ತೀರ್ಥಹಳ್ಳಿಯಲ್ಲಿ ವಿನೂತನ ರೀತಿಯಲ್ಲಿ ಮಾಸ್ಕ್ ತಯಾರಿಕೆಗೆ ಚಿಂತನೆ

preparing Mask in Innovative Method in Thirthahalli

ಕೋವಿಡ್-19 ತಡೆಗಟ್ಟಲು ಮಾಸ್ಕ್ ಧರಿಸುವಂತೆ ಸರ್ಕಾರ ಹಾಗೂ ವೈದ್ಯಕೀಯ ಲೋಕ ಸಲಹೆ ನೀಡುತ್ತಿದೆ. ಸಲಹೆ ನೀಡಿದಂತೆ ಮಾರುಕಟ್ಟೆಯಲ್ಲಿ ಮಾಸ್ಕ್ ನ ಅಭಾವ ಎಷ್ಟಿದೆ ಎಂದರೆ ಹೇಳತೀರದು. ಆರಂಭದಲ್ಲಿ ಮಾಸ್ಕ್ ಸಹ ಶಾರ್ಟೇಜ್ ಆದ ಪರಿಣಾಮ ದುಬಾರಿ ಬೆಲೆಗೆ ದೊರೆಯುತ್ತಿತ್ತು. ಆದರೆ ಈಗ ಕೆಲ ಸ್ವಯಂ ಸೇವ ಸಂಸ್ಥೆಗಳೇ ಮಾಸ್ಕ್ ತಯಾರಿಸುವ ಕೆಲಸಕ್ಕೆ ದುಮಿಕಿವೆ.

ತೀರ್ಥಹಳ್ಳಿಯ ಹಳ್ಳಿ ಹಳ್ಳಿಗಳಲ್ಲಿ ಮಾಸ್ಕ್ ಹಂಚಿಕೆ ಮಾಡಲು ಕೆಲ ಸ್ವಯಂ ಸೇವಕ ಸಂಸ್ಥೆಗಳು ಮುಂದುಬಂದಿದ್ದು, ಈ ಸಂಸ್ಥೆ ಬಟ್ಟೆಗಳನ್ನೂ ಸಹ ವಿಶೇಷವಾಗಿ ಆರಿಸುವ ಕಾರ್ಯಕ್ಕೆ ಮುಂದಾಗಿದೆ. ಇದನ್ನ ಹೊಲಿಸುವ ಕೆಲಸವನ್ನೂ ವಿನೂತನ ರೀತಿಯಲ್ಲಿ ಮಾಡುವ ಮೂಲಕ ಮಾದರಿಯಗಿದೆ.

ತೀರ್ಥಹಳ್ಳಿಯ ಹೊನ್ನೇತಾಳು ಶಾಲೆಯ ಎಸ್ ಡಿ ಎಂಸಿ, ಶಿಕ್ಷಕರು ಹಾಗು ಪೋಷಕರ ಬಳಗ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿಗಳು ಮತ್ತು ಸದಸ್ಯರು ಕೊರೋನ ವೈರಸ್ ಹರಡದಂತೆ ಮಾಸ್ಕ್ ತಯಾರಿಸಲು ಮುಂದಾಗಿದ್ದು ಇದರ ಬಟ್ಟೆಗಾಗಿ ದಾನ ಪಡೆದ ಹತ್ತಿ ಬಟ್ಟೆಗಳಿಂದ ತಯಾರಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ವಿನೂತನ ರೀತಿಯಲ್ಲಿ ಮಾಸ್ಕ್ ತಯಾರಿಕೆಗೆ ಚಿಂತನೆ - Kannada News

ಈ ಬಟ್ಟೆಗಳನ್ನ ಪಡೆದ ಸ್ವಯಂ ಸೇವಕ ತಂಡ ಕಮ್ಮರಡಿ ಹಾಗೂ ಶೃಂಗೇರಿ ಬಂಧುಗಳಿಂದ 30 ಟೈಲರ್ ಮೂಲಕ ಹೊಲಿಸಿ 1000 ಮಾಸ್ಕ್ ತಯಾರಿಸಿಕೊಡುವ ಜವಬ್ದಾರಿ ಹೊಂದಿದ್ದಾರೆ. ಈ ಹೊಲಿಗೆ ಕಾರ್ಯಕ್ಕೆ ಗೌರವ ಧನ ನೀಡುವ ಮೂಲಕ ಉದ್ಯೋಗ ಸೃಷ್ಠಿಗೆ ಒತ್ತು ನೀಡಲಾಯಿತು.

ಈ ಮಾಸ್ಕ್ ನ್ನು ತಾಲ್ಲೂಕು ಆಡಳಿತಕ್ಕೆ ನೀಡಿ ಕೊರೋನ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ, ಕಂದಾಯ, ಅರಣ್ಯ,  ಗ್ರಾಮ ಪಂಚಾಯತ್, ಪೌರಕಾರ್ಮಿಕ ಇಲಾಖೆಯ ಸಿಬ್ಬಂದಿಯವರಿಗೆ ಹಾಗೂ ಅಂಗನವಾಡಿ ಸಹಾಯಕರು, ಆಶಾ ಕಾರ್ಯಕರ್ತರಿಗೆ ವಿತರಿಸಲು ನೀಡಲಾಗುತ್ತಿದೆ.

ತದ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಎಸ್‌.ಎಸ್.ಎಲ್.ಸಿ  ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪರೀಕ್ಷಾ ಸಿಬ್ಬಂದಿಯವರಿಗೆ ನೀಡಲು ಚಿಂತಿಸಲಾಗಿದೆ. ಒಟ್ಟಾರೆ ಒಂದು ಸಣ್ಣ ಪ್ರಯತ್ನದ ಮೂಲಕ ಕೊರೋನಾ ಹೋರಾಟದಲ್ಲಿ ಗ್ರಾಮೀಣ ಭಾಗದ ಸಮುದಾಯ ಸಕ್ರಿಯವಾಗಿದೆ. ಇವರಿಗೆ ನೆರವು, ಬೆಂಬಲ ನೀಡುತ್ತಿರುವ ಸಮಸ್ತರನ್ನು ಶ್ರೀ ನಿತ್ಯಾನಂದ್ ಕೆಂದಾಳಬೈಲು ಇವರು ಅಭಿನಂದಿಸಿದ್ದಾರೆ

Follow us On

FaceBook Google News

Read More News Today