ನಿಮ್ಮ ಖಾತೆಗೆ ಇನ್ನು 2,000 ರೂ. ಡಿಬಿಟಿ ಆಗಿಲ್ವಾ? ರೇಷನ್ ಕಾರ್ಡ್ (ration card correction) ನಲ್ಲಿ ತಿದ್ದುಪಡಿ ಆಗಿದ್ದು ಇನ್ನೂ ಅಪ್ಡೇಟ್ ಆಗಿಲ್ವಾ? ಎಲ್ಲಾ ದಾಖಲೆಗಳು ಸರಿಯಾಗಿಯೇ ಇದೆ ಆದರೂ ನಿಮ್ಮ ಖಾತೆಗೆ ಮಾತ್ರ ಹಣ ಬಂದು ಸೇರಿಲ್ವಾ?

ಇಂತಹ ಹಲವು ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಇರಬಹುದು, ಆದರೆ ಅದಕ್ಕಾಗಿ ಹೆಚ್ಚು ತಲೆಬಿಸಿ ಮಾಡಿಕೊಳ್ಳುವುದು ಬೇಡ. ಸರ್ಕಾರ ಇದಕ್ಕೆಲ್ಲ ಒಂದು ಉತ್ತಮ ಪರಿಹಾರ ಸೂಚಿಸಿದೆ. ಮೊದಲಿನ ಕಂತಿನ ಹಣ ಆಗಸ್ಟ್ 30 ರಿಂದಲೇ ಗೃಹಿಣಿಯರಿಗೆ ಕೊಡಲು ಸರ್ಕಾರ ಆರಂಭಿಸಿದೆ. ಈಗಾಗಲೇ 20 ದಿನಗಳು ಕಳೆದರೂ ಕೂಡ 2,000 ರೂ. ಎಲ್ಲಾ ಫಲಾನುಭವಿ ಗೃಹಿಣಿಯರ ಖಾತೆಗೆ ವರ್ಗಾವಣೆ ಆಗಿಲ್ಲ.

Gruha Lakshmi Yojana

ನೀವಿನ್ನೂ ಅರ್ಜಿ ಹಾಕಿಲ್ವಾ? ಗೃಹಲಕ್ಷ್ಮಿ ಯೋಜನೆ ಅರ್ಜಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತ! ಕಾರಣ ಇಲ್ಲಿದೆ

ಸದ್ಯದಲ್ಲಿಯೇ ಜಮಾ ಆಗಲಿದೆ ಮೊದಲ ಕಂತಿನ ಹಣ

ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ಸರ್ಕಾರದಿಂದ ಕೆಲವೊಂದಿಷ್ಟು ಕಾರಣಗಳಿಗಾಗಿ ಗೃಹಲಕ್ಷ್ಮಿ ಯೋಜನೆಯ (gruha Lakshmi Yojana) ಹಣವನ್ನು ನಿಮ್ಮ ಖಾತೆಗೆ ಹಾಕುವಲ್ಲಿ ವಿಳಂಬವಾಗುತ್ತಿದೆ. ಆದರೆ ರಾಜ್ಯದಲ್ಲಿ ಮೊದಲ ಬಾರಿಗೆ ಈ ಯೋಜನೆ ಜಾರಿಗೆ ಬಂದಿದ್ದು ಸದ್ಯದಲ್ಲಿಯೇ ಎಲ್ಲವನ್ನು ಸರಿಪಡಿಸಿಕೊಂಡು ಫಲಾನುಭವಿ ಗೃಹಿಣಿಯರ ಖಾತೆಗೆ ಮೊದಲ ಕಂತಿನ ಹಣವನ್ನು (first installment) ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದಾಖಲೆಗಳ ತಿದ್ದುಪಡಿ (document correction) ಆಗಿದೆಯೇ

ಬ್ಯಾಂಕುಗಳಲ್ಲಿ ಕೆಲವರು ಖಾತೆ (bank account) ಹೊಂದಿದ್ದರೂ ಕೂಡ ಅದು ಆಕ್ಟಿವ್ ಆಗಿಲ್ಲ ಹಾಗಾಗಿ ಇಂತಹ ಖಾತೆಯನ್ನು ನೀವು ಹೊಂದಿದ್ದರೆ ತಕ್ಷಣವೇ ಅದನ್ನು ಆಕ್ಟಿವ್ ಮಾಡಿಕೊಳ್ಳಿ. ಬ್ಯಾಂಕುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಖಾತೆ ಹೊಂದಿದ್ದರೆ ಒಂದು ಖಾತೆಗೆ ಎನ್‌ಪಿಸಿಐ ಮಾಡಿಸಿಕೊಂಡು ಇನ್ನೊಂದು ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿರದೆ ಇರಬಹುದು.

ಆದರೆ ಆಧಾರ್ ಸೀಡಿಂಗ್ ಆಗಿರದೆ ಇರುವ ಖಾತೆಗೆ (Bank Account) ಸರ್ಕಾರ ಹಣ ಜಮಾ ಮಾಡಿರಬಹುದು. ಇದರಿಂದಾಗಿಯೂ ಸರ್ಕಾರದ Gruha Lakshmi Scheme ಹಣ ನಿಮ್ಮ ಖಾತೆಗೆ ಬಂದಿದ್ದರು ಅದು ನಿಮ್ಮ ಕೈ ಸೇರಿರುವುದಿಲ್ಲ.

ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ಲದ ಮಹಿಳೆಯರಿಗೆ ಮತ್ತೊಂದು ಅಪ್ಡೇಟ್ ಕೊಟ್ಟ ಸರ್ಕಾರ

ಇನ್ನು ರೇಷನ್ ಕಾರ್ಡ್ ನಲ್ಲಿ ಕೆಲವು ತಿದ್ದುಪಡಿಗಳು ಕೂಡ ಆಗಬೇಕು ಸರ್ಕಾರ ಇದಕ್ಕೂ ಅವಕಾಶ ಮಾಡಿಕೊಟ್ಟಿತ್ತು. ನೀವು ಇನ್ನೂ ಈ ತಿದ್ದುಪಡಿ ಮಾಡಿಕೊಳ್ಳದೆ ಇದ್ದಲ್ಲಿ ಅಥವಾ ತಿದ್ದುಪಡಿ ಮಾಡಿಕೊಂಡು ಅದು ಅಪ್ಡೇಟ್ (update) ಆಗದೆ ಇರುವ ಪಕ್ಷದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗಲು ಸಾಧ್ಯವಿಲ್ಲ.

ಸರ್ಕಾರ ಈಗಾಗಲೇ ತಿಳಿಸಿರುವಂತೆ ಸೆಪ್ಟೆಂಬರ್ ತಿಂಗಳ ಕೊನೆಯ ಒಳಗೆ ಪ್ರತಿಯೊಬ್ಬ ಫಲಾನುಭವಿ ಗ್ರಹಿಣಿಯರ ಖಾತೆಗೆ ಸಾವಿರ ರೂಪಾಯಿಗಳು ಜಮಾ ಆಗುತ್ತವೆ. ಒಂದು ವೇಳೆ ಸಪ್ಟೆಂಬರ್ ತಿಂಗಳಿನಲ್ಲಿ ಯಾರ ಖಾತೆಗೆ ಮೊದಲ ಕಂತಿನ ಹಣ ಬಂದಿಲ್ಲವೋ ಅಂತವರಿಗೆ ಎರಡು ಕಂತಿನ ಹಣವನ್ನು ಸೇರಿಸಿ 4,000 ರೂ.ಗಳನ್ನು ಅಕ್ಟೋಬರ್ ತಿಂಗಳಿನಲ್ಲಿ ಜಮಾ ಮಾಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಎಲ್ಲಾ ಸರಿ ಇದ್ರೂ ಹಣ ಬರುತ್ತಿಲ್ಲ

Gruha Lakshmi Yojaneಇದು ಹಲವರಲ್ಲಿ ಇರುವ ಗೊಂದಲ. ನಮ್ಮ ಬಳಿ ಎಲ್ಲಾ ದಾಖಲೆಗಳು ಕೂಡ ಸರಿಯಾಗಿಯೇ ಇದೆ ಆದರೂ ಇನ್ನೂ ಹಣ ಜಮಾ ಆಗಿಲ್ಲ ಅಂತ ಹಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಸರ್ಕಾರ ಉತ್ತಮ ಪರಿಹಾರ ಒಂದನ್ನು ನೀಡಿದ್ದು ನೀವು ಎಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರೋ ಅದೇ ಸೇವ ಕೇಂದ್ರಕ್ಕೆ ಹೋಗಿ ನಿಮ್ಮ ಅರ್ಜಿಯ ಸ್ಟೇಟಸ್ (Gruha Lakshmi Scheme Application Status) ತಿಳಿದುಕೊಳ್ಳಬಹುದು.

ಇವರಿಗಿಲ್ಲ ಗೃಹಲಕ್ಷ್ಮಿ ಹಣ! 1 ಲಕ್ಷ ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್‌ ತಿದ್ದುಪಡಿ ಅರ್ಜಿಗಳು ತಿರಸ್ಕೃತ

ಅರ್ಜಿ ಸ್ಟೇಟಸ್ ಅನ್ನು ಆನ್ಲೈನ್ ಮೂಲಕ ತಿಳಿದುಕೊಳ್ಳಲು ಸಾಧ್ಯವಿಲ್ಲ ಆದರೆ ಸೇವಾ ಕೇಂದ್ರಗಳಾದ ಬಾಪೂಜಿ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಿಗೆ ಸರ್ಕಾರ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಯೂಸರ್ ಐಡಿ ಹಾಗೂ ಪಾಸ್ವರ್ಡ್ ಕೊಟ್ಟಿರುತ್ತದೆ. ಹಾಗಾಗಿ ನಿಮ್ಮ ಆರ್ ಸಿ ನಂಬರ್ ಅಥವಾ ಅರ್ಜಿ ಸಲ್ಲಿಸುವಾಗ ಕೊಟ್ಟಿರುವ ಸ್ವೀಕೃತಿ ಪ್ರತಿಯನ್ನು ತೆಗೆದುಕೊಂಡು ಹೋಗಿ ಸೇವಾ ಕೇಂದ್ರಗಳಲ್ಲಿ ತೋರಿಸಿ ನಿಮ್ಮ ಅಪ್ಲಿಕೇಶನ್ ಸ್ಥಿತಿ ತಿಳಿದುಕೊಳ್ಳಬಹುದು.

ಇಲ್ಲಿ ನೀವು ಅರ್ಜಿ ಹಾಕಿರುವುದು ಸರಿಯಾಗಿ ಇದೆಯೋ ಇಲ್ಲವೋ ಅಥವಾ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕೋ? ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ಮೊದಲಾದ ಮಾಹಿತಿಗಳು ಲಭ್ಯವಾಗುತ್ತದೆ. ಇದರಿಂದ ನೀವು ಯಾವ ರೀತಿ ಗೃಹಲಕ್ಷ್ಮಿ ಹಣವನ್ನು ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ನಿಮಗೆ ಸಿಗುತ್ತದೆ.

Try this, in just 2 days Gruha Lakshmi money ₹2,000 will be credited to your account