ಪೊಲೀಸರಿಗೆ ಬೈಕ್ ಗುದ್ದಿ, ಎಸ್ಕೇಪ್ ಆದ ಅಪರಿಚಿತ ಯುವಕರು
triple riding Youths hit police in Shimoga
ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ಡಿಕ್ಕಿಯಾಗಿಸಿ ಸ್ಥಳದಿಂದ ಪಾಲಾಯನವಾಗಿರುವ ಮೂವರು ಅಪರಿಚಿತ ಯುವಕರ ಪತ್ತೆಗೆ ಬಲೇ ಬೀಸಲಾಗಿದೆ.
ಶಿವಮೊಗ್ಗ : ಕರ್ನಾಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನಾವೈರಸ್ ಸೋಂಕು ತಡೆಯಲು ರಾಜ್ಯದಾದ್ಯಂತ ಕಟ್ಟೆಚ್ಚರ ವಿಧಿಸಿದೆ, ಬೆಂಗಳೂರು, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಹಲವಾರು ಜಿಲ್ಲೆಗಳನ್ನು ರೆಡ್ ಜೋನ್ ಆಗಿ ಗುರುತಿಸಿ ತೀವ್ರ ನಿಗಾವಹಿಸಲಾಗಿದೆ. ಪೊಲೀಸರು ರಾತ್ರಿ ಹಗಲೆನ್ನದೆ ಸೇವೆಯಲ್ಲಿದ್ದಾರೆ.
ಈಗೆ ಸೇವೆ ಸಲ್ಲಿಸುವ ಪೊಲೀಸರ ಮೇಲೆ ಮಾಡುವ ಪ್ರಕರಣಗಳು ಕೇಳಿಬರುತ್ತಿವೆ, ಅಂತಹದ್ದೇ ಪ್ರಕರಣವೊದರಲ್ಲಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ರವರ ಖಡಕ್ ಸೂಚನೆ ಮೇರೆಗೆ ಜಿಲ್ಲಾ ಗಡಿಯಲ್ಲಿರುವ ಚೆಕ್ ಪೋಸ್ಟ್ ಗಳು ಬಿಗಿಯಾಗಿವೆ. ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಬೈಕ್ ಗುದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಇಂದು ಮಧ್ಯಾಹ್ನ ಊರಗಡೂರು ಚೆಕ್ ಪೋಸ್ಟ್ ನಲ್ಲಿ ತುಂಗಾ ಠಾಣೆಯ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಎಂಆರ್ ಎಸ್ ಕಡೆಯಿಂದ ಬಂದ ಬೈಕ್ ಸವಾರರು ಚೆಕ್ ಪೋಸ್ಟ್ ಬಳಿ ಬಂದು ಪಿಸಿ ಚಿದಾನಂದರವರಿಗೆ ಗುದ್ದಿರುವ ಘಟನೆ ವರದಿಯಾಗಿದೆ.
ತ್ರಿಬಲ್ ರೈಡಿಂಗ್ ನಲ್ಲಿದ್ದ ಮೂವರು ಯಾರು ಎಂದು ಇನ್ನೂ ತಿಳಿದುಬದಿಲ್ಲ. ತ್ರಿಬಲ್ ರೈಡಿಂಗ್ ನಲ್ಲಿ ಬಂದವರು ಚಿದಾನಂದವರಿಗೆ ಗುದ್ದಿ ಬೈಕ್ ಹಾಗೂ ಮೊಬೈಲ್ ಬಿಟ್ಟು ಪರಾರಿಯಾಗಿದ್ದಾರೆ. ಚಿದಾನಂದ್ ರವರಿಗೆ ಗಾಯಗಳಾಗಿದ್ದು ಅವರನ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ, ಯುವಕರ ಪತ್ತೆಗೆ ತನಿಖೆ ನಡೆದಿದೆ.
Follow us On
Google News |