ಬ್ಯಾಗ್ ಕಸಿಯಲು ಬೆರಳುಗಳನ್ನೇ ಕತ್ತರಿಸಿದ ಕಿಡಿಗೇಡಿಗಳು

The thieves cut off the fingers to steal the bag

ಬ್ಯಾಗ್ ಕಸಿಯಲು ಬೆರಳುಗಳನ್ನೇ ಕತ್ತರಿಸಿದ ಕಿಡಿಗೇಡಿಗಳು

  • ಸಂಬಂಧಿಕರನ್ನು ನೋಡಲು ಹೋರಟ ಮಹಿಳೆ .
  • ಬ್ಯಾಗ್ ಕಸಿಯಲು ಬಂದ ಧುರುಳರು, ಬಿಗಿಯಾಗಿ ಹಿಡಿದ ಮಹಿಳೆ.
  • ನೀಡಲು ನಿರಾಕರಿಸಿದ ಮಹಿಳೆ ಕೈ ಬೆರಳು ಕತ್ತರಿಸಿದ ಪಾತಕಿಗಳು.

ನವದೆಹಲಿ : ಬೈಕ್ ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು , ಆಟೋದಲ್ಲಿ  ಪ್ರಯಾಣಿಸುತ್ತಿದ್ದ ಮಹಿಳೆಯಿಂದ ಬ್ಯಾಗ್ ಕಸಿದು ಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆಕ್ಷಣಕ್ಕೆ ಎಚ್ಚೆತ್ತುಕೊಂಡ ಮಹಿಳೆ ಬ್ಯಾಗ್ ಅವರ ಕೈ ಸೇರದಂತೆ ಬಿಗಿಯಾಗಿ ಹಿಡಿದಿದ್ದಾಳೆ.

ಕಿಡಿಗೇಡಿಗಳು ಎಷ್ಟೇ ಪ್ರಯತ್ನಿಸಿದರೂ ಹಿಡಿದ ಬ್ಯಾಗ್ ನಿರಾಕರಿಸಿದ್ದಾಳೆ, ಮೊದಲೇ ಎಲ್ಲದಕ್ಕೂ ಸಿದ್ಧವಾಗಿಯೇ ಬಂದಿದ್ದ ಕಿಡಿಗೇಡಿಗಳು ಅಷ್ಟಕ್ಕೇ ಸುಮ್ಮನಾಗದೆ , ಬೈಕ್  ಕುಳಿತಿದ್ದ ವ್ಯಕ್ತಿ ತನ್ನ ಬಳಿಯಿದ್ದ ಚಾಕು ಹಿಡಿದು ಬೈಕ್ ಇಳಿದಿದ್ದಾನೆ.

ಇತ್ತ ಮಹಿಳೆ ಬ್ಯಾಗನ್ನು ಗಟ್ಟಿಯಾಗಿ ಹಿಡಿದ್ದಿದ್ದು , ಈಕೆ ಬಿಡುವುದಿಲ್ಲ ಎಂದು ಅರಿತ ಆತ ಆಕೆಯ ಬೆರಳುಗಳನ್ನು ಕತ್ತರಿಸಿ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ.

ಬ್ಯಾಗಿನಲ್ಲಿ ಎರಡು ಚಿನ್ನದ ಬಳೆಗಳು ಹಾಗೂ ಐದು ಸಾವಿರ ನಗದು ಇತ್ತು ಎಂಬುದು ತಿಳಿದು ಬಂದಿದೆ. ಮಹಿಳೆ ದೆಹಲಿಯ ಸಂಗಮ್ ವಿಹಾರದ ಶಾಲಿನಿ ಗಾರ್ಗ್ (43) ಎನ್ನಲಾಗಿದೆ.

ಆಸ್ಪತ್ರೆಯಲ್ಲಿದ್ದ ತನ್ನ ಸಂಬಂಧಿಯನ್ನು ನೋಡಲು ಹೋಗುತ್ತಿದ್ದ ಮಹಿಳೆಯನ್ನು ಹಿಬಾಲಿಸಿರುವ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.

ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು , ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ////

WebTitle : ಬ್ಯಾಗ್ ಕಸಿಯಲು ಬೆರಳುಗಳನ್ನೇ ಕತ್ತರಿಸಿದ ಕಿಡಿಗೇಡಿಗಳು-The thieves cut off the fingers to steal the bag

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Kannada Crime NewsKarnataka Crime NewsNational News Kannada