ಸೆಲೂನ್ ಮಾಲೀಕನ ಕೊಲೆ ಬೆಚ್ಚಿಬಿದ್ದ ಕೋಲಾರ ಜನತೆ

The murder of a saloon owner, the people of Kolar were scared-Kolar News Kannada

ಸೆಲೂನ್ ಮಾಲೀಕನ ಕೊಲೆ ಬೆಚ್ಚಿಬಿದ್ದ ಕೋಲಾರ ಜನತೆ

ಕೋಲಾರ : ಕೋಲಾರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ನೆಲೆಸಿದ್ದ ಕಟಿಂಗ್ ಶಾಪ್ ಮಾಲೀಕನ ಬರ್ಬರ ಹತ್ಯೆ ನಡೆಸಿರುವ ದುಷ್ಕರ್ಮಿಗಳು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.

ಭೀಕರ ಘಟನೆ ಕೋಲಾರದಲ್ಲಿ ನಡೆದಿದ್ದು , ಕೊಲೆಯಾದ ದುರ್ದೈವಿ ಕೋಲಾರದಲ್ಲಿ ಸೆಲೂನ್ ಮಾಲೀಕನಾಗಿದ್ದು , ಮೂಲತಃ ಉತ್ತರ ಪ್ರದೇಶದವನಾಗಿದ್ದನು.

ಕಳೆದ ಎರಡು ಮೂರೂ ವರ್ಷಗಳ ಹಿಂದೆ ಈತ ಕೋಲಾರಕ್ಕೆ ಬಂದು ನೆಲೆಸಿದ್ದನು . ಜೀವನ ಸಾಗಣೆಗೆ ಕಟಿಂಗ್ ಶಾಪ್ ನಡೆಸುತ್ತಿದ್ದನು. ಸ್ಥಳೀಯರ ಅಭಿಪ್ರಾಯದಂತೆ ಕೊಲೆಯಾಗಿರುವ ಶಾಹಿದ್ ಭಾಷಾ  ಜೊತೆ ಸ್ನೇಹ ಪರ್ವವಾಗಿಯೇ ವರ್ತಿಸುತ್ತಿದ್ದನು.

ಮನಬಂದಂತೆ ಇರಿದಿರುವ ದುಷ್ಕರ್ಮಿಗಳು ಆತನ ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದಿದ್ದಾರೆ. ನಗರದ ಮಸೀದಿ ಬಳಿ ಮೃತ ದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಾರಣ ದೇಹ ಸಿಕ್ಕ ಸ್ಥಳದಲ್ಲಿ ಯಾವುದೇ ರಕ್ತದ  ಕುರುಹು ಇಲ್ಲ. ಮೃತ ದೇಹದ ಮೈಮೇಲೆಲ್ಲಾ ಗಾಯದ ಗುರುತುಗಳು ಪತ್ತೆಯಾಗಿವೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಯಾವ ಕಾರಣಕ್ಕೆ ಕೊಲೆ ನಡೆದಿರಬಹುದು ಮತ್ತು ಯಾರು ಮಾಡಿರಬಹುದು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್, ಉಮೇಶ್ (ಡಿವೈಎಸ್ಪಿ ), ಸರ್ಕಲ್ ಇನ್‍ಸ್ಪೆಕ್ಟರ್ ಆದ ಫಾರೂಖ್ ಪಾಷ, ನಗರ ಠಾಣೆ ಸಬ್‍ಇನ್‍ಸ್ಪೆಕ್ಟರ್ ಅಣ್ಣಯ್ಯ ಸೇರಿದಂತೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.////

WebTitle : ಸೆಲೂನ್ ಮಾಲೀಕನ ಕೊಲೆ ಬೆಚ್ಚಿಬಿದ್ದ ಕೋಲಾರ ಜನತೆ – The murder of a saloon owner, the people of Kolar were scared । Kolar News Kannada

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Karnataka Crime NewsKannada Crime News । Kolar News KannadaKolar News Today