ಸರಗಳ್ಳತನ-ಪೋಲಿಸ್ ಪತ್ನಿಯ ಸರ ಕಸಿದ ಖದೀಮರು

Chain-Snatching - snatched from Police Wife | itskananda Crime - it's Kannada

ಬೆಂಗಳೂರು (itskannada) : ಸರಗಳ್ಳತನ-ಪೋಲಿಸ್ ಪತ್ನಿಯ ಸರ ಕಸಿದ ಖದೀಮರು : ಪೋಲಿಸ್ ಇನ್ಸ್ ಪೆಕ್ಟರ್  ಪತ್ನಿಯ 70 ಗ್ರಾಂ ತೂಕದ ಚಿನ್ನದ ಸರ ಕಸಿದು  ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ಪೀಣ್ಯ ಎಚ್.ಎಂ.ಟಿ ಲೇಔಟ್ ನಲ್ಲಿ ನಡೆದಿದೆ.

ಸರ ಕಳೆದುಕೊಂಡ ಗಂಗಮ್ಮ , ಪೋಲಿಸ್ ಇನ್ಸ್ ಪೆಕ್ಟರ್ ಕೆಂಚೇಗೌಡ ರವರ ಪತ್ನಿ ಎನ್ನಲಾಗಿದೆ. ಗಂಗಮ್ಮ ಎಂದಿನಂತೆ , ತಮ್ಮ ಎಚ್.ಎಂ.ಟಿ ಲೇಔಟ್ ನ ಪೊಲೀಸ್ ವಸತಿ ಗೃಹದ , ಮನೆಯಿಂದ ಕಸವನ್ನು ಹೊರ ಹಾಕಿ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಇಡೀ ಘಟನೆಯನ್ನು  ಪೋಲಿಸ್ ಇನ್ಸ್ ಪೆಕ್ಟರ್ ಕೆಂಚೇಗೌಡ ರವರ ಮನೆಗೆ ಅಳವಡಿಸಲಾಗಿರುವ ಸಿ.ಸಿ.ಟಿ.ವಿ. ಸೆರೆ ಹಿಡಿದಿದೆ.

ಸರಗಳ್ಳತನ-ಪೋಲಿಸ್ ಪತ್ನಿಯ ಸರ ಕಸಿದ ಖದೀಮರು : ನಡೆದದ್ದೇನು ?

ಇಂದು ಮುಂಜಾನೆ ಸುಮಾರು 7.30 ರ ಸಮಯದಲ್ಲಿ ಗಂಗಮ್ಮ ತಮ್ಮ ಮನೆಯ ಕಸವನ್ನು ಹೊರಗೆ ಬಿಸಾಡಿ ವಾಪಾಸ್ಸಾಗುತ್ತಿದ್ದಾಗ ಬೈಕ್ ನಲ್ಲಿ ಬಂದ ಅಪರಿಚಿತರಿಬ್ಬರು , ಬೈಕ್ ನಿಂದ ಕೆಳಗಿಳಿದು ಗಂಗಮ್ಮನ ಕಡೆ ನಡೆದು ಬಂದಿದ್ದಾರೆ , ಗಂಗಮ್ಮ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಏಕಾಏಕಿ ಗಂಗಮ್ಮನ ಕುತ್ತಿಗೆಗೆ ಕೈ ಹಾಕಿದ ಖದೀಮರು ಸರ ಕಸಿದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಗಂಗಮ್ಮ ನ ಕಿರುಚಾಟ ಕೇಳಿದ ಪತಿ ಕೆಂಚೇಗೌಡ ಮನೆಯಿಂದ ಹೊರಬಂದು ಸ್ವಲ್ಪ ದೂರದ ವರೆಗೂ ಹಿಂಬಾಲಿಸಿದರಾದರು , ಹಿಡಿಯುವಲ್ಲಿ ವಿಫಲವಾದರು. ನಂತರ ಘಟನೆಯ ವಿವರವನ್ನು ಜೊತೆಗೆ ಸಿ.ಸಿ.ಟಿ.ವಿ ತುಣುಕನ್ನು ಪೀಣ್ಯ ಪೊಲೀಸರಿಗೆ ನೀಡಿದ್ದು ಈ ಬಗ್ಗೆ ದೂರು ಸಲ್ಲಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ : ಮನೆಯ ಮುಂದೆ ರಂಗೋಲಿ ಆಕುತ್ತಿದ್ದ ಬಾಗಲಕುಂಟೆ ನಿವಾಸಿ ಸುದಾಮಣಿ ರವರ ಸುಮಾರು 50 ಗ್ರಾಂ ತೂಕದ ಸರಗಳ್ಳತನವಾಗಿದೆ.

ಈ ಎರಡೂ ಘಟನೆಗಳು ಒಂದೇ ಗ್ಯಾಂಗ್ ನ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ ಮತ್ತು ತೀವ್ರವಾದ ತನಿಕೆ ನಡೆಸಲಾಗುತ್ತಿದೆ. -| itskananda Crime – it’s Kannada


WebTitle : Chain-Snatching – snatched from Police Wife .

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

ಓದುಗರಿಗೆ ಇನ್ನೂ ಹೆಚ್ಚಿನ ಸುದ್ದಿ ಹಾಗೂ ವಿವರ ನೀಡಲು ಈ ಹೊಸ ಪುಟ ತೆರೆಯಲಾಗಿದೆ. ಅತೀ ಶೀಘ್ರದಲ್ಲೇ –Maulr News TodayDevanahalli News TodayHoskote News TodayYelahanka News TodayKolar News TodayMahadevapura News TodayAnekal News TodayKR Puram News Today