Welcome To Kannada News Today

Kannada Sahitya Sammelana: ರಾಮದುರ್ಗ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 9ರಂದು

Kannada Sahitya Sammelana: ರಾಮದುರ್ಗ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಂಗಳವಾರ ಫೆ. 9ರಂದು ಮುಂಜಾನೆ 8 ಗೆಂಟೆಗೆ ಶ್ರೀ ರಾಮೇಶ್ವರ ಸಭಾ ಭವನ ಹುಲಕುಂದ ಗ್ರಾಮದಲ್ಲಿ ಜರುಗಲಿದೆ.

(Kannada News) : Kannada Sahitya Sammelana: ಬೆಳಗಾವಿ : ರಾಮದುರ್ಗ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಂಗಳವಾರ ಫೆ. 9ರಂದು ಮುಂಜಾನೆ 8 ಗೆಂಟೆಗೆ ಶ್ರೀ ರಾಮೇಶ್ವರ ಸಭಾ ಭವನ ಹುಲಕುಂದ ಗ್ರಾಮದಲ್ಲಿ ಜರುಗಲಿದೆ.

ಹುಲಕುಂದ ಗ್ರಾಮದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಮುಂಜಾನೆ 8:30ಕ್ಕೆ ಶ್ರೀ ರಾಮೇಶ್ವರ ಶಿಕ್ಷಣ ಸಂಸ್ಥೆ ಹುಲಕುಂದ ಆಡಳಿತಾಧಿಕಾರಿಗಳು ಸಿ. ಬಿ. ಹಿರೇಮಠ ಅವರು ಭುವನೇಶ್ವರಿ ದೇವಿ ಭಾವಚಿತ್ರದ ಪೂಜೆ ನೆರವೇರಿಸುವರು.

ಮ.ಘ.ಚ.ಶ್ರೀ.ಅದೃಶ್ಯ ಪವಾಡೇಶ್ವರ ಮಹಾಸ್ವಾಮಿಗಳು ಮರಡಿಮಠ ಗೋಕಾಕ ಮತ್ತು ಶ.ಬ್ರ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬ್ರಹ್ಮನ್ಮಠ ಚಿಪ್ಪಲಕಟ್ಟಿ-ಸಾಲಹಳ್ಳಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಮಾನ್ಯ ಶಾಸಕರಾದ ಮಹಾದೇವಪ್ಪ ಯಾದವಾಡ ಅವರು ಸಮ್ಮೇಳನ ಉದ್ಘಾಟನೆಯನ್ನು ಮಾಡಲಿದ್ದಾರೆ.

ಸಾಹಿತಿಗಳಾದ ಡಾ. ರಾಜೇಂದ್ರ ಅಣ್ಣಾನವರ ಅವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದು, ನಿವೃತ್ತ ಉಪ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಜಿ. ಬಿ. ಗೌಡಪ್ಪಗೋಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಆಶಯ ನುಡಿ ಮಂಡಿಸುವರು. ಶ್ರೀಮತಿ ಶಕುಂತಲಾ ವಡ್ಡರ, ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಕೃಷ್ಣಪ್ಪ ಲಮಾಣಿ, ಶ್ರೀಮತಿ ಶಿವಕ್ಕ ಬೆಳವಡಿ, ಮಾರುತಿ ತುಪ್ಪದ, ಜಹೂರ ಹಾಜಿ, ಶ್ರೀಮತಿ ಲಕ್ಷö್ಮವ್ವ ವಾರಿಮನಿ, ಹನುಮಂತ ವಗ್ಗನ್ನವರ ಅತಿಥಿಗಳಾಗಿ ಆಗಮಿಸುವರು.

ಸಮ್ಮೇಳನದಲ್ಲಿ ಗ್ರಂಥ ಲೋಕಾರ್ಪಣೆ, ವೈಚಾರಿಕ ಗೋಷ್ಠಿ, ಕವಿಗೋಷ್ಠಿ, ಸಂಸ್ಕೃತಿ ಸೌರಭ, ಸಮಾರೋಪ ಸಮಾರಂಭ ನಡೆಯಲಿದ್ದು, ಕ.ಸಾ.ಪ ಎಲ್ಲ ತಾಲೂಕಾ ಅಧ್ಯಕ್ಷರುಗಳು ಉಪಸ್ಥಿತರಿರುವರು.

ಈ ಕಾರ್ಯಕ್ರಮಕ್ಕೆ ಸಮಸ್ತ ಕನ್ನಡಾಭಿಮಾನಿಗಳು ಆಗಮಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ಡ ಮತ್ತು ರಾಮದುರ್ಗ ತಾಲೂಕು ಅಧ್ಯಕ್ಷರಾದ ಪಾಂಡುರಂಗ ಜಟಗನ್ನವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Web Title : Ramdurg Taluk 8th Kannada Sahitya Sammelana on 9th February

Contact for web design services Mobile