Kannada News - Kannadigas Adda

Welcome To Kannada News - Kannadigas Adda

ಸಿಂಹರಾಶಿ ವಾರಭವಿಷ್ಯ, 14 ಏಪ್ರಿಲ್ 2019 – 21 ಏಪ್ರಿಲ್ 2019

Leo Weekly Horoscope 14 April 2019-21 April 2019

Kannadanews.today - ಕನ್ನಡಿಗಾಸ್ ಅಡ್ಡ

ಸಿಂಹರಾಶಿ ವಾರಭವಿಷ್ಯ, 14 ಏಪ್ರಿಲ್ 2019 – 21 ಏಪ್ರಿಲ್ 2019

ಬೇರೆ ರಾಶಿ ಆಯ್ಕೆಗೆ ಕ್ಲಿಕ್ಕಿಸಿ

ಸಿಂಹರಾಶಿ : ಈ ವಾರ ನೀವು ಇದ್ದಕ್ಕಿದ್ದಂತೆ ಕೆಲವು ಪ್ರಮುಖ ನಷ್ಟಗಳನ್ನು ತಪ್ಪಿಸಲು ಜಾಗ್ರತೆವಹಿಸಬೇಕು. ನೌಕರರಿಗೆ ಈ ಸಮಯವು ಒಳ್ಳೆಯದು. ಕಾರ್ಯ ಸ್ಥಳದಲ್ಲಿ ನೆಮ್ಮದಿಯ ಅನುಭವವಿರುತ್ತದೆ.

ಆದರೆ ವಾರದ ಮಧ್ಯದಲ್ಲಿ ಕೆಲವು ಅಡಚಣೆಗಳಿವೆ, ಮತ್ತು ನಿಮ್ಮ ಚಾಣಾಕ್ಷತನದಿಂದ ನೀವು ಅದರಿಂದ ಹೊರ ಬರಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿ ದೊಡ್ಡ ಮೊತ್ತದ ಲಾಭ ಸಾಧ್ಯತೆ ಇರುತ್ತದೆ. 

ನೀವು ನಿರೀಕ್ಷಿತ ಕೆಲಸದ ಹಣ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತವೆ. ಮುಖ್ಯ ಕೆಲಸವನ್ನು ಅಥವಾ ಸಮಸ್ಯೆಯನ್ನು ಎದುರಿಸಲು ಸ್ನೇಹಿತರು, ಸಹೋದರರು ಮತ್ತು ಸಹೋದ್ಯೋಗಿಗಳಿಂದ ನೀವು ಸಹಾಯ ಪಡೆಯಬಹುದು.

ಹಠಾತ್ ಹಣದ ಮಾರ್ಗಗಳು ನಿಮ್ಮನ್ನು ನೆಮ್ಮದಿ ಪಡಿಸುತ್ತವೆ. ಈ ದಿನಗಳಲ್ಲಿ ಖರ್ಚುಗಳನ್ನು ಕಡಿಮೆ ಮಾಡಿ. ಪರ ಸ್ಥಳದಿಂದ ಬರುವ ಸುದ್ದಿಯು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸಬಹುದು.ಒಟ್ಟಾರೆ ನಿಮ್ಮೆಲ್ಲ ಸಮಸ್ಯೆಗಳನ್ನು ಈ ವಾರ ಪರಿಹರಿಸುವಲ್ಲಿ ಯಶಸ್ವಿಯಾಗಬಹುದು. 

ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಿದೆ. ಪ್ರಗತಿ ಮತ್ತು ಯಶಸ್ಸು ಕಾಣಬಹುದು. ವಾರದ ಮಧ್ಯದಲ್ಲಿ ಅಡಚಣೆಗಳು ಇರಬಹುದಾದರೂ ಕ್ರಮೇಣ ಎಲ್ಲವು ಸರಿಯಾಗುತ್ತದೆ. ತಾಳ್ಮೆಯಿಂದಿರಿ, ಈ ವಾರ ಯಾವುದೇ ವಿವಾದಕ್ಕೆ ಮುಂದಾಗಬೇಡಿ ಹಾಗೂ ಯಾರನ್ನೂ ಟೀಕಿಸಬೇಡಿ. 

  • ಕುಟುಂಬ ಜೀವನ : ಪ್ರೀತಿಯ ಜೀವನ ಮತ್ತು ಸಂಗಾತಿಯೊಂದಿಗೆ ಸಮಯ ಕಳೆಯಲು ಅನುಕೂಲಕರವಾಗಿರುತ್ತದೆ.
  • ವೃತ್ತಿ ಜೀವನ : ವೃತ್ತಿ ವಿಷಯದಲ್ಲಿ ಈ ವಾರ ಉತ್ತಮವಾಗಿರುತ್ತವೆ. ನಿಮ್ಮ ಸ್ವಂತ ತೀರ್ಮಾನವನ್ನು ನಿರ್ಧರಿಸಿ. ವ್ಯಾಪಾರಿಗಳಿಗೆ ಒಳ್ಳೆಯ ಸಮಯ. ಆದರೆ ಹಣದ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಯಾರಿಗಾದರೂ ಹಣ ಕೊಡುವುದನ್ನು ತಪ್ಪಿಸಿ.
  • ಆರೋಗ್ಯ :ಆರೋಗ್ಯದ ದೃಷ್ಟಿಯಿಂದ ಈ ವಾರ ಸಾಮಾನ್ಯ ಎಂದು ಕಾಣಿಸುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಶುಭಸೂಚಕ ಸಂಖ್ಯೆ : 1 ಮತ್ತು 5
ಮಂಗಳಕರ ಬಣ್ಣ : ಕಪ್ಪು

Daily Horoscope । Weekly Horoscope । Monthly Horoscope । Yearly Horoscope

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.