಆಹಾರದ ಕಿಟ್ ವಿತರಿಸಿದ ಶಾಸಕ ಕುಮಾರ್ ಬಂಗಾರಪ್ಪ

MLA Kumar Bangarappa distributed food kit to journalists

ಶಿವಮೊಗ್ಗ : ದೇಶದಲ್ಲಿ ಎರಡನೇ ಬಾರಿಗೆ ಲಾಕ್‌ಡೌನ್ ಜಾರಿಯಾಗಿದ್ದು, ಕೊರೋನಾ ಯೋಧರಾಗಿ ಪತ್ರಕರ್ತರೂ ಜೀವದ ಹಂಗು ತೊರೆದು ಕ್ಷಣ ಕ್ಷಣದ ಮಾಹಿತಿಯನ್ನು ಜನತೆಗೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ವಿಧಾನ ಮಂಡಳದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಚಂದ್ರಹಾಸ ಟ್ರಸ್ಟ್ ವತಿಯಿಂದ ತಾಲ್ಲೂಕು ಕಾರ್ಯನಿರತ ಪತ್ರಕರ್ತರಿಗೆ ಸೋಮವಾರ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.

ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು, ಜನತೆ ಸಂಕಷ್ಟದಲ್ಲಿದ್ದಾರೆ. ಜನತೆಯಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಮತ್ತು ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತಗಳು ಸೇರಿದಂತೆ ಪತ್ರಕರ್ತರು ಹಗಲಿರುಳು ಕೊರೋನಾ ಯೋಧರಾಗಿ ಶ್ರಮಿಸುತ್ತಿದ್ದಾರೆ. ಪತ್ರಕರ್ತರ ಸೇವೆಯನ್ನು ಪರಿಗಣಿಸಿ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಪತ್ರಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ. ಸದಾ ನಿಮ್ಮದೊಂದಿಗೆ ಇರುವುದಾಗಿ ಭರವಸೆ ನೀಡಿದರು.

ಪತ್ರಕರ್ತರಿಗೆ ಆಹಾರದ ಕಿಟ್ ವಿತರಿಸಿದ ಶಾಸಕ ಕುಮಾರ್ ಬಂಗಾರಪ್ಪ - Kannada News

ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಯು.ಎಂ. ನಟರಾಜ್ ಮಾತನಾಡಿ, ಕೊರೋನಾ ಮಹಾಮಾರಿಗೆ ಜಗತ್ತೆ ಸ್ಥಬ್ದವಾಗಿದೆ. ಪತ್ರಕರ್ತರ ಸ್ಥಿತಿಯೂ ಹೊರತಾಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರ ಕಾರ್ಯವನ್ನು ಗುರುತಿಸಿ ಚಂದ್ರಹಾಸ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಕುಮಾರ್ ಬಂಗಾರಪ್ಪ ಅವರು ಆಹಾರದ ಕಿಟ್ ವಿತರಿಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸಂಘದ ವತಿಯಿಂದ ಶಾಸಕರಿಗೆ ಅಭಿನಂದನೆಗಳು ಎಂದರು.

ಅರ್ಜುನ್ ಕುಮಾರ್ ಬಂಗಾರಪ್ಪ, ಪಪಂ ಸದಸ್ಯರಾದ ಎಂ.ಡಿ. ಉಮೇಶ್, ವೀರೇಶ್ ಮೇಸ್ತ್ರೀ, ಮಧುರಾಯ್ ಜಿ. ಶೇಟ್, ಪ್ರಭು ಮೇಸ್ತ್ರಿ, ಯು.ಎನ್. ನಟರಾಜ್, ವಿಜಯಲಕ್ಷ್ಮೀ, ಪ್ರಮುಖರಾದ ಬೋಗೇಶ್ ಶಿಗ್ಗಾದ್, ಟಿ.ಆರ್. ಸುರೇಶ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.

Follow us On

FaceBook Google News

Read More News Today