ಸೋಲುವ ಭೀತಿಯಲ್ಲಿ ಸೋಲಿಲ್ಲದ ಸರದಾರ ಕೆ.ಎಚ್.ಮುನಿಯಪ್ಪ

KH Muniyappa in fear of losing

ಸೋಲುವ ಭೀತಿಯಲ್ಲಿ ಸೋಲಿಲ್ಲದ ಸರದಾರ ಕೆ.ಎಚ್.ಮುನಿಯಪ್ಪ – KH Muniyappa in fear of losing

ಸೋಲುವ ಭೀತಿಯಲ್ಲಿ ಸೋಲಿಲ್ಲದ ಸರದಾರ ಕೆ.ಎಚ್.ಮುನಿಯಪ್ಪ

ಕೋಲಾರ : ಘಟಾನು ಘಟಿಗಳೆಲ್ಲಾ ಒಂದಾಗಿ, ಮುನಿಯಪ್ಪನಿಗೆ ” ಕೈ ” ಕೊಡೋ ಪ್ಲಾನ್ ನಲ್ಲಿದ್ದಾರೆ.  ಸತತ ಗೆಲುವಿನ ಸರಮಾಲೆ ತೊಡಿಸಿಕೊಂಡಿರುವ ಕೆ.ಎಚ್.ಮುನಿಯಪ್ಪರಿಗೆ ಒಳಗೊಳಗೇ ಭೀತಿ ಶುರುವಾಗಿದೆ. ಆದ್ರೂ, ಅದೃಷ್ಟ ನನ್ನ ಕಡೆ ಇದೆ ಎಂದು ನಂಭಿರೋ ಮುನಿಯಪ್ಪ ಗೆದ್ದೇ ತಿರುತ್ತೇನೆ ಎಂಬ ಅಘಾದ ನಂಭಿಕೆ ಇಟ್ಟಿದ್ದಾರೆ.

ಇನ್ನು ಯಾರು ? ಏನು ? ತಿಳಿಯದ, ಅಪರಿಚಿತ ವ್ಯಕ್ತಿಯನ್ನ ಪ್ರತಿಸ್ಪರ್ದಿಯಾಗಿ ತಂದು ನಿಲ್ಲಿಸಿರುವುದು, ಮುನಿಯಪ್ಪನ ಗೆಲುವಿಗೆ ಈ ಬಾರಿಯೂ ಕಾರಣವಾಗಬಹುದು ಎಂದು ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ. ಆದರೂ ಮತದಾರನ ಒಲವು ಯಾರ ಮೇಲಿದೆ ಹೇಗೆ ಹೇಳಲು ಸಾಧ್ಯ ?.

ಇನ್ನು ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪರಿಗೆ ಯಾಕೋ ಸಮಯ ಸರಿಯಿಲ್ಲ ಅಂತ ಅನಿಸುತ್ತದೆ, ಕಾರಣ ಘಟಾನುಘಟಿಗಳ ಜೊತೆ ಅಲ್ಪಸಂಖ್ಯಾತರು ಸಹ ಕೈಬಿಟ್ಟಿದ್ದಾರೆ, ಈ ಬಾರಿ ನಾವಂತೂ ಮುನಿಯಪ್ಪನನ್ನು ಗೆಲ್ಲಿಸುವುದಿಲ್ಲವೆಂದು ಕೈ ಚೆಲ್ಲಿ ಕೂತಿದ್ದಾರೆ.

ಸತತ ಜಯದ ಮಾಲೆ ಧರಿಸಿದ್ದ ಮುನಿಯಪ್ಪನವರು ಈಗ ಸೋಲುವ ಭೀತಿಯಲ್ಲಿ , ಚುನಾವಣೆ ಘೋಷಣೆಯ ದಿನದಿಂದಲೂ ಒಂದಿಲ್ಲ ಒಂದು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಇಷ್ಟು ದಿನ ಕೈ ಹಿಡಿದಿದ್ದ ಮುಸ್ಲಿಂ ಮತದಾರರು ಕೆಎಚ್ ಮುನಿಯಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ.

ನಿನ್ನೆ ದಿನ ಅಲ್ಪಸಂಖ್ಯಾತರ ಮುಖಂಡರ ಮನೆಯಲ್ಲಿ ನಡೆದ ಸಭೆಯಲ್ಲಿ ಮುನಿಯಪ್ಪ ಅವರ ವಿರುದ್ಧ ಮುಸ್ಲಿಂ ಸಮುದಾಯದವರು ಗರಂ ಆಗಿದ್ದಾರೆ.
ಕಳೆದ 28 ವರ್ಷಗಳಿಂದ ನಮ್ಮ ಸಮುದಾಯದ ಒಬ್ಬರಿಗೂ ಕೆಲಸ ಕೊಡಿಸಲಿಲ್ಲ ಎಂದು ಮುನಿಯಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.//// ವರದಿ : ರವಿಚಂದ್ರ ಮುರಾಳ