Welcome To Belgaum News

Welcome To Kannada News - Kannadigas Adda

ಸವದತ್ತಿ ದೇವಸ್ಥಾನ : ನೇಮಕಾತಿಯಲ್ಲಿ ಅವ್ಯವಹಾರ ಆರೋಪ, ಸತ್ಯಕ್ಕೆ ದೂರವಾದುದು

Saundatti Temple-The allegation of impeachment is far from the truth

Kannadanews.today - ಕನ್ನಡಿಗಾಸ್ ಅಡ್ಡ

ಬೆಳಗಾವಿ : ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ “ಎ” ಶ್ರೇಣಿಯ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ, ಎಲ್ಲಮ್ಮನ ಗುಡ್ಡ, ಸವದತ್ತಿ ಸಂಬಂಧಿಸಿದಂತೆ ದೇವಸ್ಥಾನದ ವಿವಿಧ ಹುದ್ದೆಗಳು ಹಾಗೂ ದೇವಸ್ಥಾನದ ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ಹಣಕಾಸಿನ ಅವ್ಯವಹಾರವಾಗಿದೆ ಎಂದು ಇತ್ತೀಚೆಗೆ ವಿವಿಧ ಪತ್ರಿಕೆಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ.

ದೇವಸ್ಥಾನದ ವಿವಿಧ 60 ಹುದ್ದೆಗಳು ಹಾಗೂ 17 ಅರ್ಚಕರ ನೇಮಕಾತಿ ಪ್ರಕಿಯೆ ಆರಂಭಿಸಲು ಧಾರ್ಮಿಕ ದತ್ತಿ ಆಯುಕ್ತರು, ಬೆಂಗಳೂರು ಅವರ ಕಾರ್ಯಾಲಯದಿಂದ ಅನುಮೋದನೆ ಪಡೆಯುವ ಆರಂಭಿಕ ಹಂತದಲ್ಲಿರುತ್ತದೆ ಎಂದು ಸವದತ್ತಿಯ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಎಸ್.ಸಿ.ಕೋಟಾರಗಸ್ತಿ ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ದೇವಸ್ಥಾನದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೇ ಇನ್ನೂ ಆರಂಭಗೊಂಡಿರುವುದಿಲ್ಲ; ಆದರೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿದೆ ಎಂಬ ವರದಿಗಳು ಪ್ರಕಟವಾಗಿರುವುದರಲ್ಲಿ ಯಾವುದೇ ಹುರುಳಿಲ್ಲ.
ಈ ರೀತಿಯ ವರದಿಗಳಿಂದ ಸುಕ್ಷೇತ್ರದ ಬಗ್ಗೆ ಭಕ್ತಾಧಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆಗಳಿವೆ.

ಸರ್ಕಾರದ ವಿವಿಧ ಇಲಾಖೆಗಳ ಅನುದಾನ ಮತ್ತು ದೇವಸ್ಥಾನದ ನಿಧಿಯಡಿ ಸುಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ 32 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆ, ವ್ಯಾಪಾರ ಮಳಿಗೆಗಳು, ಶೌಚಾಲಯ ನಿರ್ಮಾಣ, ಪಾರ್ಕಿಂಗ್, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಒಟ್ಟಾರೆ 120 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ.

ದೇವಸ್ಥಾನದ ಹುದ್ದೆಗಳು ಮತ್ತು ಅರ್ಚಕರ ನೇಮಕಾತಿಗೆ ಸಂಬಂಧಿಸಿದಂತೆ ದೇವಸ್ಥಾನದ ಪರವಾಗಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಡೆದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.////

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.