Welcome To Kolar News

Welcome To Kannada News - Kannadigas Adda

6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತಾತ, ಆಮೇಲೆ ಆಗಿದ್ದೇನು ?

old man tried to rape a 6-year-old girl in Kolar

Kannadanews.today - ಕನ್ನಡಿಗಾಸ್ ಅಡ್ಡ

6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತಾತ, ಆಮೇಲೆ ಆಗಿದ್ದೇನು ?

ಕೋಲಾರ – ಮುದಿಯನಿಗೆ ಈ ವಯಸ್ಸಿನಲ್ಲೂ ಎದ್ದು ಎದ್ದು ನಿಲ್ತಾಯಿತ್ತು , ಆಸೆ. ತಾತನ ಚಪಲಕ್ಕೆ ಕಂಡದ್ದು ನೆರೆ ಮನೆಯ ೬ ವರ್ಷದ ಬಾಲಕಿ. ಎಷ್ಟೇ ಆದ್ರೂ ನೆರೆ ಮನೆ ತಾತ ತಾನೇ ಅಂತ ಆಟ ಆಡೋಕೆ ಬಂದ ಮಗುವಿನ ಮೇಲೆ ಬಿತ್ತು ಮುದಿಯನ ಕಣ್ಣು.

ಪ್ರತಿ ದಿನ ಪಾಪು ಪಾಪು ಅಂತ ಎತ್ತಾಡಿಸುತ್ತಿದ್ದ, ಮುದಿಯನ ಬುದ್ದಿ ಮಣ್ಣು ತಿಂದಿದ್ದು, ಆ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ನಡೆದಿದೆ.

ಮುಳುಬಾಗಿಲು ತಾಲೂಕಿನಲ್ಲಿ ಘಟನೆ ನಡೆದಿದ್ದು ಅರೋಪಿ 60 ವರ್ಷದ ವೃದ್ದ ತಲೆಮರೆಸಿಕೂಂಡಿದ್ದಾನೆ, ಘಟನೆಯಿಂದ ಬಾಲಕಿ ಅಸ್ವಸ್ಥಗೂಂಡಿದ್ದು ಮುಳಬಾಗಿಲು ಸರ್ಕಾರಿ ಅಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಷ್ಟಕ್ಕೂ ನಡೆದದ್ದು ಏನು ಅಂತೀರಾ…

ಅರೋಪಿ ವೃದ್ದ, ಬಾಲಕಿಯ ನೆರೆಯವನಾಗಿದ್ದಾನೆ , ಹೀಗಾಗಿ ಪ್ರತಿ ನಿತ್ಯ ಮನೆ ಬಳಿ ಬರುತ್ತಿದ್ದ ಬಾಲಕಿಯನ್ನು ಎಂದಿನಂತೆ ಎತ್ತಿ ಆಟವಾಡಿಸುತ್ತಾ ಮದ್ಯಾಹ್ನ 2 ಘಂಟೆ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದೇ ಇರುವಾಗ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಇದರಿಂದ ಗಾಬರಿಗೂಂಡ ಬಾಲಕಿ ವೃದ್ದನ ಕೈಯಿಂದ ತಪ್ಪಿಸಿಕೂಂಡು ಗಾಬರಿಯಿಂದ ಮನೆಗೆ ಬಂದಿದ್ದಾಳೆ. ಮಗಳು ಮನೆಗೆ ಬಂದಾಗ ಗಾಬರಿಗೊಂಡಿದ್ದಳು, ಅಷ್ಟೆ ಅಲ್ಲದೆ ಅಸ್ವಸ್ಥಗೊಂಡು, ಏಕಾಏಕಿ ಮಲಗಿ ಬಿಟ್ಟಿದ್ದಳು.

ಅನುಮಾನಗೊಂಡ ತಾಯಿ, ಯಾಕೆ ಮಗಳು ಹೀಗೆ ಮಾಡುತ್ತಿದ್ದಾಳೆ ಎಂದು, ತಕ್ಷಣವೆ ಆಕೆಯನ್ನು ವಿಚಾರಿಸಿದಾಗ ನಡೆದ ಘಟನೆ ತಿಳಿದುಬಂದಿದೆ.

ಇನ್ನು ಘಟನೆ ಬಗ್ಗೆ ತಿಳಿದೊಡನೆ, ಬಾಲಕಿಯ ತಂದೆ ಮಚ್ಚು ಕೈಯಲ್ಲಿ ಹಿಡಿದು ಬರುವುದನ್ನು ಕಂಡ ವೃದ್ದ ತಪ್ಪಿಸಿಕೂಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಸಧ್ಯ ಈ ಕುರಿತು ಬಾಲಕಿಯ ಪೋಷಕರು ನಂಗಲಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ, ಈ ಸಂಬಧ ನಂಗಲಿ ಪೋಲಿಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡ್ಡಿ ಪ್ರಕರಣ ದಾಖಲಾಗಿದ್ದು, ಅರೋಪಿಗಾಗಿ ಶೋಧಕಾಯ೯ ಆರಂಭವಾಗಿದೆ.

ನಾವು ಕೊನೆಯದಾಗಿ ಹೇಳೋದು ಒಂದೇ ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಿ…..ಎಚ್ಚರ ಇಂತಹ ಮುದಿ ಕಾಮುಕರು ನಿಮ್ಮ ಸುತ್ತಲೂ ಇರಬಹುದು.////


Web Title : 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತಾತ, ಆಮೇಲೆ ಆಗಿದ್ದೇನು ? – old man tried to rape a 6-year-old girl in Kolar

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.