ಲೋಕಸಭಾ ಸಂಗ್ರಾಮ 2019 : ಗೆಲುವು ಸೋಲಿನ ವಿವರ ಇಲ್ಲಿದೆ

Lok Sabha Election 2019 : Here's the win and the losing details

ಲೋಕಸಭಾ ಸಂಗ್ರಾಮ 2019 : ಗೆಲುವು ಸೋಲಿನ ವಿವರ ಇಲ್ಲಿದೆ

ಬೆಂಗಳೂರು, ಮೇ 23 : ಲೋಕಸಮರದ ಪಲಿತಾಂಶ ಕರ್ನಾಟಕದಲ್ಲಿ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಈ ಲೋಕ ಸಂಗ್ರಾಮದಲ್ಲಿ ಬಿಜೆಪಿ ಮತ್ತು ದೋಸ್ತಿ ಸರ್ಕಾರಗಳ ಅಭ್ಯರ್ಥಿಗಳ ಹೆಚ್ಚು ಕಣದಲ್ಲಿ ಉಳಿದಿದ್ದು ಅಭ್ಯರ್ಥಿಗಳ ಅಂತಿಮ ಫಲಿತಾಂಶ ಇಂದು ಹೊರಬಿದ್ದಿದ್ದು ಅದರಲ್ಲಿ ನ ಗೆಲುವು ಸೋಲಿನ ಚಿತ್ರಣ ಇಲ್ಲಿದೆ

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನವನ್ನುಗಳಿಸುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಇಂದು ನಡೆದ ಲೋಕಸಮರದ ಮತದಾರ ಪ್ರಭುವಿನ ಮತ ಎಣಿಕೆ ನಡೆಯಿತು. ಕರ್ನಾಟಕದಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಕ್ಷೇತ್ರ ಮತ್ತು ಜೆಡಿಎಸ್ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ಹೆಚ್ಚು ಸ್ಥಾನಗಳಿಸದಂತೆ ತಂತ್ರ ರೂಪಿಸಿದ್ದವು. ಆದರೆ, ಈ ತಂತ್ರ ಫಲ ನೀಡಿಲ್ಲ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಇಲ್ಲಿದೆ ಮಾಹಿತಿ (ಅಧಿಕೃತ ಘೋಷಣೆ ಬಾಕಿ)

* ಕೋಲಾರ : ಸಿ.ಮನಿಸ್ವಾಮಿ (ಬಿಜೆಪಿ) ಗೆಲುವು , ಕೆ.ಎಚ್.ಮುನಿಯಪ್ಪ (ಮೈತ್ರಿಕೂಟ) ಸೋಲು.

* ಹಾಸನ : ಪ್ರಜ್ವಲ್ ರೇವಣ್ಣ (ಮೈತ್ರಿಕೂಟ) ಗೆಲುವು, ಎ.ಮಂಜು (ಬಿಜೆಪಿ) ಸೋಲು

* ನಳೀನ್ ಕುಮಾರ್ ಕಟೀಲ್ (ಬಿಜೆಪಿ) ಗೆಲುವು, ಮಿಥುನ್ ರೈ (ಮೈತ್ರಿಕೂಟ) ಸೋಲು

* ಬಳ್ಳಾರಿ : ವೈ.ದೇವೇಂದ್ರಪ್ಪ (ಬಿಜೆಪಿ) ಗೆಲುವು, ವಿ.ಎಸ್.ಉಗ್ರಪ್ಪ (ಮೈತ್ರಿಕೂಟ) ಸೋಲು

* ಉ.ಕನ್ನಡ : ಅನಂತ್ ಕುಮಾರ್ ಹೆಗಡೆ (ಬಿಜೆಪಿ) ಗೆಲುವು, ಆನಂದ್ ಆಸ್ನೋಟಿಕರ್ (ಮೈತ್ರಿಕೂಟ) ಸೋಲು

* ಬೆಂಗಳೂರು ಗ್ರಾಮಾಂತರ : ಡಿ.ಕೆ.ಸುರೇಶ್ (ಮೈತ್ರಿಕೂಟ) ಗೆಲುವು, ಅಶ್ವಥ್ ನಾರಾಯಣ್ (ಬಿಜೆಪಿ) ಸೋಲು

* ಶಿವಮೊಗ್ಗ : ಬಿ.ವೈ.ರಾಘವೇಂದ್ರ (ಬಿಜೆಪಿ) ಗೆಲುವು, ಮಧು ಬಂಗಾರಪ್ಪ (ಮೈತ್ರಿಕೂಟ) ಸೋಲು

Latest News

Latest News