ದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆ ಯಾವಾಗ?

ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜನೆ ಮಾಡಿ ರಾಜ್ಯ ಸರ್ಕಾರ ವಿಜಯನಗರ ಹೊಸ ಜಿಲ್ಲೆ ಉದಯಕ್ಕೆ ಚಾಲನೆ ನೀಡಿದೆ. ಈ ನಡುವೆ ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ವಿಭಜನೆ ಯಾವಾಗ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

🌐 Kannada News :

( Kannada News Today ) : ಬೆಳಗಾವಿ : ಗಣಿ ಜಿಲ್ಲೆ ಬಳ್ಳಾರಿಯನ್ನು ವಿಭಜನೆ ಮಾಡಿ ರಾಜ್ಯ ಸರ್ಕಾರ ವಿಜಯನಗರ ಹೊಸ ಜಿಲ್ಲೆ ಉದಯಕ್ಕೆ ಚಾಲನೆ ನೀಡಿದೆ. ಈ ನಡುವೆ ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ವಿಭಜನೆ ಯಾವಾಗ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

18 ವಿಧಾನಸಭೆ ಕ್ಷೇತ್ರ, 15 ತಾಲೂಕು ಹೊಂದಿರುವ ಬೆಳಗಾವಿ ಜಿಲ್ಲೆಯ ವಿಭಜನೆ ಎನ್ನುವುದು ಜೇನುಗುಡು ಈ ಇದಕ್ಕೆ ಸದ್ಯ ಇರುವ ಬಿಜೆಪಿ ಸರ್ಕಾರ ಕೈ ಹಾಕಲಿದೆಯೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಜಿಲ್ಲೆಯಲ್ಲಿ ಚರ್ಚೆಗಳು ಆರಂಭವಾಗಿವೆ. ಬೆಳಗಾವಿ ಜಿಲ್ಲೆ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 18 ವಿಧಾನಸಭೆ, 3 ಲೋಕಸಭೆ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದೆ. 15 ತಾಲೂಕು, 6 ಆರ್ ಟಿ ಓ ಕಚೇರಿ, 506 ಗ್ರಾಮ ಪಂಚಾಯತ್, 345 ತಾಲೂಕು ಪಂಚಾಯತ್ ಸದಸ್ಯರು, 90 ಜಿಲ್ಲಾ ಪಂಚಾಯತ್ ಸದಸ್ಯರನ್ನು ಹೊಂದಿದೆ.

ಇಷ್ಟು ದೊಡ್ಡ ಜಿಲ್ಲೆಯಾಗಿದ್ದರು ಗಡಿ ವಿವಾದ, ಚಿಕ್ಕೋಡಿ, ಗೋಕಾಕ್ ನಡುವಿನ ಹಗ್ಗ ಜಗ್ಗಾಟದಿಂದ ಜಿಲ್ಲಾ ವಿಭಜನೆ ನೆನೆಗುದಿಗೆ ಬಿದ್ದಿದೆ. ರಾಜಕೀಯವಾಗಿ ಪ್ರಭಲ್ಯ ಸಾಧಿಸಿರುವ ಇಲ್ಲಿನ ನಾಯಕರು ಜಿಲ್ಲೆಯ ವಿಭಜನೆ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿಲ್ಲ.

ಈ ಹಿಂದೆ ಬೆಳಗಾವಿ ಜಿಲ್ಲೆಯ ವಿಭಜನೆಗೆ ಅನೇಕ ಸರ್ಕಾರಗಳು ಪ್ರಯತ್ನ ಮಾಡಿದ್ದವು. ಜಿಲ್ಲಾ ಕೇಂದ್ರಕ್ಕಾಗಿ ಗೋಕಾಕ್, ಚಿಕ್ಕೋಡಿ ನಡುವೆ ಪ್ರಭಲ ಪೈಪೋಟಿ ಇದೆ.

ಅಥಣಿ, ರಾಮದುರ್ಗ, ಮೂಡಲಗಿ ತಾಲೂಕಿನಿಂದ ಕೆಲಸಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ವಿಭಜನೆ ಅನಿವಾರ್ಯ. ಆದರೆ, ಜಿಲ್ಲೆ ವಿಭಜನೆಗೆ ಗಡಿ ವಿವಾದ ತಳಕು ಹಾಕಿಕೊಂಡಿದೆ. ಹೀಗಾಗಿ ಜಿಲ್ಲೆಯ ವಿಭಜನೆಯ ಇನ್ನೂ ಈಡೇರಿಲ್ಲ.

ಬೆಳಗಾವಿಯಲ್ಲಿ ಗುರುವಾರ ಜಿಲ್ಲೆ ವಿಭಜನೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಗೋಕಾಕ್, ಚಿಕ್ಕೋಡಿ ಎರಡು ಜಿಲ್ಲೆಯಾಗಬೇಕು ಎನ್ನುವುದು ನಮ್ಮ ಬೇಡಿಕೆ.

ಈ ನಿಟ್ಟಿನಲ್ಲಿ ಸಾಕಷ್ಟು ಸಲ ಬೇಡಿಕೆ ಇಟ್ಟಿದ್ದೇವೆ. ಈಗಲೂ ನಮ್ಮ ಒತ್ತಾಯ ಗೋಕಾಕ್, ಚಿಕ್ಕೋಡಿಗೆ ಇದೆ. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅವಶ್ಯಕತೆ ಇದೆ ಎಂದರು.

ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಲೇಬೆಕು. ವಿರೋಧ ಪಕ್ಷದಲ್ಲಿ ಇದ್ದಾಗ ಈಗಿನ ಸಚಿವರು ಧರಣಿ ಮಾಡಿದರು. ಅವರೇ ಸದ್ಯ ಅಧಿಕಾರದಲ್ಲಿ ಇದ್ದಾರೆ ವಿಭಜನೆ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.