ಕೋಲಾರ ಕೆಜಿಎಫ್ ನಲ್ಲಿ ವರದಕ್ಷಿಣೆಯ ಭೂತಕ್ಕೆ ಯುವತಿಯ ಬಲಿ

A young woman killed for dowry in Kolar KGF

ಕೋಲಾರ ಕೆಜಿಎಫ್ ನಲ್ಲಿ ವರದಕ್ಷಿಣೆಯ ಭೂತಕ್ಕೆ ಯುವತಿಯ ಬಲಿ – A young woman killed for dowry in Kolar KGF

ಕೋಲಾರ ಕೆಜಿಎಫ್ ನಲ್ಲಿ ವರದಕ್ಷಿಣೆಯ ಭೂತಕ್ಕೆ ಯುವತಿಯ ಬಲಿ

ಕೆಜಿಎಫ್ : ಸರ್ಕಾರ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾಧ ಎಂದು ಕಾನೂನು ಮಾಡಿದರೂ ಸಹ ವರದಕ್ಷಿಣೆ ಭೂತ ಇನ್ನು ನಿಲ್ಲುತ್ತಿಲ್ಲ, ಪ್ರತಿದಿನ ಸಾಕಷ್ಟು ಯುವತಿಯರು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಏಕಾಂಬರ ಸಿಂಗ್ ಮತ್ತು ನಂದಿನಿ ಬಾಯಿ ಮದುವೆಯಾದಾಗಿನಿಂದ ಗಂಡ ಪ್ರತಿದಿನ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ಇದರಿಂದ ಮನನೊಂದ ಯುವತಿ ನಂದಿನಿ ಬಾಯಿ ವರದಕ್ಷಿಣ ಕಾಟ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೂರಮಾಕನ ಹಳ್ಳಿಯಲ್ಲಿ ನಡೆದಿದೆ.

ಮದುವೆಯಾದ ಆರಂಭದಲ್ಲಿ ಗಂಡ ಹೆಂಡತಿ ಬೆಂಗಳೂರಿನ ಪೀಣ್ಯ 2ನೇ ಹಂತದಲ್ಲಿ ಮನೆ ಮಾಡಿಕೊಂಡು ಸಂಸಾರ ನಡೆಸಿಕೊಂಡು ಬರುತ್ತಿದ್ದರು

ನಂದಿನಿ ಬಾಯಿ (26) ಮೃತ ಪಟ್ಟಿರುವ ದುರ್ದೈವಿ. ತಟ್ಟನಹಳ್ಳಿ ಗ್ರಾಮದ ನಿವಾಸಿ ಏಕಾಂಬರ್‌ ಸಿಂಗ್‌ ಎಂಬುವರೊಂದಿಗೆ ಕಳೆದ 2 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆ ಯಾಗಿ 15 ಲಕ್ಷ ರೂ., ಮೌಲ್ಯದ ಚಿನ್ನದ ಒಡವೆ, 5 ಲಕ್ಷ ರೂ.,ನಗದು ಮತ್ತು ಗೃಹೋಪಯೋಗಿ ವಸ್ತುಗಳು ನೀಡ ಲಾಗಿತ್ತು. ಮದುವೆಯನ್ನು ಬಂಗಾರ ಪೇಟೆ ವಿಬಿಆರ್‌ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ಮಾಡಲಾಗಿತ್ತು.

ಆದರೆ ಇತ್ತೀಚೆಗೆ ಗಂಡ ಏಕಾಂಬರ್‌ ಪತ್ನಿ ನಂದಿನಿ ಬಳಿ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕಿರುಕುಳ ತಾಳಲಾರದೆ ನಂದಿನಿ ತಾಲೂಕಿನ ಬೂರಮಾಕನಹಳ್ಳಿ ಗ್ರಾಮದ ತವರು ಮನೆಗೆ ಹೋಗಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ನಮ್ಮ ಮಗಳ ಸಾವಿಗೆ ಅಳಿಯ ಏಕಾಂಬರ್‌ರ ತಾಯಿ ಚಿನ್ನಮ್ಮ, ತಂದೆ ಅನಂತರಾಂ ಸಿಂಗ್‌, ಭಾವ ಹನುಮಾನ್‌ ಸಿಂಗ್‌, ನಾದಿನಿಯರಾದ ಗೀತಾಬಾಯಿ, ಸರಸ್ವತಿ ಬಾಯಿ, ಪಾರ್ವತಿ ಬಾಯಿ ಕಾರಣ ಎಂದು ಮೃತ ನಂದಿನಿ ತಂದೆ ಕನಕಸಿಂಗ್‌ ಬೆಮೆಲ್ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಮೆಲ್ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.////

Web Title : A young woman killed for dowry in Kolar KGF
(ಕನ್ನಡ ನ್ಯೂಸ್Kannada News Today @ kannadanews.today)