ತಲೆನೋವಿಗೆ ಸುಲಭ ಪರಿಹಾರ-ಮನೆಮದ್ದು

Home Remedies For Headache-Kannada | itskannada

Health Tips : (itskannada) ತಲೆನೋವಿಗೆ ಸುಲಭ ಪರಿಹಾರ ಅಥವಾ ತಲೆನೋವಿಗೆ ಮನೆಮದ್ದು : ಜೀವನವು ಸಾಕಷ್ಟು ಕಾರ್ಯನಿರತ ಮತ್ತು ಒತ್ತಡದಿಂದ ಕೂಡಿರುತ್ತದೆ, ಮತ್ತು “ಸಾಮಾನ್ಯ” ತಲೆನೋವು ಕೆಲವೊಮ್ಮೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚು ನೀರು ಕುಡಿಯಬೇಕು ಅಥವಾ ನೀವು ತಿನ್ನುವ ರೀತಿಯನ್ನು ಬದಲಿಸಬೇಕು. ನೀವು ವಿಟಮಿನ್ ಅಥವಾ ಪೌಷ್ಟಿಕಾಂಶದ ಕೊರತೆಯನ್ನು ಹೊಂದಿರಬಹುದು ಅಥವಾ ಆಹಾರದ ಸೂಕ್ಷ್ಮತೆ ಇದಕ್ಕೆ ಕಾರಣವಾಗಬಹುದು, ನಿಮ್ಮ ಕಿರಿಕಿರಿಯ ತಲೆನೋವು ದೂರವಾಗಲು ತಲೆನೋವಿಗೆ ಸುಲಭ ಪರಿಹಾರ ಅಥವಾ ತಲೆನೋವಿಗೆ ಮನೆಮದ್ದು ನೈಸರ್ಗಿಕವಾಗಿ ಮನೆಯಲ್ಲಿಯೇ ಮಾಡಬಹುದು.

ತಲೆನೋವಿಗೆ ಸುಲಭ ಪರಿಹಾರ-ಮನೆಮದ್ದು-Home Remedies For Headache-Kannada

ಕೆಲವೊಮ್ಮೆ ಹೆಚ್ಚಾದ ಒತ್ತಡ, ಆಯಾಸ, ಅಲರ್ಜಿಗಳು, ಆಲ್ಕೊಹಾಲ್ ಅಥವಾ ಡ್ರಗ್ಸ್, ಕಡಿಮೆ ರಕ್ತದೊತ್ತಡ , ಹಾರ್ಮೋನುಗಳು, ಮಲಬದ್ಧತೆ ಮತ್ತು ಪೌಷ್ಟಿಕಾಂಶದ ಕೊರತೆಗಳಿಂದ ತಲೆನೋವು ಉಲ್ಬಣಿಸಬಹುದು. ನೈಸರ್ಗಿಕ ಮತ್ತು ಆರೋಗ್ಯಕರ ರೀತಿಯಲ್ಲಿ ತಲೆನೋವು ಹೋಗಲಿಸಲು ಈ ತಲೆನೋವಿಗೆ ಸುಲಭ ಪರಿಹಾರ ಗಳನ್ನು ಬಳಸಿ.

ತಲೆನೋವಿಗೆ ಸುಲಭ ಪರಿಹಾರ-ತಲೆನೋವಿಗೆ ಮನೆಮದ್ದು

  • ಸರಿಯಾದ ನಿದ್ದೆ : ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನಿದ್ದೆ ಮಾಡುವುದು ಸಹ ಅಷ್ಟೇ ಮುಖ್ಯ. ನಿದ್ರಾಹೀನತೆಯೂ ತಲೆ ನೋವಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಕೆಲಸದ ಒತ್ತಡದಿಂದ ನಿದ್ದೆಯಕಡೆ ಗಮನಹರಿಸದಿದ್ದಲ್ಲಿ ತಲೆನೋವಿಗೆ ಗುರಿಯಾಗಬೇಕಾಗುತ್ತದೆ.
  • ಮಸಾಜ್ ಮಾಡಿ : ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿಕೊಳ್ಳುತ್ತಿದ್ದರೆ ತಲೆನೋವಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಹಣೆ, ಕತ್ತು, ಕಿವಿಯ ಭಾಗ, ಕಣ್ಣಿನ ಮೇಲ್ಭಾಗವನ್ನೂ ನಿಧಾನವಾಗಿ ಮಸಾಜ್ ಮಾಡಿ.
  • ಶುಂಠಿ ಮತ್ತು ನಿಂಬೆರಸ : ತಲೆನೋವು ಬಂದಾಗ ಶುಂಠಿ ರಸ Home Remedies For Headache-Kannada-itskannadaಮತ್ತು ನಿಂಬೆರಸವನ್ನು ಸಮಪ್ರಮಾಣದಲ್ಲಿ ಸೇರಿಸಿಕೊಂಡು ದಿನಕ್ಕೆ ಎರಡು ಬಾರಿ ಕುಡಿದರೆ ತಲೆನೋವು ಮಾಯವಾಗುತ್ತದೆ.
  • ಶುಂಠಿ ಪೇಸ್ಟ್‌ : ಒಂದು ಚಮಚ ಒಣ ಶುಂಠಿ ಪುಡಿಗೆ ಎರಡು ಚಮಚ ನೀರು ಪೇಸ್ಟ್‌ ಮಾಡಿಕೊಳ್ಳಬೇಕು. ಇದನ್ನು ಹಣೆಯ ಭಾಗಕ್ಕೆ ಹಚ್ಚಿ ಕೆಲವು ನಿಮಿಷ ಬಿಟ್ಟು ತೊಳೆದರೆ, ನೋವು ನಿವಾರಣೆಯಾಗಿ ಒತ್ತಡ ಕಡಿಮೆಯಾಗುತ್ತದೆ.
  • ಪುದೀನ ಎಲೆ : ಪುದೀನ ಎಲೆಯನ್ನು ಹಿಂಡಿ ರಸ ತೆಗೆದು ಹಣೆಯ ಭಾಗಕ್ಕೆ ವಾರಕೊಮ್ಮೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ. ಹಚ್ಚಿದ ಪುದೀನ ರಸವನ್ನು ಬೆಚ್ಚಗಿನ ನೀರಲ್ಲಿ ತೊಳೆದುಕೊಳ್ಳಿ.
  • ಶುಂಠಿ ಚಹಾ : ಶುಂಠಿ ಚಹಾ ತಲೆನೋವಿಗೆ ಉತ್ತಮ ಪರಿಹಾರ ನೀಡುತ್ತದೆ .ಅರ್ಧ ಟಿ ಚಮಚ ಚಹಾ ಹುಡಿ ,ಸ್ವಲ್ಪ ಬೆಲ್ಲ /ಸಕ್ಕರೆ ,ತುರಿದ ಶುಂಠಿ ಸೇರಿಸಿ ಚಹಾ ತಯಾರಿಸಿ ಕುಡಿಯಿರಿ.ಇದರಿಂದ ತಲೆನೋವು ಬೇಗ ಕಡಿಮೆಯಾಗುತ್ತದೆ .
  • ನೀಲಗಿರಿ ತೈಲ : ನೀಲಗಿರಿ ತೈಲದಿಂದ ಹಣೆಯನ್ನು ಮಸಾಜು ಮಾಡುವುದು .ಸ್ವಲ್ಪ ನೀಲಗಿರಿ ತೈಲವನ್ನು ತೆಗೆದುಕೊಂಡು ಹಣೆಗೆ ನಿಧಾನವಾಗಿ ಮಸಾಜು ಮಾಡುವುದು ಒತ್ತಡ ಕಡಿಮೆ ಮಾಡುವುದರೊಂದಿಗೆ ತಲೆ ನೋವನ್ನು ನೀಗಿಸುತ್ತದೆ.ತಲೆನೋವು ನಿಧಾನವಾಗಿ ಕಡಿಮೆಯಾಗುತ್ತದೆ.
  • ಶ್ರೀಗಂಧ : ಶ್ರೀಗಂಧ ಕೂಡ ತಲೆನೋವಿಗೆ ಪರಿಹಾರ ನೀಡುತ್ತದೆ.ಶ್ರೀಗಂಧ ಕೊರಡನ್ನು ತೆಗೆದುಕೊಂಡು ತೇಯ್ದು ಆ ಗಂಧವನ್ನು ತಲೆಗೆ ಹಚ್ಚಿ .ಇದನ್ನು ದಿನ ನಿತ್ಯ ಮಾಡುವುದರಿಂದ ದೀರ್ಘ ಕಾಲದ ತಲೆನೋವು ಕೂಡ ಕಡಿಮೆಯಾಗುತ್ತದೆ.
  • ಬೆಳ್ಳುಳ್ಳಿ : ಬೆಳ್ಳುಳ್ಳಿ ತೆಗೆದುಕೊಂಡು ಅದರಿಂದ ರಸ ತೆಗೆದು1 ಚಮಚದಷ್ಟು ಕುಡಿಯಿರಿ.ಇದು ನೋವು ನಿವಾರಕದಂತೆ ಕೆಲಸಮಾಡುತ್ತದೆ ಮತ್ತು ತಲೆನೋವು ಸಂಪೂರ್ಣ ಕಡಿಮೆ ಆಗುತ್ತದೆ.
  • ಕೊತ್ತಂಬರಿ ಸೊಪ್ಪು : ಕೊತ್ತಂಬರಿ ಸೊಪ್ಪು ,ಜೀರಿಗೆ ಮತ್ತು ಶುಂಟಿ ಬೆರೆಸಿ ಮಾಡಿದ ಕಷಾಯ ಅಥವಾ ಟೀ ಕುಡಿಯುವುದರಿಂದ ತಲೆನೋವು ಸುಲಭವಾಗಿ ಮತ್ತು ಬೇಗ ಕಡಿಮೆ ಆಗುತ್ತದೆ.

ಇನ್ನಷ್ಟು ತಲೆನೋವಿಗೆ ಸುಲಭ ಪರಿಹಾರ-ತಲೆನೋವಿಗೆ ಮನೆಮದ್ದು-Home Remedies For Headache-Kannada

ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಅರ್ಧ ತಲೆನೋವು ಒಂದು. ವಾಕರಿಕೆ, ವಾಂತಿ, ಸುಸ್ತು ಇವುಗಳೊಂದಿಗೆ ತಲೆಯ ಎಡ ಅಥವಾ ಬಲಭಾಗದಲ್ಲಿ ಅತಿಯಾದ ನೋವು ಕಾಡುತ್ತದೆ. ಯೋಗ ಹಾಗೂ ನಿಸರ್ಗ ಚಿಕಿತ್ಸೆಗಳು ಬಹುತೇಕ ಮಂದಿಗೆ ಯಶಸ್ವಿ ಪರಿಹಾರ ನೀಡಬಲ್ಲವು.

ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯುವುದರಿಂದ ಕಟ್ಟಿದ ಮೂಗು, ಗಂಟಲಿನ ಕಿರಿಕಿರಿ ಹಾಗೂ ಸೈನಸ್ ನಿಂದ ಉಂಟಾದ ತಲೆನೋವುಗಳೆಲ್ಲವೂ ನಿವಾರಣೆಯಾಗುತ್ತದೆ.ಪ್ರತಿ ದಿನ ಬಿಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದಿಲ್ಲ. ಅಲ್ಲದೆ ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.ಅರೆತಲೆನೋವಿನಿಂದ ಬಳಲುತ್ತಿರುವವರು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಪ್ಪದೆ ನೀರು ಕುಡಿಯುವುದರಿಂದ ರೂಢಿ ಮಾಡಿಕೊಂಡರೆ ಪರಿಹಾರ ಸಿಗುತ್ತದೆ. ಮತ್ತು ನರಗಳಿಗೆ ಸಂಬಂಧಿಸಿದ ಅನೇಕನೋವುಗಳನ್ನು ನಿವಾರಿಸುತ್ತದೆತಲೆನೋವಿಗೆ ಮನೆಮದ್ದು-itskannada 1.

ನೆಲ್ಲಿಕಾಯಿಯ ಶರಬತ್ತು ಮಾಡಿ ಕುಡಿಯುವುದರಿಂದ ತಲೆ ತಿರುಗುವುದು ನಿಲ್ಲುತ್ತದೆ. ಹುಣಿಸೆ ಹಣ್ಣಿನ ಸಕ್ಕರೆ ಪಾನಕ ಕುಡಿದರೆ ತಲೆನೋವು ಪರಿಹಾರವಾಗುತ್ತದೆ. ಉಷ್ಣದಿಂದ ತಲೆನೋವು ಉಂಟಾದರೆ ಕಲ್ಲಂಗಡಿಯ ರಸವನ್ನು ತೆಗೆದು ಸ್ವಲ್ಪ ಕಲ್ಲುಸಕ್ಕರೆ ಹಾಕಿ ಕುಡಿದರೆ ಗುಣವಾಗುತ್ತದೆ. ಸೇಬಿಗೆ ಸ್ವಲ್ಪ ಉಪ್ಪು ಹಚ್ಚಿ ಸೇವಿಸಿದರೆ ತಲೆನೋವ್ವು ಕಡಿಮೆಯಾಗುತ್ತದೆ. ಏಲಕ್ಕಿ ಚೂರ್ಣ ಬೆರೆಸಿದ ನಿಂಬೆ ಪಾನಕ ಸೇವಿಸಿದರು ತಲೆ ತಿರುಗು ನಿಲ್ಲುತ್ತದೆ. ಇವಿಷ್ಟು ತಲೆನೋವಿಗೆ ಸುಲಭ ಪರಿಹಾರ ಅಥವಾ ತಲೆನೋವಿಗೆ ಮನೆಮದ್ದು ,// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Kannada Home Remedies

WebTitle : ತಲೆನೋವಿಗೆ ಸುಲಭ ಪರಿಹಾರ-ಮನೆಮದ್ದು-Home Remedies For Headache-Kannada // ಇದನ್ನು ಓದಿ – ಮೊಡವೆಗಳ ಸುಲಭ ಪರಿಹಾರ – ಮನೆ ಮದ್ದು