Basavaraj Horatti, ನನ್ನ ಗೆಲುವು ಖಚಿತ: ಹೊರಟ್ಟಿ ವಿಶ್ವಾಸ

Basavaraj Horatti: ವಿರೋಧಿಗಳು ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ಸಹಜ ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು

ಹುಬ್ಬಳ್ಳಿ (Hubli): ಸೋಲಿಲ್ಲದ ಸರದಾರ ಎಂಬ ಪಟ್ಟ ಮುಂದುವರಿಯತ್ತದೆ. ಪ್ರತಿಪಕ್ಷಗಳು ಏನೇ ಅಪಪ್ರಚಾರ ಮಾಡಿದರೂ ಅದರ ಪರಿಣಾಮ ಆಗುವುದಿಲ್ಲ. ನನ್ನ ಗೆಲುವು ನಿಶ್ಚಿತ. ಶೇಕಡಾ 70ರಷ್ಟು ಮತ ಪಡೆದು ಗೆಲ್ಲುತ್ತೇನೆ, ವಿರೋಧಿಗಳು ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡುವುದು ಸಹಜ ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ (Basavaraj Horatti) ಹೇಳಿದರು.

ದೇಶಪಾಂಡೆ ನಗರದ ರೋಟರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಮಾತನಾಡಿದ ಅವರು, 42 ವರ್ಷಗಳಿಂದ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದೇನೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಅಧಿಕಾರ ನಡೆಸಿದ್ದೇನೆ. ಈ ಸಲವು ಗೆಲುವು ಖಚಿತ. ವಿರೋಧಿಗಳು ಮಾಡಿರುವ ಆರೋಪ ಸಾಬೀತಾದರೆ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಹೇಳಿದರು.

ಬಿಜೆಪಿಯು ಹೊರಟ್ಟಿ ಮತ್ತು ಅವರ ಅನುಭವದ ಸುತ್ತ ಅವರ ಗೆಲುವು ಅಜೇಯ ಎಂಬ ರೀತಿಯಲ್ಲಿ ಪ್ರಚಾರವನ್ನು ನಿರ್ಮಿಸಿದೆ ಮತ್ತು ಗೆಲುವಿನ ಅಂತರವನ್ನು ತಿಳಿಯಲು ಮಾತ್ರ ಚುನಾವಣೆಯನ್ನು ಎದುರಿಸುತ್ತಿದೆ. ಮೇಲಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಸಂಪೂರ್ಣ ನಾಯಕತ್ವ ಅವರ ಬೆನ್ನಿಗೆ ನಿಂತಿದ್ದರಿಂದ ಈ ಬಾರಿ ಅವರ ಪ್ರಚಾರ ಹೆಚ್ಚು ಗೋಚರವಾಯಿತು. ಮತದಾರರ ಮನವೊಲಿಸುವಲ್ಲಿ ಹೊರಟ್ಟಿಯವರು ಎಚ್ಚರಿಕೆಯ ಮಾರ್ಗವನ್ನು ಅನುಸರಿಸಿದ್ದಾರೆ.

Basavaraj Horatti, ನನ್ನ ಗೆಲುವು ಖಚಿತ: ಹೊರಟ್ಟಿ ವಿಶ್ವಾಸ - Kannada News

My win is certain says Basavaraj Horatti

Follow us On

FaceBook Google News

Read More News Today