ಕೋಲಾರ ಸೋಲಿಲ್ಲದ ಒಡೆಯನಿಗೆ ಸೋಲಿನ ಮುಖಭಂಗ

BJP’s candidate and BBMP Corporator S. Muniswamy defeated K.H. Muniyappa

ಕೋಲಾರ ಸೋಲಿಲ್ಲದ ಒಡೆಯನಿಗೆ ಸೋಲಿನ ಮುಖಭಂಗ – BJP’s candidate and BBMP Corporator S. Muniswamy defeated K.H. Muniyappa

ಕೋಲಾರ ಸೋಲಿಲ್ಲದ ಒಡೆಯನಿಗೆ ಸೋಲಿನ ಮುಖಭಂಗ

ಕೋಲಾರ : ಕೋಲಾರ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಸೋಲಿಲ್ಲದ ಒಡೆಯ ಕೈ ನಾಯಕ ಶ್ರೀ ಕೆ ಎಚ್ ಮುನಿಯಪ್ಪ ಜೊತೆ ಪ್ರತಿಸ್ಪರ್ಧೆ ಮಾಡಿದ್ದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ. ಪ್ರಾರಂಭದಲ್ಲಿ ಸೋಲಿಲ್ಲದ ಒಡೆಯ ಆತ್ಮವಿಶ್ವಾಸದಿಂದ ಲೋಕ ಸಮರದಲ್ಲಿ ನಾಮಿನೇಷನ್ ಸಲ್ಲಿಸಿದ ಬಳಿಕ ಒಂದಿಲ್ಲ ಒಂದು ಸಂಕಷ್ಟಗಳು ಎದುರಾಗುತ್ತಲೇ ಬಂದವು.

ಅದರಲ್ಲಿ ಎದುರಾಗಿದ್ದು ಕೆಎಚ್ ಮುನಿಯಪ್ಪ ನಾಮಿನೇಷನ್ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರಿಗೂ ಮತ್ತು ಕೆಎಚ್ ಮುನಿಯಪ್ಪ ಅವರಿಗೂ ಮನಸ್ತಾಪಗಳು,  ಈ ಮೊದಲು ಅವರ ಗೆಲುವಿಗೆ ಕಾರಣರಾದ ಮುಸ್ಲಿಂ ಬಾಂಧವರು ಸಹ ಇವರನ್ನು ಕೈಬಿಟ್ಟಿರುವುದು ಇದಕ್ಕೆ ಮೂಲ ಕಾರಣವಾಗಿರಬಹುದು.

ಕಳೆದ 28 ವರ್ಷಗಳಲ್ಲಿ ಸೋಲಿಲ್ಲದ ಒಡೆಯ ನಾಯಕ ಶ್ರೀ ಎಚ್ ಮುನಿಯಪ್ಪನವರು ಮುಸ್ಲಿಂ ಬಾಂಧವರಿಗೆ ಯಾವುದೇ ಒಂದು ಕೆಲಸವನ್ನು ಮಾಡಿಲ್ಲ ಎಂಬ ಆರೋಪ ಕೂಡ ಎದುರಾಗಿತ್ತು, ಹೀಗೆ ಎಲ್ಲಾ ಸಮುದಾಯದವರು ಮುನಿಯಪ್ಪರ ವಿರುದ್ಧ ತಿರುಗಿಬಿದ್ದ ಕಾರಣ ಇವರ ಸೋಲಿಗೆ ಮುಖ್ಯ ಕಾರಣವಾಗಿದೆ.

ಕೋಲಾರದ ತವರೂರಿನ ಮತದಾರರು ಸತತ 7 ಬಾರಿ ಸಂಸದರನ್ನಾಗಿ ಕೆ.ಹೆಚ್. ಮುನಿಯಪ್ಪ ರನ್ನು ಆಯ್ಕೆ ಮಾಡಿದ್ದರು. ಸಧ್ಯ ಈ ವಿಕ್ಟರಿಯನ್ನು ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದ ಮುನಿಸ್ವಾಮಿ ಮುರಿದಿದ್ದಾರೆ. ಸೋಲಿಲ್ಲದ ಒಡೆಯ ಶ್ರೀ ಕೆಎಚ್ ಮುನಿಯಪ್ಪ ಅವರ ವಿರುದ್ಧ ಕೋಲಾರ ಲೋಕಸಭಾ ಸಮರದ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆಲುವು ಕಂಡಿದ್ದು, ಸತತ 7 ಬಾರಿ ಸಂಸದರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ ಸೋಲು ಕಂಡಿರುವುದು ಕೆಎಚ್ ಮುನಿಯಪ್ಪ ಅವರಿಗೆ ದೊಡ್ಡ ಆಘಾತವನ್ನುಂಟುಮಾಡಿದೆ.////