ತಂಗಿ ಜೊತೆ ಅಸಭ್ಯ ವರ್ತನೆ ಕೊಲೆಯಲ್ಲಿ ಅಂತ್ಯ

indecent behavior of Brother with Sister, Ended with murder

ತಂಗಿ ಜೊತೆ ಅಸಭ್ಯ ವರ್ತನೆ ಕೊಲೆಯಲ್ಲಿ ಅಂತ್ಯ

  • ತನ್ನ  ಗುಣಗಳಿಂದ ಅವನು ಕುಟುಂಬಕ್ಕೆ ಬೇಡವಾಗಿದ್ದ.
  • ಮನೆಯವರನ್ನು ಹಿಂಸಿಸುತ್ತಿದ್ದ, ತಂಗಿಯೊಡನೆಯೇ ಅಸಭ್ಯ ವರ್ತನೆ.
  • ಕೊನೆಗೊಂದು ದಿನ ಇದಕ್ಕೆಲ್ಲಾ ಅಂತ್ಯ ಹೇಳೋ ಸಮಯ ಬಂದು ಬಿಟ್ಟಿತ್ತು.

ರಾಷ್ಟ್ರೀಯ-ಗೋರಖ್ಪುರ: ಉತ್ತರ ಪ್ರದೇಶದ ಚಿಲವಾಟ್ ಪೊಲೀಸ್ ಠಾಣೆಯಲ್ಲಿ 24 ವರ್ಷದ ಯುವಕ ಕೊಲ್ಲಲಾಗಿತ್ತು.  ಪೊಲೀಸರು ದೇಹವನ್ನುಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟುಪ್ರಕರಣವನ್ನು ಕೇವಲ ಒಂದು ಘಂಟೆಯಲ್ಲಿ ಭೇದಿಸಿದ್ದಾರೆ.

ಪೊಲೀಸರು ಹೇಳುವಂತೆ, ನಖಾ ಗ್ರಾಮದ ಝಿನಾಕ್ (24) ಎಂಬಾತನ ದೇಹ ಕೊಲ್ಲಲ್ಪಪಟ್ಟ ಸ್ಥಿತಿಯಲ್ಲಿ ಮೃತ ದೇಹ ದೊರಕಿತ್ತು. ಪೊಲೀಸರು ಮಾಹಿತಿಯನ್ನು ಕಲೆಹಾಕಿ ಸತ್ತ ಕುಟುಂಬದ ಸದಸ್ಯರನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ, ಮೃತನ ತಂದೆ ಕೊಲೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಕೊಲೆಯ ಕಾರಣ ತಿಳಿದ ಪೊಲೀಸರಿಗೆ ಒಂದು  ಆಶ್ಚರ್ಯವಾಗಿತ್ತು. ಕೊಲ್ಲುವ ಘೋರ ನಿರ್ಧಾರಕ್ಕೆ ಬರಲು ಕಾರಣ ತಿಳಿದ ಪೊಲೀಸರು ದಿಗ್ಬ್ರಮೆ ಗೊಂಡಿದ್ದರು.

ಝಿನಾಕ್ ಇತ್ತೀಚೆಗೆ ಮನೆಯಲ್ಲಿ ಎಲ್ಲರಿಗೂ ಹಿಂಸಿಸುತ್ತಿದ್ದನು , ಸಹೋದರ ಸಹೋದರಿ ಸೇರಿ ತಂದೆಯನ್ನೂ ಹೊಡೆಯುತ್ತಿದ್ದನಂತೆ, ಪ್ರತಿ ನಿತ್ಯ ಇವನ ಹಿಂಸೆ ತಡೆದು ಕೊಂಡಿದ್ದ ಮನೆಯವರು ಈ ವಿಷಯಕ್ಕೂ ಅವನನ್ನು ಕೊಲ್ಲಲಿಲ್ಲ.

ಅದಕ್ಕೂ ಮೀರಿ , ತನ್ನ ಸ್ವಂತ ತಂಗಿಯನ್ನೇ ಅಸಭ್ಯ ರೀತಿಯಲ್ಲಿ ಕಾಣುತ್ತಿದ್ದನಂತೆ , ಸಹೋದರಿಯ ಮೇಲೆಯೇ ಕೆಟ್ಟ ಭಾವನೆ ಹೊಂದಿದ್ದ ಅವನ ಆಯಸ್ಸು ಮುಗಿದಿತ್ತು , ತಂದೆ , ಸಹೋದರ ಮತ್ತು ಸಹೋದರಿ , ಮೂವರು ಸೇರಿ ಅವನನ್ನು ಕೊಲ್ಲಲು ನಿರ್ಧರಿಸಿದ್ದಾರೆ.

ಅಂತೆಯೇ ಮಾಮೂಲಿನಂತೆ ಮನೆಗೆ ಬಂದ ಝಿನಾಕ್ ನನ್ನ ಮೂವರೂ ಸೇರಿ ಕೊಂದು ಊರ ಹೊರಗೆ ಎಸೆದಿದ್ದರು. ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ಅವರೇ ನೀಡಿದ್ದು ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ..////

WebTitle : ತಂಗಿ ಜೊತೆ ಅಸಭ್ಯ ವರ್ತನೆ ಕೊಲೆಯಲ್ಲಿ ಅಂತ್ಯ-indecent behavior of Brother with Sister, Ended with murder

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Karnataka Crime NewsKannada Crime NewsNational News KannadaNational News Latest