ಹಿಮಾಲಯ ಫ್ರೆಷ್ ಸ್ಟಾರ್ಟ್ ಫೌಂಡೇಶನ್, ಜೈಪುರ ಫೂಟ್ ಮತ್ತು ರೋಟರಿ ಇಂಟರ್‍ನ್ಯಾಷನಲ್ ಸಾಮಾಜಿಕ ಕಳಕಳಿ

Social anxiety of Himalaya Fresh Start Foundation, Jaipur Foot and Rotary International

ಹಿಮಾಲಯ ಫ್ರೆಶ್ ಸ್ಟಾರ್ಟ್ ಫೌಂಡೇಶನ್, ಭಗವಾನ್ ಮಹಾವೀರ ವಿಕಲಾಂಗ ಸಹಾಯತಾ ಸಮಿತಿ (ಜೈಪುರ ಫೂಟ್) ಮತ್ತು ರೋಟರಿ ಇಂಟರ್‍ನ್ಯಾಷನಲ್ ಸಹಯೋಗದೊಂದಿಗೆ ದೈಹಿಕ ವಿಕಲ ಚೇತನರಿಗೆ ಮತ್ತು ಪೋಲಿಯೊ ಪೀಡಿತರಿಗೆ ಉಚಿತ ಕೃತಕ ಕಾಲು ಮತ್ತು ಕ್ಯಾಲಿಪರ್ಸ್ ವಿತರಿಸಿ ರಾಜ್ಯಾದ್ಯಂತ ಸುಮಾರು 300 ಮಂದಿ ಚಲನಶೀಲರನ್ನಾಗಿ ಮಾಡಿದೆ.

ಉಚಿತ ಕೃತಕ ಕಾಲು, ಮುಂಗೈ ಮತ್ತು ಕ್ಯಾಲಿಪರ್ಸ್ ಅಳವಡಿಕೆ ಮೆಗಾ ಶಿಬಿರ ಆಯೋಜಿಸುವ ಮೂಲಕ ಜನರ ಬಳಿಗೆ ತೆರಳಿದ್ದು, ಅಂಗವಿಕಲರ ಉಚಿತ ತಪಾಸಣೆ ಮತ್ತು ಅವರ ವಿಶೇಷ ಅಗತ್ಯತೆಗೆ ಅನುಗುಣವಾದ ಕಾಲುಗಳನ್ನು ಫಲಾನುಭವಿಗಳಿಗೆ ಸಿದ್ಧಪಡಿಸಿ ನೀಡುವ ಮೂಲಕ ವಿಕಲ ಚೇತನರು ಅಂಗವೈಕಲ್ಯವನ್ನು ಮೆಟ್ಟಿ ನಿಲ್ಲುವಂತೆ ಮಾಡಿ ಅವರ ಜೀವನ ಮತ್ತು ಕನಸುಗಳನ್ನು ಹೊಸದಾಗಿ ಆರಂಭಿಸಲು ಅನುವು ಮಾಡಿಕೊಡಲಾಗುತ್ತದೆ.

Social anxiety of Himalaya Fresh Start Foundation, Jaipur Foot and Rotary International
Social anxiety of Himalaya Fresh Start Foundation, Jaipur Foot and Rotary International
ಯಾವುದೇ ಬಗೆಯ ಅಂಗವೈಕಲ್ಯ ಹೊಂದಿದವರನ್ನು ಸಬಲೀಕರಿಸಲು ಮತ್ತು ಸಶಕ್ತಗೊಳಿಸಲು ಬದ್ಧವಾಗಿದೆ. ಸಣ್ಣ ನಗರಗಳ ಅಂಗವಿಕಲರಲ್ಲಿ ಬಹಳಷ್ಟು ಮಂದಿಗೆ ಕೃತಕ ಕಾಲುಗಳ ಬಗ್ಗೆ ಮಾಹಿತಿ ಇಲ್ಲ ಅಥವಾ ಅವುಗಳನ್ನು ಖರೀದಿಸುವ ಚೈತನ್ಯ ಅವರಲ್ಲಿ ಇಲ್ಲ ಎನ್ನುವುದು ನಮಗೆ ಮನವರಿಕೆಯಾಗಿದೆ. ಈ ಕಾರಣದಿಂದ ಫಲಾನುಭವಿಗಳಿಗೆ ಅವರ ಮನೆಬಾಗಿಲಲ್ಲೇ ವಿಶ್ವದರ್ಜೆಯ ಕೃತಕ ಕಾಲು ಜೋಡಣೆ ಮಾಡಲು ಅನುಕೂಲ ಕಲ್ಪಿಸಬೇಕು ಎಂಬ ದೃಷ್ಟಿಯಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅವರ ಬದುಕಿನಲ್ಲಿ ಕಲ್ಯಾಣ ಮತ್ತು ಸಂತೋಷವನ್ನು ತರುವುದು ನಮ್ಮ ಧ್ಯೇಯ” ಎಂದು ಹಿಮಾಲಯ ಡ್ರಗ್ ಕಂಪನಿಯ ಗ್ರಾಹಕ ಉತ್ಪನ್ನ ವಿಭಾಗದ ವಹಿವಾಟು ನಿರ್ದೇಶಕ ರಾಜೇಶ್ ಕೃಷ್ಣಮೂರ್ತಿ ಹೇಳಿದರು.