ಅಧಿಕಾರ ದುರುಪಯೋಗ ಹಾಗೂ ದುರ್ನಡತೆ ಹಿನ್ನಲೆಯಲ್ಲಿ ಇಬ್ಬರು ಪೇದೆಗಳು ಅಮಾನತು

ಮದ್ಯ ಮಾರಾಟದ ವಿಚಾರವಾಗಿ ಅಧಿಕಾರ ದುರುಪಯೋಗ ಹಿನ್ನೆಲೆ ಇಬ್ಬರು ಪೇದೆಗಳ ಅಮಾನತು ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗ : ಕೊರೋನ ಹಿನ್ನಲೆಯಲ್ಲಿ ಘೋಷಣೆಗೊಂಡ ಲಾಕ್ ಡೌನ್ ನಲ್ಲಿ 44 ದಿನಗಳ ಕಾಲ ಸರಿ ಇದ್ದ ಎಲ್ಲಾ ಕ್ಷೇತ್ರಗಳು ಮದ್ಯದ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ನಂತರ ಕೆಟ್ಟು ಕುಲಗೆಟ್ಟು ಹೋಗಿವೆ ಎಂದರೆ ತಪ್ಪಾಗಲಾರದು. ಮದ್ಯದ ಹೊಡೆತ ಶಿವಮೊಗ್ಗದಲ್ಲಿ ಹೇಗಿದೆ ಎಂದರೆ ಮರ್ಡರ್ ಅಟೆಂಪ್ಟ್ ಗಳಂತವನ್ನ ಲಾಕ್ ಡೌನ್ ವೇಳೆ ತೋರಿಸಿಕೊಟ್ಟಿವೆ. ಈಗ ಎಣ್ಣೆಗಾಗಿ ಅಧಿಕಾರ ದುರಪಯೋಗ ಹಾಗೂ ದುರ್ನಡತೆ ಹಿನ್ನಲೆಯಲ್ಲಿ  ಇಬ್ಬರು ಕಾನ್ ಸ್ಟೇಬಲ್ ಗಳ ಅಮಾನತ್ತಿಗೂ ಕಾರಣವಾಗಿದೆ.

ಗ್ರಾಮಾಂತರ ಠಾಣೆಯ ವಸಂತ ಹಾಗೂ ಕೋಟೆ ಪೊಲೀಸ್ ಠಾಣೆಯ ಪಿಸಿ ಚಂದ್ರನಾಯ್ಕ್ ಇಬ್ಬರನ್ನೂ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡಿಸಿಐಬಿ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಆದರೆ ಈ ಇಬ್ಬರೂ ಕಾನ್ ಸ್ಟೇಬಲ್ ಗಳು ಅಧಿಕಾರ ದುರುಪಯೋಗ ಹಾಗೂ ದುರ್ನಡತೆಯ ಆಧಾರದ ಮೇರೆಗೆ  ವಿಚಾರಣೆ ಕಾಯ್ದಿರಿಸಿ ಅಮಾನತ್ತಿನಲ್ಲಿಡಲಾಗಿದೆ ಎಂದು ಜಿಲ್ಲಾ ಖಡಕ್ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಆದೇಶಿಸಿದ್ದಾರೆ.

ಏಪ್ರಿಲ್ ಕೊನೆಯ ವಾರದಲ್ಲಿ ಇಬ್ಬರೂ ಸಹ ಅಕ್ರಮ ಮದ್ಯ ಮಾರಲು ಬಂದಿದ್ದ ವ್ಯಕ್ತಿಯಿಂದ 3 ಮದ್ಯದ ಬಾಟಲನ್ನ ತೆಗೆದುಕೊಂಡು ಹೋಗಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನ್ ಸ್ಟೇಬಲ್ ಗಳು ತಮ್ಮ ಮೇಲಿನ ಅಧಿಕಾರಿಗಳಿಗೆ ತಾವು ತೆಗೆದುಕೊಂಡು ಬಂದ ಮದ್ಯಗಳ ಬಗ್ಗೆ ಮಾಹಿತಿ ನೀಡದೆ ಹಾಗೂ ಪ್ರಕರಣವನ್ನ ದಾಖಲಿಸಿಕೊಳ್ಳದೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದರು.

ಅಧಿಕಾರ ದುರುಪಯೋಗ ಹಾಗೂ ದುರ್ನಡತೆ ಹಿನ್ನಲೆಯಲ್ಲಿ ಇಬ್ಬರು ಪೇದೆಗಳು ಅಮಾನತು - Kannada News

ಈ ಪ್ರಕರಣ ಮೇಲಿನ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಮೂರು ಮದ್ಯದ ಬಾಟಲ್ ಗಳನ್ನ ಅಕ್ರಮ ಮದ್ಯ ಮಾರಲು ಬಂದಿದ್ದ ವ್ಯಕ್ತಿಗೆ ಬಾಟಲ್ ವಾಪಾಸ್ ನೀಡಿ ಬಂದಿದ್ದರು. ಪ್ರಕರಣದ ಬಗ್ಗೆ ವರದಿ ಕೇಳಿದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ  ಡಿಸಿಐಬಿ ವಿಭಾಗವು ಈ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳ ಬಗ್ಗೆ ಅಧಿಕಾರ ದುರಪಯೋಗ ಹಾಗೂ ದುರ್ನಡತೆ ಕುರಿತು ವರದಿ ನೀಡಿತ್ತು. ಈ ಹಿನ್ನಲೆಯಲ್ಲಿ ಎಸ್ಪಿ  ಕೆ.ಎಂ.ಶಾಂತರಾಜು ಇಬ್ಬರು ಕಾನ್ ಸ್ಟೇಬಲ್ ಗಳ ವಿಚಾರಣೆಯನ್ನ ಕಾಯ್ದಿರಿಸಿ ಅಮಾನತುಗೊಳಿಸಿದ್ದಾರೆ.

Web Title : Two Police constables suspended on charges of misconduct in Shimoga

Follow us On

FaceBook Google News

Read More News Today