ಶಾಲೆ ಸಮೀಪ ಹನ್ನೆರಡು ಮಾನವ ತಲೆಬುರುಡೆಗಳು

Twelve human skulls near the school | itskannada Crime

ಮೈಸೂರು:  ( itskannada ) ಇಂದು ನಗರದ Sadvidya  ಶಾಲೆ ಸಮೀಪ ಹನ್ನೆರಡು ಮಾನವ ತಲೆಬುರುಡೆಗಳು ಕಂಡುಬಂದಿವೆ. ಈ ಬೆಳಿಗ್ಗೆ ವಿಜಯನಗರ 2ನೇ ಹಂತದಲ್ಲಿ ತಲೆಬುರುಡೆಗಳನ್ನು ಗಮನಿಸಿದ ನಿವಾಸಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.  ತಕ್ಷಣ ಸ್ಥಳಕ್ಕೆ ಆಗಮಿಸಿದಾಗ ಪೊಲೀಸರು ಪರಿಶೀಲಿಸಿ , ನಂತರ ಮೈಸೂರು ಸಿಟಿ ಕಾರ್ಪೊರೇಷನ್  ಕಾರ್ಮಿಕರನ್ನು ಕರೆಯಿಸಿ ತಲೆಬುರುಡೆಗಳಿದ್ದ  ಪ್ರದೇಶವನ್ನು ಸ್ವಚ್ಛ ಗೊಳಿಸಿ ತಲೆಬುರುಡೆಗಳನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ.

ದಿಡೀರ್ ಪ್ರತ್ಯಕ್ಷವಾದ ತಲೆಬುರುಡೆಗಳನ್ನು ಕಂಡು ಅಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದರು. ಅಲ್ಲಿನ ಕೆಲವು ನಿವಾಸಿಗಳು ಮಂತ್ರವಿದ್ಯೆ ಅಥವಾ ಮಾಟಗಳಲ್ಲಿ ತೊಡಗಿರುವ ಯಾರೋ ಈ ತಲೆಬುರುಡೆಗಳನ್ನು ಇಲ್ಲಿ ಎಸೆದಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟರು, ಇನ್ನೂ ಕೆಲವರು ಯಾವುದೋ ಆಸ್ಪತ್ರೆ ಸಿಬ್ಬಂದಿಗಳು ಇಲ್ಲಿ ಎಸೆದಿರಬಹುದು ಇದು ಅವರದೇ ಕೈಚಳಕ ಎಂದು ಶಂಕಿಸಿದ್ದಾರೆ.

ಈ ಬಗ್ಗೆ ಪೊಲೀಸರು ಇಡೀ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. | itskannada Crime


WebTitle : ಶಾಲೆ ಸಮೀಪ ಹನ್ನೆರಡು ಮಾನವ ತಲೆಬುರುಡೆಗಳು ,Twelve human skulls near the school ,

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.