Welcome To Kannada News Today

ಬಾರ್ ಓಪನ್, ಸಾವಿರಾರು ಹೆಂಗಳೆಯರಿಗೆ ಇಂದು ಕರಾಳ ದಿನ !

ಕೊರೋನಾ ಕಾರಣದಿಂದಾದರೂ ನೆಮ್ಮದಿಯಿಂದ ಇದ್ದ ಹೆಂಗಳೆಯರು, ಬಾರ್ ಓಪನ್ ಎಂದೆಡೆ, ಇದು ನಮ್ಮ ಕರಾಳ ದಿನವೇ ಎಂದು ಮರುಗಿದ್ದಾರೆ.

🌐 Kannada News :

ಬೆಂಗಳೂರು : ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆ ರಾಜ್ಯ ಸರ್ಕಾರ ಇಂದಿನಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮದ್ಯ ಸಿಗುತ್ತೆ ಅಂತ ಕೇಳಿದ್ದೇ ತಡ, ಕುಡುಕರು ಒಮ್ಮೆ ತಮ್ಮನ್ನೇ ತಾವು ಚಿವಿಟಿ ಕೊಂಡು, ಇದು ಕನಸ ಇಲ್ಲಾ ನಿಜಾನಾ ಅಂತ ತಮ್ಮಲ್ಲಿ ತಾವೇ ಪರೀಕ್ಷೆ ಮಾಡಿಕೊಂಡವ್ರೆ….

ಇನ್ನು ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಬಾರಿ ಸೌಂಡ್ ಮಾಡಿದ್ದು, ಮಾನ್ಯ ಯಡಿಯೂರಪ್ಪನವರು ಆರ್ಥಿಕ ಸ್ಥಿತಿ ಸರಿದೂಗಿಸುವ ಜವಾಬ್ದಾರಿಯನ್ನು ಕುಡುಕರ ಬೆನ್ನಿಗೆ ಕಟ್ಟಿದ್ದಾರೆ ಎಂಬ ಟೀಕೆಗಳು ಹಾಸ್ಯಗಳು ವ್ಯಕ್ತವಾಗಿವೆ.. ಕೊರೋನಾ ರಾಜ್ಯದಲ್ಲಿ ಕಡಿಮೆ ಇದ್ದಾಗ ಕಟ್ಟು ನಿಟ್ಟಿನ ಲಾಕ್ ಡೌನ್ ಫಾಲಿಸಲಾಗಿತ್ತು, ಆದರೆ ಇದೀಗ ಕೊರೋನಾ ದಿನದಿಂದ ದಿನಕ್ಕೇರು ಗತಿಯಲ್ಲಿ ಆತಂಕ ಸೃಷ್ಟಿಸಿದೆ, ಈ ಸಮಯದಲ್ಲಿ ಬಾರ್ ಓಪನ್ ಆದ್ರೆ…..

ಇದೆಲ್ಲಾ ಒಂದು ಕಡೆ ಆದರೆ ಇನ್ನೊಂದೆಡೆ, ಅಯ್ಯೋ.. ನನ್ನ ಗಂಡ, ದೇವರ ತರ ಬಂದ ಕೊರೋನಾ ಇಂದ ಇಷ್ಟು ದಿನ ಕುಡಿಯದೆ ಇದ್ದ, ಈಗ ನಮ್ಮ ಬದುಕು ಇನ್ನಷ್ಟು ಹೀನಾಯ ಆಗೋದು ಗ್ಯಾರಂಟಿ, ಭಗವಂತ… ಅಂತ ಮನಸ್ಸಲ್ಲೇ ಕೊರಗುತ್ತಿದ್ದರೆ, ತಂಗಿ, ಅಮ್ಮ, ಮಗಳು ಹೀಗೆ ತಮ್ಮ ಮನೆಯ ಸದಸ್ಯ ಇಂದಿನಿಂದ ಕುಡಿಯುತ್ತಾನೆ ಎಂಬ ಭಯದಿಂದ ಈ ದಿನವನ್ನ ಕರಾಳ ದಿನವೆಂದೇ ಭಾವಿಸುತ್ತಾಳೆ.

ಮದ್ಯ ಮಾರಾಟ ಸ್ಥಗಿತ ಅದೆಷ್ಟೋ ಮನೆಗಳ, ಅದೆಷ್ಟೋ ಸಂಸಾರಗಳ, ಅಷ್ಟೇಕೆ ಅದೆಷ್ಟೋ ಜೀವಗಳ ಉಳಿಸಿತ್ತು, ಆದರೆ ಅವೆಲ್ಲಾ ಕೇವಲ ಕ್ಷಣಿಕ ಎಂದು ತಿಳಿಯದ ಆ ಹೆಣ್ಣು ಸಂತಸ ಪಟ್ಟಿದ್ದಳು…. ಇದೆ ನನ್ನ ಪೂರ್ಣ ಜೀವನ ಮುಂದುವರಿಯಲಿ ಅಂತಾ ಭಗವಂತನಲ್ಲಿ ಮೊರೆ ಇಟ್ಟಿದಳು…. ಆದರೆ ?

📣 ಇನ್ನಷ್ಟು ಕನ್ನಡ ಇಂಡಿಯಾ ನ್ಯೂಸ್ ಗಳಿಗಾಗಿ India News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today