ಈಗ ಅತ್ಯಾಚಾರ ಆರೋಪಿ, ಈ ಹಿಂದೆ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದ

ಈ ಹಿಂದೆ ಅತ್ಯಾಚಾರವನ್ನು ಖಂಡಿಸಿ, ಪ್ರತಿಭಟನೆ ಮಾಡಿ, ಕ್ಯಾಂಡೆಲ್ ಬೆಳಗಿಸಿ ಥೇಟ್ ದೇವಧೂತನಂತೆ ವರ್ತಿಸಿದ್ದ, ಆರೋಪಿ ಈಗ ಅತ್ಯಾಚಾರ ನಡೆಸಿದ್ದಾನೆ.

ಈ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ “ಕತುವಾ ಅತ್ಯಾಚಾರ ಪ್ರಕರಣ” ವನ್ನು ವಿರೋಧಿಸಿ, ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದ ಮಹಮ್ಮದ್ ಶಕೀಲ್, ಅತ್ಯಾಚಾರದಂತಹ ಪ್ರಕರಣಗನ್ನು ಖಂಡಿಸಿ, ಪ್ರತಿಭಟನೆ, ರ್ಯಾಲಿಗಳು ನಡೆಸಿ ತನ್ನನ್ನು ತಾನು ಗುರುತಿಸಿ ಕೊಂಡಿದ್ದ, ಆದರೆ ಅವನಲ್ಲಿ ಒಬ್ಬ ಅತ್ಯಾಚಾರಿ ಇದ್ದಾನೆ ಎಂಬ ವ್ಯಾಘ್ರ ಮುಖ ತೋರಿದ್ದಾನೆ.

ಹೈದರಾಬಾದ್ : ನಗರದ ಚಾದರ್‌ಘಾಟ್‌ನಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಪ್ರಮುಖ ಮತ್ತು ಏಕಮಾತ್ರ ಆರೋಪಿ ಮೊಹಮ್ಮದ್ ಶಕೀಲ್ ಈ ಹಿಂದೆ ರ್ಯಾಲಿಗಳು ಮತ್ತು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದು, 2018 ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕಥುವಾ ದಲ್ಲಿ ನಡೆದ ಅಪಹರಣ, ಅತ್ಯಾಚಾರ ಮತ್ತು ಕ್ರೂರವಾಗಿ ಹತ್ಯೆಗೀಡಾದ ಎಂಟು ವರ್ಷದ ಬಾಲಕಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದ.

ಅಬ್ಬಾ ಎಂತಾ ಗೋ ಮುಖ ವ್ಯಾಘ್ರ ಇವನು, ಈ ಹಿಂದೆ ದೇಶವನ್ನೇ ಬೆಚ್ಚಿ ಬೀಳಿಸಿದ್ದ “ಕತುವಾ ಅತ್ಯಾಚಾರ ಪ್ರಕರಣ” ವನ್ನು ವಿರೋಧಿಸಿ, ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದ ಮಹಮ್ಮದ್ ಶಕೀಲ್ ಈಗ ಅನಾಥ ಬಾಲಕಿಯನ್ನು ಅತ್ಯಾಚಾರ ಮಾಡಿ ಕಂಬಿ ಹಿಂದೆ ಬಿದ್ದಿದ್ದಾನೆ.

ಪಾಪ ಆ ಬಾಲಕಿಗೆ ಅಪ್ಪ ಅಮ್ಮ ಇಲ್ಲ, ಅನಾಥಳಾಗಿದ್ದರಿಂದ ಅವರ ಚಿಕ್ಕಪ್ಪನೇ ತಮ್ಮ ಮನೆಗೆ ತಂದು ಸಲುಹುತ್ತಿದ್ದ. ಎಲ್ಲವೂ ಸರಿಯಾಗೆ ಇತ್ತು, ಕಳೆದ ಕೆಲವು ವಾರಗಳಿಂದ ಪ್ರೀತಿಯ ನೆಪದಲ್ಲಿ ಶಕೀಲ್ ಬಾಲಕಿಗೆ ಕಿರುಕುಳ ನೀಡಲಾರಂಭಿಸಿದ್ದ. ಆದರೆ ಆ ಬಾಲಕಿ ಅವನ ಚೇಷ್ಟೆಗಳನ್ನು ಒಪ್ಪಿರಲಿಲ್ಲ. ಮೂರು ದಿನಗಳ ಹಿಂದೆ, ಪ್ರಕೃತಿಯ ಕರೆಗಾಗಿ ಹೊರ ಬಂದಾಗ, ಶಕೀಲ್ ಆಕೆಯನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡಿದ್ದಾನೆ.

ರಾಜಕಾರಣಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಶಕೀಲ್ ಅನ್ನು ಪ್ರಕರಣದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳ ಮಧ್ಯೆ, ಚಾದರ್‌ಘಾಟ್ ಪೊಲೀಸರು ಆತನ ಮೇಲೆ ಅತ್ಯಾಚಾರ, ಬೆದರಿಕೆ, ಪೋಕ್ಸೊ ಮತ್ತು ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧನದ ನಂತರ, ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಶಕೀಲ್ ವಿರೋಧಿಸಿ, ಪ್ರತಿಭಟನೆ ಮತ್ತು ಕ್ಯಾಂಡಲ್ ಲೈಟ್ ಬೆಳಗಿಸುವುದು, ರ್ಯಾಲಿಗಳಲ್ಲಿ ಭಾಗವಹಿಸಿದ್ದ ಚಿತ್ರಗಳು ವೈರಲ್ ಆಗಿವೆ. 

Web Title : rape accused protested against Kathua minor rape case