Welcome To Kannada News Today

30 ಜನರನ್ನ ತುಂಬಿಸಿಕೊಂಡು ರಾಜಸ್ಥಾನ್ ಗೆ ಹೊರಟು ನಿಂತಿದ್ದ ಲಾರಿ ಸೀಜ್!

Police seized a truck loaded with 30 people and left for Rajasthan

🌐 Kannada News :

ಕೊರೋನ ಹಿನ್ನಲೆಯಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಶಿವಮೊಗ್ಗದಲ್ಲಿ ಸಡಿಲಿಕೆ ಕಂಡ ಹಿನ್ನಲೆಯಲ್ಲಿ ಯಾವ ಇಲಾಖೆಗೆ ತಲೆನೋವು ಆಗಿದೆಯೋ ಗೊತ್ತಿಲ್ಲ. ಆದರೆ ಪೊಲೀಸ್ ರಿಗೆ ಮಾತ್ರ ಹೆಚ್ಚಿನ ತಲೆಬಿಸಿಯಾಗಿದೆ. ಕೊರೋನ ವಿರುದ್ಧ ಹೋರಾಡುವ ಜೊತೆಗೆ ಕಾನೂನು ವ್ಯವಸ್ಥೆಯನ್ನೂ ಕಾಪಾಡುವ ಹೊಣೆಗಾರಿಕೆ ಅವರದ್ದಾಗಿದೆ.

ಹೊರ ರಾಜ್ಯದಿಂದ ಕೂಲಿ ಕಾರ್ಮಿಕರು ಹಾಗೂ ಇತರೆ ಕೆಲಸದಿಂದ ಶಿವಮೊಗ್ಗಕ್ಕೆ ಬಂದಿದ್ದವರು ತಿಂಗಳಾನುಗಟ್ಟಲೆ ಇಲ್ಲೇ ಇದ್ದಿದ್ದರ ಪರಿಣಾಮ ಕೊರೋನ ತುರ್ತು ವಾಹನಗಳನ್ನ ದುರ್ಬಳಕೆ ಮಾಡಿಕೊಂಡು ತಮ್ಮ ತಮ್ಮ ಊರುಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೊರೋನ ವೈರಸ್ ಬಗ್ಗೆ ಅರ್ಥ ಮಾಡಿಕೊಳ್ಳದೆ ತಮ್ಮ ಲಾಭಗಳನ್ನಷ್ಟೇ ನೋಡಿಕೊಳ್ಳುತ್ತಿದ್ದಾರೆ.

ರಾಜ ಸ್ಥನದ ಲಾರಿಗಳಲ್ಲಿ ತಮ್ಮ ತಮ್ಮ ಊರಿಗೆ ಹೋಗಲು ಪ್ರಯತ್ನಿಸುತ್ತಿದ್ದ 25-30 ಜನರನ್ನ ತಡೆದು ತಪಾಸಣೆ ನಡೆಸಿದ ದೊಡ್ಡಪೇಟೆ ಪೊಲೀಸರು ವಾಹನವನ್ನ ಸೀಜ್ ಮಾಡಿದ್ದು ಜನರನ್ನ ಕ್ವಾರಂಟೈನ್ ನಲ್ಲಿರಿಸಲಾಗಿದೆ. 25 ಜನರನ್ನ ಮೆಗ್ಗಾನ್ ಕ್ವಾರಂಟೈನ್ ನಲ್ಲಿಡಲಾಗಿದೆ. ದೊಡ್ಡ ಪೇಟೆ ಪೊಲೀಸ್ ಠಾಣೆಗೆ ದೂರವಾಣಿ ಕರೆಬಂದ ಹಿನ್ನಲೆಯಲ್ಲಿ ಮಂಜುನಾಥ ಬಡಾವಣೆಯ ಕೆಎಸ್ ಆರ್ ಟಿಸಿ ಡಿಪೋ ಪಕ್ಕದಲ್ಲಿ ಒಂದು ಲಾರಿಯನ್ನ ನಿಲ್ಲಿಸಿಕೊಂಡು ಅದರಲ್ಲಿ 25-30 ಜನರನ್ನ ತುಂಬಿಸಿಕೊಳ್ಳಲಾಗುತ್ತಿದೆ. ಬೇರೆಡೆ ಇವರುಗಳು ಹೋಗುವ ತಯಾರಿಯಲ್ಲಿದ್ದಾರೆ ಎಂಬ ಮಾಹಿತಿ ಬಂದಿತ್ತು.

ಈ ಮಾಹಿತಿಯನ್ನ ಆಧಾರಿಸಿ ಪಿಎಸ್ಐ ಶಂಕರ್ಮೂರ್ತಿಯವರು ಸ್ಥಳಪರಿಶೀಲನೆ ನಡೆಸಿದಾಗ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವು ಕ್ಷೇತ್ರಕ್ಕೆ ರಿಯಾಯ್ತಿ ನೀಡಿದರೂ ಸಹ ಸಾರಿಗೆಗೆ ಅನುಮತಿ ಇರುವುದಿಲ್ಲ. ಸರ್ಕಾರದ ನಿಯಮಗಳನ್ನ ಉಲ್ಲಂಘನೆ ಮಾಡಿ ಆರ್ ಜೆ 23-ಜಿಎ-3730 ಕ್ರಮಸಂಖ್ಯೆಯ ಲಾರಿಯಲ್ಲಿ ತಮ್ಮ ಊರುಗಳಿಗೆ ತೆರಳಲು ಪ್ರಯತ್ನಿಸುತ್ತಿರುವುದು ಖಾತರಿಯಾಗಿದೆ.

ಈ ಲಾರಿಯು ರಾಜಸ್ಥಾನ್ ದಿಂದ ಮೆಡಿಸಿನ್ ಹೊತ್ತು ವ್ಯಾಪಾರಕ್ಕಾಗಿ ಶಿವಮೊಗ್ಗಕ್ಕೆ ಬಂದಿದ್ದು ಇಲ್ಲಿ ಅನ್ ಲೋಡ್ ಮಾಡಿ ವಾಪಸ್ ರಾಜಸ್ಥಾನ್ ಕ್ಕೆ ಹೋಗುವಾಗ ರಾಜಸ್ಥಾನ್ ಮತ್ತು ಗುಜರಾತಿ ಜನರನ್ನ ಹೊತ್ತುಹೋಗಲು ಪ್ರಯತ್ನಿಸಿರುವುದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಲಾರಿ ಚಾಲಕ ಫೋರೋಜ್(32), ಇನ್ನೋರ್ವ ಚಾಲಕ ಹಾಗೂ ಮಾಲೀಕ ಇಸ್ಮಾನ್ ಉದ್ದೀನ್(23), ಕ್ಲೀನರ್ ಮತ್ತು ಚಾಲಕ ಸೈಜಾದ್ (19) ಮೂವರನ್ನ ಬಂಧಿಸಲಾಗಿದೆ. ಲಾರಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಲಾರಿಯ ಕಂಟೈನರ್ ನಲ್ಲಿ ಕುಳಿತುಕೊಂಡು ಹೋಗುವ ಜನರನ್ನ ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಬಿಡಲಾಗಿದೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.