Welcome To Karnataka Politics News

Welcome To Kannada News - Kannadigas Adda

ಬಿಜೆಪಿ ಭದ್ರಕೋಟೆ ಬಾಗಲಕೋಟೆ – ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಬಾರಿ ಸಿದ್ಧತೆ

Preparing for Prime Minister Narendra Modi's election campaign in Bagalkot

Kannadanews.today - ಕನ್ನಡಿಗಾಸ್ ಅಡ್ಡ

ಬಿಜೆಪಿ ಭದ್ರಕೋಟೆ ಬಾಗಲಕೋಟೆ – ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಬಾರಿ ಸಿದ್ಧತೆ

ಬಾಗಲಕೋಟೆ : ಬಿಜೆಪಿ ಭದ್ರಕೋಟೆಯಾದ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ ಚಕ್ರಾಧಿಪತಿ ಸಾಧಿಸಿದ ಬಿಜೆಪಿ ಪಕ್ಷದ ಪರವಾಗಿ ನಾಲ್ಕನೇ ಬಾರಿಯೂ ಸಹ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ತೀವ್ರ ಪ್ರಚಾರದಲ್ಲಿ ತೊಡಗಿಕೊಂಡಿದೆ.
ಕ್ಷೇತ್ರದಲ್ಲಿ ಪ್ರಬಲವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯ ಮಾತ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದು ಈಗಾಗಲೇ ಎರಡು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಶಕ್ತಿ ಪ್ರದರ್ಶನವನ್ನು ನಡೆಸಿದೆ.

ಅಪಾರ ಜನಸಾಗರ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮ ಪಕ್ಷದ ಸ್ಟಾರ್ ಪ್ರಚಾರಕರನ್ನು ಕರೆ ತಂದು ಚುನಾವಣಾ ಸಭೆಗಳನ್ನು ನಡೆಸಿದೆ.
ಏಪ್ರಿಲ್ 18ರಂದು ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆ ನಗರಕ್ಕೆ ಆಗಮಿಸುತ್ತಿದ್ದು ಸಮಾವೇಶಕ್ಕಾಗಿ ಪೂರ್ವ ಸಿದ್ಧತೆಗಳನ್ನು ಶಾಸಕರಾದ ಶ್ರೀ ವೀರಣ್ಣ ಚರಂತಿಮಠ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಗೋವಿಂದ ಕಾರಜೋಳ ಪೊಲೀಸ್ ಅಧಿಕಾರಿ ಅಭಿನವ್ ಖರೆ ನೇತೃತ್ವದಲ್ಲಿ ಸಮಾವೇಶದ ಸ್ಥಳ ಪರಿಶೀಲನೆ ನಡೆದಿದ್ದು ರೋಟರಿ ಸರ್ಕಲ್ ಹತ್ತಿರದ ವಿಸ್ತ ಹೋಟೆಲ್ ಹಿಂಭಾಗದ 20 ಎಕರೆ ಜಮೀನಿನಲ್ಲಿ ಪ್ರಚಾರ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸ್ಥಳ ಪರಿಶೀಲಿಸಿ ಸುದ್ದಿಗಾರರಿಗೆ ಮಾಹಿತಿ ತಿಳಿಸಿದ್ದಾರೆ.

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.