ರೈಲಿನಿಂದ ಬಿದ್ದು ಟೆಕ್ಕಿ ಸಾವು ಕೆಆರ್‌ಪುರಂ ನಲ್ಲಿ ಘಟನೆ

Techie gets off moving train, crushed to death in KR Puram Railway station

ರೈಲಿನಿಂದ ಬಿದ್ದು ಟೆಕ್ಕಿ ಸಾವು ಕೆಆರ್‌ಪುರಂ ನಲ್ಲಿ ಘಟನೆ

ಬೆಂಗಳೂರು : ಟೆಕ್ಕಿಯೊಬ್ಬರು ರೈಲಿನಿಂದ ಬಿದ್ದು ಮೃತಪಟ್ಟಿರುವ ಘಟನೆ ಕೆಆರ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಗುವನ್ನು ನೋಡಲು ವಿದೇಶದಿಂದ ಬಂದಿದ್ದ ಟೆಕ್ಕಿ ಕೆಆರ್‌ಪುರಂ ವಾಸಿ ಕೆ. ಕಿರಣ್‌ಕುಮಾರ್( 38) ಮೃತ ವ್ಯಕ್ತಿ ಎನ್ನಲಾಗಿದೆ.

ಮೂಲತಃ ತಮಿಳುನಾಡು ಮೂಲದ ಟೆಕ್ಕಿ ಕಿರಣ್ ಕುಮಾರ್  ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಕೆಲಸದ ನಿಮಿತ್ತ ಸ್ವಿಟ್ಜರ್‌ಲ್ಯಾಂಡ್ ಗೆ ತೆರಳಿದ್ದರು.

ಈ ನಡುವೆ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ವಿಷಯ ತಿಳಿದ ಕಿರಣ್ ಮಗು ಮತ್ತು ಪತ್ನಿಯನ್ನು ನೋಡಲು ಬರುವುದಾಗಿ ತಿಳಿಸಿದ್ದಾರೆ , ಅಂತೆಯೇ ಸಂತಸದಿಂದ ಮಗುವನ್ನು ನೋಡಲು ಚೆನ್ನೈನ ತವರು ಮನೆಯಲ್ಲಿದ್ದ ಪತ್ನಿ ಮತ್ತು ಮಗುವನ್ನು ನೋಡಲು ಹೋಗಿದ್ದರು.ರೈಲಿನಿಂದ ಬಿದ್ದು ಟೆಕ್ಕಿ ಸಾವು ಕೆಆರ್‌ಪುರಂ ನಲ್ಲಿ ಘಟನೆ-its Kannada

ಪತ್ನಿ ಮತ್ತು ಮಗುವನ್ನು ನೋಡಿ ಮತ್ತೆ  ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಲು ಕಿರಣ್  ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು.

ಈ ವೇಳೆ ಕೆಆರ್‌ಪುರಂ ನ ಬಳಿ ಚಲಿಸುತ್ತಿದ್ದ ರೈಲಿನಿಂದ್ ಇಳಿಯಲು ಯತ್ನಿಸಿ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸ್ಥಳಕ್ಕಾಗಮಿಸಿದ ರೈಲ್ವೆ ಪೊಲೀಸರು ಪರಿಶೀಲಿಸಿ , ಪ್ರಕರಣ ದಾಖಲಿಸಿ , ಮೃತ ದೇಹವನ್ನು ಮೃತ ಕಿರಣ್ ಕುಟುಂಬಸ್ಥರಿಗೆ ನೀಡಿದ್ದಾರೆ. .////

WebTitle : ರೈಲಿನಿಂದ ಬಿದ್ದು ಟೆಕ್ಕಿ ಸಾವು ಕೆಆರ್‌ಪುರಂ ನಲ್ಲಿ ಘಟನೆ-Techie gets off moving train, crushed to death in KR Puram Railway station

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : KR Puram News Kannada | Kannada Crime News | Karnataka Crime News