ಪ್ರಸಾದ ‘ವಿಷಾ’ಧ-ಕಣ್ಮುಚ್ಚಿದ ಇನ್ನಿಬ್ಬರು, 7 ಜನರ ಮೇಲೆ ಪ್ರಕರಣ ದಾಖಲು

poisoning of Sulwadi, deaths reached 13-registered a case against seven people

ಪ್ರಸಾದ ‘ವಿಷಾ’ಧ-ಕಣ್ಮುಚ್ಚಿದ ಇನ್ನಿಬ್ಬರು, 7 ಜನರ ಮೇಲೆ ಪ್ರಕರಣ ದಾಖಲು

  • ಸೂಲ್ವಾಡಿ ಪ್ರಸಾದ ವಿಷಕ್ಕೆ ಮತ್ತೆರೆಡು ಬಲಿ. ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ .
  • ಸಾವಿನ ಸಂಖ್ಯೆ 13 ಕ್ಕೆ , ಪೊಲೀಸರಿಂದ ಸೋಲೂರು ಮಠಾಧೀಶರ ವಿಚಾರಣೆ.
  • 13 ಸಾವು , 28 ಜನ ಚಿಂತಾಜನಕ , 92 ಮಂದಿಗೆ ಇನ್ನೂ ಚಿಕಿತ್ಸೆ.

ಹನೂರಿನ ಸುಲ್ವಾಡಿ ಗ್ರಾಮದ ದೇವಾಲಯದಲ್ಲಿ ಪ್ರಸಾದ ಸೇವಿಸಿ 10  ಅಮಾಯಕರು ಅಸುನೀಗಿದ್ದರು. ಆದರೆ ಗ್ರಾಮವನ್ನು ವಿಷಾ’ದವು ಇನ್ನೂ ಬೆನ್ನಟ್ಟುತ್ತಲೇ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನಿಬ್ಬರು ಕಣ್ಣುಮುಚ್ಚಿದ್ದಾರೆ.

ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಲಮ್ಮ (35) ಮಹೇಶ್ವರಿ (35) ಕೊನೆಯುಸಿರೆಳೆದಿದ್ದಾರೆ. ತೀವ್ರ ಅಸ್ವಸ್ಥ ಹೊಂದಿದ್ದ ಇಬ್ಬರು ಮುಂಜಾನೆ 8.10 ಕ್ಕೆ ಸಾವನ್ನಪ್ಪಿದ್ದಾರೆ. ಸೋಲಮ್ಮನ ಪತಿ ಆರು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಮೃತರಾಗಿದ್ದರು.

ಪ್ರಸಾದ ರೂಪದಲ್ಲಿ ಬಂದ ಜವರಾಯ ಇದೀಗ ಇವರ ಬದುಕಿಗೂ ನಾಂದಿ ಹಾಡಿದ್ದಾನೆ. ಇನ್ನೂ 92 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ , 28 ಜನರ ಸ್ಥಿತಿ ಚಿಂತಾಜನಕವಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಅನುಕೂಲಕ್ಕಾಗಿ ಪ್ರತಿ ಆಸ್ಪತ್ರೆಯಲ್ಲೂ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಈ ನಡುವೆ ಘಟನೆಗೆ ಸಂಬಂಧಿಸಿದಂತೆ ರಾಂಪುರ ಪೊಲೀಸರು 7 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಡಿಎಸ್ಪಿ ವಿಚಾರಣೆ ನಡೆಸುತ್ತಿದ್ದಾರೆ.

ಶನಿವಾರ ಮಧ್ಯರಾತ್ರಿ ತನಕ ಪೊಲೀಸರು ಚಿನ್ನಪ್ಪ ಮತ್ತು ಮಾದೇಶ್ ರ ವಿಚಾರಣೆ ಮಾಡಿದ್ದಾರೆ. ಇವರ ಜೊತೆ ಈರಣ್ಣ , ಲೋಕೇಶ್, ಪುಟ್ಟಸ್ವಾಮಿ, ಮಹಾದೇವ ಪೂಜಾರಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಚಿನ್ನಪ್ಪನ ಮಗ ಲೋಕೇಶ್ ಆರೋಪದ ಮೇಲೆ ಸೋಲೂರು ಮಠಾಧಿಪತಿ ಇಮ್ಮಡಿ ಮಹದೇವಸ್ವಾಮಿಯನ್ನು ಪೊಲೀಸರು ವಿಚಾರಣೆ ನಡೆಸಿದರು.

ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ, ಎಲ್ಲಾ ರೀತಿಯ ಆಯಾಮದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.////

WebTitle : ಪ್ರಸಾದ ‘ವಿಷಾ’ಧ-ಕಣ್ಮುಚ್ಚಿದ ಇನ್ನಿಬ್ಬರು, 7 ಜನರ ಮೇಲೆ ಪ್ರಕರಣ ದಾಖಲು-poisoning of Sulwadi, deaths reached 13-registered a case against seven people

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Crime NewsKarnataka Crime News