ಶಿವಮೊಗ್ಗದಲ್ಲಿ ಜಾನಪದ ಕಲೆಯ ಅನಾವರಣ “ಜಾನಪದ ಜಾತ್ರೆ”
Unveiling of Folk Art at Shimoga, Folk Fair - 2020
ಕನ್ನಡ ನ್ಯೂಸ್ ಟುಡೇ – Shimoga News
ಶಿವಮೊಗ್ಗ : ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ಜಾನಪದ ಜಾತ್ರೆಯಲ್ಲಿ ನಾಡಿನ ನಾನಾ ಜಾನಪದ ಕಲೆಗಳು ಅನಾವಣಗೊಂಡು, ನೋಡುಗರ ಮನಸೂರೆಗೊಳಿಸಿದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆಯನ್ನು ವಿಧಾನ ಪರಿಷತ್ ಸದಸ್ಯ ಆರ್. ಪ್ರಸ್ನನಕುಮಾರ್ ನಗಾರಿ ಬಾರಿಸುವ ಮೂಲಕ ಅದ್ದೂರಿಯಾಗಿ ಉದ್ಘಾಟಿಸಿದರು.
ಡೊಳ್ಳು ಕುಣಿತ-ಪಿ.ಟಿ. ಸುಮಿತ್ರಾ ಮತ್ತು ತಂಡ ಹೆಗ್ಗೋಡು, ವೀರಭದ್ರ ಕುಣಿತ- ಶಿವರಾಜು ಮತ್ತು ತಂಡ ಗೋಣಿಬೀಡು, ಲಂಬಾಣಿ ನೃತ್ಯ-ಶೃತಿ ಮತ್ತು ತಂಡ ಸಾಗರ, ಗೋರುಕನ ನೃತ್ಯ-ಬಸವರಾಜು ಮತ್ತು ತಂಡ ಚಾಮರಾಜನಗರ, ಹಾಲಕ್ಕಿ ಸುಗ್ಗಿ ಕುಣಿತ- ಪುರುಷೋತ್ತಮಗೌಡ ಮತ್ತು ತಂಡ ಕಾರವಾರ, ಪೂಜಾ ಕುಣಿತ – ಕಾವ್ಯ ಎಸ್.ಎಂ ಮತ್ತು ತಂಡ ಶಿವಮೊಗ್ಗ, ನಗಾರಿ- ಮಂಜುನಾಥ್ ಮತ್ತು ತಂಡ ಮೈಸೂರು, ಪುಗಡಿ ನೃತ್ಯ-ಉದಯ ಮತ್ತು ತಂಡ ಹಳಿಯಾಳ, ಕಂಸಾಳೆ-ಕುಮಾರ್ ಎಂ. ಮತ್ತು ತಂಡ ಪಿರಿಯಾಪಟ್ಟಣ, ಜೋಗತಿ ನೃತ್ಯ- ಶಂಕರಪ್ಪ ಸಂಕಣ್ಣನವರ ಕೊತಬಾಳ ಮತ್ತು ತಂಡ ಗದಗ, ಗೊರವರ ಕುಣಿತ-ಮಾರುತಿ ಮತ್ತು ತಂಡ ಉಡುಪಿ, ಸ್ಯಾಕ್ಸೋಫೋನ್ ವಾದನ- ಶಿವಾನಂದ ಮತ್ತು ಬಳಗ ಕೋಟೇಶ್ವರ, ತಂಡಗಳು ಸೇರಿದಂತೆ ಹಲವು ವಾದ್ಯಮೇಳಗಳು ಭಾಗವಹಿಸಿ ಜಾನಪದ ಜಾತ್ರೆಗೆ ಮೆರಗು ನೀಡಿದವು.
ವಿವಿಧ ಕಲಾ ಪ್ರಕಾರ ತಂಡಗಳು ತಮ್ಮ ಪ್ರತಿಭೆಯ ಮೂಲಕ ಜಾನಪದ ಜಾತ್ರೆಯಲ್ಲಿ ಕಲೆ ರಂಜಿಸಿದ್ದು ಹೀಗೆ. ಒಟ್ಟು 14 ಕಲಾ ತಂಡಗಳು ಭಾಗವಹಿಸಿದ್ದು, ಜನಪದ ಜಾತ್ರೆಯಲ್ಲಿ ವಿವಿಧ ಬಗ್ಗೆಯ ಜನಪದ ಕಲೆಗಳು ಮೆರೆದಾಡಿದವು.
ಜಾನಪದ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಆರ್. ಪ್ರಸ್ನನಕುಮಾರ್, ‘ಎಲ್ಲ ಸಾಹಿತ್ಯಕ್ಕೂ ಮೂಲ ಜಾನಪದ ಸಾಹಿತ್ಯ. ದೇಶದ ಸಂಸ್ಕೃಯನ್ನು ಬಿಂಬಿಸುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು’. ಸೋಲು ಗೆಲವು ಮುಖ್ಯವಲ್ಲ. ತಮ್ಮ ಪ್ರತಿಭೆಗಳನ್ನು ಜನರಲ್ಲಿ ಪ್ರದರ್ಶಿಸುವುದು ಬಹುಮುಖ್ಯ ಎಂದು ಕಲಾತಂಡಗಳಿಗೆ ಸ್ಫೂರ್ತಿ ತುಂಬಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎನ್. ಷಡಾಕ್ಷರಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ. ಮಂಜುನಾಥಸ್ವಾಮಿ, ಜಿ. ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಕರ್ನಾಟಕ ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿ.ಎಸ್. ಅರುಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಜಾನಪದ ಅಕಾಡೆಮಿ ಸದಸ್ಯರು ಬೂದಪ್ಪ, ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು.////
Quick Links : Shimoga News Kannada
Follow us On
Google News |