ಕೋಲಾರ : ದೇಶದ ಭವಿಷ್ಯವು ಯುವ ಸಮುದಾಯದ ಮೇಲೆ ಅವಲಂಬಿತವಾಗಿದೆ – ಜಿ. ವಿ ಗಂಗಾಧರ್

The future of the country depends on the youth community, Says G V Gangadhar

ಕನ್ನಡ ನ್ಯೂಸ್ ಟುಡೇKolar News

ಕೋಲಾರ : ದೇಶದ ಭದ್ರತೆ ಮತ್ತು ಭವಿಷ್ಯವು ಯುವ ಸಮುದಾಯದ ಮೇಲೆ ಅವಲಂಬಿತವಾಗಿದ್ದು, ಇಂತಹ ಯುವ ಸಮುದಾಯ ಸದೃಢವಾಗಲು ಮನಸ್ಸು ಮತ್ತು ದೇಹದ ದೃಢತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಲಿಷ್ಟ ಭಾರತ ನಿರ್ಮಿಸಲು ಶ್ರಮಿಸಬೇಕಾಗಿದೆ ಎಂದು ಸಮಗ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಜಿ.ವಿ ಗಂಗಾಧರ ಅಭಿಪ್ರಾಯ ಪಟ್ಟರು.

ತಾಲ್ಲೂಕಿನ ಹರಟಿಯಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಕೋಲಾರ, ಕ್ರೇಜಿ ಕ್ರಿಯೇಟರ್ಸ್ ಸಾಂಸ್ಕೃತಿಕ ಕ್ರೀಡಾ ಸಂಘ, ಕ್ಯಾನ್ ಸಂಸ್ಥೆ ಕೋಲಾರ, ಜನ ವಿಕಾಸ ಯುವಜನ ಸೇವಾ ಸಂಸ್ಥೆ, ಕೋಲಾರ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಸಧೃಡ ಭಾರತಕ್ಕಾಗಿ ಬೈಸಿಕಲ್ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಭವ್ಯ ಭಾರತ ಕನಸು ನನಸಗಾಲು ನಾವು ಪಣತೋಡಬೇಕು. ದೇಶದ ಸಮಗ್ರತೆ ಐಕ್ಯತೆಗೆ ಒಂದಾಗಿ ದುಡಿಯಬೇಕು ಎಂದು ತಿಳಿಸಿದರು.

ಪ್ರತಿಜ್ಞಾನ ವಿಧಿ ಬೋದಿಸಿದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯ ಸಂಘದ ಅಧ್ಯಕ್ಷರಾದ ಜಿ.ಶ್ರೀನಿವಾಸ ಅವರು ಮಾತನಾಡಿ ದೇಶದ ಎಲ್ಲೆಡೆ ಸ್ವಚ್ಚ ಭಾರತದಂತೆ ಫಿಟ್ ಇಂಡಿಯಾ ಕಾರ್ಯಕ್ರಮ ನಡೆಯುತ್ತಿದ್ದು, ಯುವಜನರು ರಾಷ್ಟ್ರೀಯ ಕಾರ್ಯಕ್ರಮವನ್ನು ತೊಡಗಿಸಿಕೊಳ್ಳಬೇಕು ಮತ್ತು ಮನೆಮನೆಯಲ್ಲಿ ಜಾಗೃತಿ ಮೂಡಿಸಿ ರಾಷ್ಟ್ರೀಯ ಭಾವೈಕತೆಯನ್ನು ಸಾರಬೇಕು ಎಂದು ತಿಳಿಸಿದರು.

ಕ್ರೇಜಿ ಕ್ರೀಯೇಟರ್ಸ್ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ರಾವ್ ಕದಂಬ ಮಾತನಾಡಿ ರಾಷ್ಟ್ರದ ಬೆಳವಣಿಗೆಗೆ ಯುವ ಪೀಳಿಗೆ ಮುಂದಾಗಬೇಕು. ರಾಷ್ಟ್ರ ಕಟ್ಟುವಂತಹ ನಿಲುವಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಮುಂದೆ ಬರಬೇಕು. ಸಧೃಡ ಭಾರತಕ್ಕಾಗಿ ಯುವ ದೇಶದ ಕಲ್ಪನೆ ದೂರ ದೃಷ್ಟಿವುಳ್ಳಂತಹರಾಗಿರಬೇಕು. ಪ್ರತಿಯೊಂದು ಹಂತಹಂತದಲ್ಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರ ನಿರ್ಮಾಣ ಪ್ರೇಮಿಗಳಾಗಬೇಕೆಂದು ನುಡಿದರು.

ನೆಹರು ಯುವ ಕೇಂದ್ರ ತಾಲ್ಲೂಕು ಸಂಯೋಜಕ ಎಸ್ ಪ್ರವೀಣ್ ಕುಮಾರ್ ಮಾತನಾಡಿ ಭಾರತೀಯರು ದೈಹಿಕ ಚಟುವಟಿಕೆಗಳಲ್ಲಿ ದೂರ ಉಳಿಯುತ್ತಿದ್ದರೆ, ಶೇ. 54% ರಷ್ಟು ಭಾರತೀಯರು ದೈಹಿಕವಾಗಿ ಆಲಸಿಗಳಾಗಿದ್ದಾರೆ. ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಜನರು ತಮ್ಮ ದೈನಂದಿನ ಬದುಕಿನಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಗಳನ್ನು ತೊಡಗಿಸುವುದನ್ನು ಉತ್ತೇಜಿಸುವ ಗುರಿಯೊಂದಿಗೆ ಆರಂಭವಾಗಿರುವ ಅಭಿಯಾನ ಇದಾಗಿದೆ. ಯುವಜನತೆ ಸ್ವಾಮಿ ವಿವೇಕಾನಂದರು ನೀಡಿದ ತತ್ವ ಆರ್ದಶಗಳು ಪಾಲಿಸಿ, ಪ್ರಾಮಾಣಿಕ ಚಿಂತನೆ ಅಗತ್ಯವಿದೆ ಎಂದರು.

ಯುವಕರಿಗಾಗಿ ನಡೆದ ಸದೃಢ ಭಾರತ ಬೈಸಿಕಲ್ ಜಾಥಾದಲ್ಲಿ ವಿಜೇತರಾದ ಯುವಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ನಾಗವೇಣಿ, ನೆಹರು ಯುವ ಕೇಂದ್ರದ ಮಂಜುನಾಥ, ಮುನಿರಾಜು, ಸಹ ಶಿಕ್ಷಕರಾದ ರವೀಂದ್ರಪ್ಪ, ಮುನಿಯಪ್ಪ, ಭಾಗ್ಯಲಕ್ಷ್ಮೀ, ಸಾವಿತ್ರಿ ಮತ್ತು ಇತರರು ಉಪ್ಪಸ್ಥಿತರಿದರು.////

Quick Links : Kolar News Kannada