Bagalkot Accident: ಬಾಗಲಕೋಟೆ ಬಳಿ ಟ್ರ್ಯಾಕ್ಟರ್ ಅಪಘಾತ, 3 ಮಂದಿ ಸಾವು

Bagalkot Accident: ಬಾಗಲಕೋಟೆ ಜಿಲ್ಲೆಯ ಮುಧೋಳಕ್ಕೆ ಬರುತ್ತಿದ್ದಾಗ 2 ಟ್ರ್ಯಾಕ್ಟರ್‌ಗಳು ಡಿಕ್ಕಿ ಹೊಡೆದಿವೆ. ಟ್ರ್ಯಾಕ್ಟರ್ ಮತ್ತೊಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಸಮೀಪದ ಕಬ್ಬಿನ ಗದ್ದೆಗೆ ಪಲ್ಟಿಯಾಗಿದೆ.

ಬಾಗಲಕೋಟೆ (Bagalkot Accident): ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಬಾಗಲಕೋಟೆ ಜಿಲ್ಲೆಯ ಬನಹಟಿ ಸಮೀಪದ ಗ್ರಾಮದ 20ಕ್ಕೂ ಹೆಚ್ಚು ಜನರು ಟ್ರ್ಯಾಕ್ಟರ್‌ಗಳಲ್ಲಿ ತೆರಳುತ್ತಿದ್ದರು. ಉತ್ಸವ ಮುಗಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೆಳಗಾವಿಯಿಂದ ಟ್ರ್ಯಾಕ್ಟರ್‌ನಲ್ಲಿ ಬಾಗಲಕೋಟೆಗೆ ತೆರಳಿದರು.

ನಿನ್ನೆ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮುಧೋಳಕ್ಕೆ ಬರುತ್ತಿದ್ದಾಗ 2 ಟ್ರ್ಯಾಕ್ಟರ್‌ಗಳು ಡಿಕ್ಕಿ ಹೊಡೆದಿವೆ. ಟ್ರ್ಯಾಕ್ಟರ್ ಮತ್ತೊಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಸಮೀಪದ ಕಬ್ಬಿನ ಗದ್ದೆಗೆ ಪಲ್ಟಿಯಾಗಿದೆ.

ಈ ಭೀಕರ ಅಪಘಾತದಲ್ಲಿ 3 ಜನರು ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪಡೆದ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಟ್ರ್ಯಾಕ್ಟರ್ ಚಾಲಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗ್ರಾಮಕ್ಕೆ ವಾಪಸಾಗಲು 15 ನಿಮಿಷ ಬಾಕಿ ಇರುವಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tractors collide near Bagalkot; 3 people died