Welcome To Kannada News Today

ಶಾಕಿಂಗ್, ಹುಬ್ಬಳ್ಳಿಯಲ್ಲಿ ಕೊರೋನಾ ಸೋಂಕಿತನಿಂದ ಆಹಾರ ಧಾನ್ಯ ವಿತರಣೆ

Shocking, food distribution from Corona infected Person in Hubli

🌐 Kannada News :

ಸೋಂಕಿನ ಬಗ್ಗೆ ಅರಿವಿಲ್ಲದ ಸೋಂಕಿತ ತನ್ನ ಗೆಳೆಯರೊಂದಿಗೆ ಸೇರಿ ಆಹಾರ, ದಿನಸಿ ಹಂಚಿರುವ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಇದೀಗ ಆ ವ್ಯಕ್ತಿಯಿಂದ ದಿನಸಿ ಪಡೆದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಹುಬ್ಬಳ್ಳಿ : ಹುಬ್ಬಳ್ಳಿಯ ಮುಲ್ಲಾ ಓಣಿಯ ಕೋವಿಡ್-19 ಸೋಂಕಿತ P-236, ಸಾರ್ವಜನಿಕರಿಗೆ ದಿನಸಿ ವಿತರಿಸಿದ್ದಾರೆ. ಸೋಂಕಿತ ವ್ಯಕ್ತಿ ತಮ್ಮ ಗೆಳೆಯರು, ಬಂಧುಗಳ ಜತೆಗೂಡಿ ಮಾ. 27 ರಂದು ಮುಲ್ಲಾ ಓಣಿಯ ಡಾಕಪ್ಪಾ ಸರ್ಕಲ್ ನಿಂದ ಕಾಳಮ್ಮನ ಅಗಸಿಯವರೆಗೆ ಆಹಾರ ಸಾಮಗ್ರಿ ವಿತರಿಸಿದ್ದಾರೆ.

5 ಕೆಜಿ ಅಕ್ಕಿ , 2 ಕೆಜಿ ತೊಗರಿಬೇಳೆ, 1 ಕೆಜಿ ಸಕ್ಕರೆ, 2 ಕೆಜಿ ಗೋದಿ, 250 ಗ್ರಾಂ ಚಹಾಪುಡಿ ವಿತರಿಸಿದ್ದಾರೆ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದೆ.

ಪಡಿತರ ಪಡೆದ ಸಾರ್ವಜನಿಕರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆಯಿದ್ದು, ಸಂಬಂಧಪಟ್ಟವರು ಕೂಡಲೇ ಕೊರೊನಾ ಸಹಾಯವಾಣಿ 10771 ಕರೆಮಾಡಿ ಪರೀಕ್ಷೆಗೆ ಒಳಪಡಬೇಕು ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Web Title : Shocking, food distribution from Corona infected Person in Hubli

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.