ಹಲ್ಲು ನೋವಿಗೆ ಪರಿಹಾರ-ಮನೆಮದ್ದು

Home Remedies For Tooth Pain-Kannada

Health Tips : ( itskannada)  ಹಲ್ಲು ನೋವಿಗೆ ಪರಿಹಾರ-ಹಲ್ಲು ನೋವಿಗೆ ಮನೆಮದ್ದು : Home Remedies For Tooth Pain-Kannada : ನಿಮಗೆ ಹಲ್ಲುನೋವು ಇದ್ದರೆ, ನಿಮ್ಮ ಹಲ್ಲು ನೋವಿನ ಮೂಲ ಅಥವಾ ಹಲ್ಲು ನೋವಿನ ಕಾರಣ ಏನೆಂದು ಲೆಕ್ಕಾಚಾರ ಮಾಡುವುದು ಮುಖ್ಯ.ಅದರಿಂದ ಹಲ್ಲು ನೋವಿಗೆ ಪರಿಹಾರ,ಹಲ್ಲಿನ ರಕ್ಷಣೆ ಸಿಗುವುದು ಸುಲಭ. ಅಲ್ಲಿಂದ, ಯಾವುದೇ ನೋವು, ಊತ, ಅಥವಾ ಇತರ ರೋಗಲಕ್ಷಣಗಳನ್ನು ಹೇಗೆ ಅತ್ಯುತ್ತಮವಾಗಿ ನಿವಾರಿಸಬೇಕೆಂದು ನೀವು ನಿರ್ಧರಿಸಬಹುದು.

ಉಪ್ಪು ನೀರನ್ನು ಬಳಸಿ ಬಾಯಲ್ಲಿ ಮುಕ್ಕಳಿಸಿ ಆ ಕ್ಷಣಕ್ಕಾಗುವ ಸಣ್ಣ ಕಿರಿಕಿರಿಯನ್ನು ತಗ್ಗಿಸಬಹುದು, ಆದರೆ ಹೆಚ್ಚು ಗಂಭೀರ ಹಲ್ಲು ನೋವಿಗೆ ದಂತವೈದ್ಯರ ಸಲಹೆ ಅಗತ್ಯವಿರುತ್ತದೆ. ನಿಮ್ಮ ರೋಗಲಕ್ಷಣಗಳು ಒಂದು ದಿನ ಅಥವಾ ಎರಡು ಕ್ಕಿಂತ ಹೆಚ್ಚು ಕಾಲ ಇದ್ದರೆ, ನಿಮ್ಮ ದಂತವೈದ್ಯರನ್ನು ಕಾಣಿರಿ. ನಿಮ್ಮ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ತಡೆಗಟ್ಟುವ ಬಗೆಗೆ ಅವರು ಮಾರ್ಗದರ್ಶನ ನೀಡಬಹುದು.

ಹಲ್ಲು ನೋವಿಗೆ ಪರಿಹಾರ-ಹಲ್ಲು ನೋವಿಗೆ ಮನೆಮದ್ದು : Home Remedies For Tooth Pain-Kannada

ಲವಂಗ: ಲವಂಗದ ಎಣ್ಣೆಯಲ್ಲಿ ಚಿಕ್ಕ ಹತ್ತಿ ಉಂಡೆ ಅದ್ದಿ, ನಂತರ ನೋವು ಇರೋ ಜಾಗದಲ್ಲಿ ಆ ಹತ್ತಿ ಉಂಡೆಯನ್ನು ಇಟ್ಟು ಕೊಂಡರೆ ಹಲ್ಲು ನೋವು ನಿವಾರಣೆಯಾಗುತ್ತದೆ. ಇದನ್ನು ದಿನಕ್ಕೆ 2-3 ಬಾರಿ ಮಾಡಿದ್ರೆ ಒಳ್ಳೆಯ ಪರಿಣಾಮ ಕೊಡುತ್ತದೆ.
ಅಥವಾ ಲವಂಗವನ್ನು ಅಗೆದು ನೋವು ಇರೋ ಜಾಗದಲ್ಲಿ ಇಟ್ಟು ಕೊಂಡರೆ ಹಲ್ಲು ನೋವು ಕ್ರಮೇಣ ವಾಸಿಯಾಗುತ್ತದೆ. ಇದು ಉತ್ತಮವಾಗಿ ಹಲ್ಲು ನೋವಿಗೆ ಪರಿಹಾರ.

ಉಪ್ಪು: ಹಲ್ಲಿನಲ್ಲಿ ಉಪ್ಪಿನಾಂಶ ಕಡಿಮೆ ಯಾದಾಗ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ. ಹಲ್ಲಿನಲ್ಲೂ ಉಪ್ಪಿನಾಂಶ ಕಡಿಹಲ್ಲು ನೋವಿಗೆ ಮನೆಮದ್ದು-itskannadaಮೆಯಾಗಿ ಹಲ್ಲಿನ ಸೋಂಕು ಹೆಚ್ಚಿಸುತ್ತದೆ. ಹಾಗಾಗಿ ನಿತ್ಯವೂ ಉಪ್ಪಿನಿಂದ ಹಲ್ಲನ್ನು ಉಜ್ಜಿದರೆ ಹಲ್ಲು ನೋವು ಕಾಣಿಸಿಕೊಳ್ಳುವ ಸಂಭವ ಕಡಿಮೆ ಇರುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಪ್ರತಿರೋಧಕ ಶಕ್ತಿ ಇರುತ್ತದೆ. ಇದು ಒಂಥರಾ ಆಂಟಿ ಸೆಪ್ಟಿಕ್ಟ್ ಹಾಗೆ ಕೆಲಸ ಮಾಡುತ್ತದೆ. ಹಾಗಾಗಿ ಹಲ್ಲು ನೋವಿದ್ದಾಗ ಬೆಳ್ಳುಳ್ಳಿಯನ್ನು ಜಜ್ಜಿ ನೋವಿದ್ದ ಜಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಿ. ದಿನವೂ ಒಂದು ಎಸಳು ಬೆಳ್ಳುಳ್ಳಿ ತಿಂದ್ರೆ ಹಲ್ಲು ನೋವು ಬರದೇ ಇರುವ ಹಾಗೆ ಸಹಾಯ ಮಾಡುತ್ತದೆ.

ಬೇವು : ಹಲ್ಲು ಉಜ್ಜುವಲ್ಲಿ ಬೇವಿನ ಕಡ್ಡಿಯ ಸಾಂಪ್ರದಾಯಕ ಪದ್ಧತಿಯಾಗಿದೆ. ಬೇವಿನ ಕಡ್ಡಿಯನ್ನು ಬ್ರೆಶ್ ನಂತೆಯೇ ಹಲ್ಲು ಉಜ್ಜಲು ಉಪಯೋಗಿಬಹುದು. ಹಲ್ಲು ನೋವು ಇಲ್ಲದಿದ್ದರು ಬೇವಿನ ಕಡ್ಡಯಿಂದ ನಿತ್ಯವೂ ಹಲ್ಲು ಉಜ್ಜಿದ್ರೆ ವಸಡುಗಳು ಗಟ್ಟಿಯಾಗಿರುತ್ತವೆ ಮತ್ತು ಹಲ್ಲುಗಳು ಸಹ ಅರೋಗ್ಯವಾಗಿರುತ್ತವೆ. ಬೇವಿನ ಕಡ್ಡಿ ನಿತ್ಯವೂ ಲಭ್ಯವಿಲ್ಲದಿದ್ದರೂ ವಾರದಲ್ಲಿ 2 ಬಾರಿಯಾದ್ರೂ ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದ್ರೆ ಹಲ್ಲು ದೀರ್ಘಕಾಲ ಆರೋಗ್ಯವಾಗಿರುತ್ತವೆ.

ಉಪ್ಪು ಮತ್ತು ಕಾಳುಮೆಣಸು : ಒಂದು ಬಟ್ಟಲಿನಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಇದನ್ನು ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.

ಈರುಳ್ಳಿ : ಈರುಳ್ಳಿಯ ನಂಜುನಿರೋಧಕ ಗುಣಗಳು ಹಲ್ಲುನೋವು ಕಡಿಮೆಯಾಗಲು ನೆರವಾಗುತ್ತದೆ. ವಿಶೇಷವಾಗಿ ಒಸಡಿನಲ್ಲಿ ಸೋಂಕು ಉಂಟಾಗಿದ್ದರೆ ಇದು ಉತ್ತಮ ಪರಿಹಾರ. ಹಸಿ ಈರುಳ್ಳಿಯನ್ನು ನೋವಿರುವ ಹಲ್ಲುಗಳ ಭಾಗದಲ್ಲಿ ಅಗಿಯಿರಿ. ಇಲ್ಲವೆ ಕೆಲವು ನಿಮಿಷಗಳವೆರೆಗೆ ಹಸಿ ಈರುಳ್ಳಿಯ ಭಾಗವನ್ನುಇರಿಸಿ.

ಶುಂಠಿ ಮತ್ತು ಕೊತ್ತಂಬರಿಸೊಪ್ಪು : ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲು ನೋವು ಶಮನವಾಗುವುದು. ಕೊತ್ತಂಬರಿಸೊಪ್ಪನ್ನು ಬಾಯಿಯಲ್ಲಿ ಜಗಿಯುವುದರಿಂದ ದಂತ ಕ್ಷಯವೂ ನಿವಾರಣೆಯಾಗುತ್ತದೆ.

ಸೀಬೆ ಎಲೆ ಹಾಗೂ ದಾಳಿಂಬೆ ಎಲೆ : ಸೀಬೆ ಎಲೆ ಹಾಗೂ ದಾಳಿಂಬೆ ಎಲೆಗಳನ್ನು ಒಂದು ಬಟ್ಟಲು ನೀರಿನಲ್ಲಿ ಚೆನ್ನಾಗಿ ಕುದಿಸಿ. 2 ರಿಂದ 3 ದಿನ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ನೋವು ಕಡಿಮೆಯಾಗಿ ಹಲ್ಲಿನ ಬೇರುಗಳು ಗಟ್ಟಿಯಾಗುತ್ತವೆ.

ನಿಂಬೆಹಣ್ಣಿನ ಸಿಪ್ಪೆ : ನಿಂಬೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಪ್ರತಿದಿನ ಈ ಪುಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಹಲ್ಲು ನೋವು , ಹಲ್ಲುಗಳು ಹೊಳೆಯುವುದಲ್ಲದೇ ಉಸಿರಿನ ದುರ್ಗಂಧ ನಿವಾರಣೆಯಾಗುವುದು.

Home Remedies For Tooth Pain-Kannada-itskannadaರೋಜ್ ವಾಟರ್ ಹಾಗು ನಿಂಬೆ ರಸ :  ಹಲ್ಲು ನೋವು ಹೆಚ್ಚಿದ್ದರೆ ರೋಜ್ ವಾಟರ್ ಹಾಗು ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ನೋವು ಕಡಿಮೆಯಾಗುತ್ತದೆ.

ಕಹಿ ಬೇವಿನ ಎಲೆ : ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿ ಅದರೆ ರಸಕ್ಕೆ, ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

ಆಲಿವ್ ಎಣ್ಣೆ : ಆಲಿವ್ ಎಣ್ಣೆ ಬಳಸಿ ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಮುಳುಗಿಸಿ ನೋವಿರುವ ಒಸಡಿಗೆ ನಯವಾಗಿ ಹಚ್ಚಿರಿ. ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ ಆಲಿವ್ ಎಣ್ಣೆ ಹಲ್ಲುನೋವನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ಆಲಿವ್ ಎಣ್ಣೆಯ ಉರಿಯೂತ ನಿವಾರಕ ಗುಣ ಹಲ್ಲುನೋವು ಶಮನಗೊಳಿಸಲು, ಬಾವು ಕಡಿಮೆಗೊಳಿಸಲು ಹಾಗೂ ಶೀಘ್ರವಾಗಿ ಗಾಯ ಮಾಗಲು ನೆರವಾಗುತ್ತದೆ

ತೆಂಗಿನೆಣ್ಣೆ : ವಿಪರೀತವಾದ ಹಲ್ಲು ನೋವಿಗೆ ಇದು ಸಹ ಒಂದು ಪ್ರಯೋಜನಕಾರಿ ಮನೆ ಪರಿಹಾರವಾಗಿದೆ. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಕೇವಲ ತೆಂಗಿನೆಣ್ಣೆ. ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಕಾಣಬಹುದು . ಇವಿಷ್ಟು ಹಲ್ಲು ನೋವಿಗೆ ಪರಿಹಾರ-ಹಲ್ಲು ನೋವಿಗೆ ಮನೆಮದ್ದು-Home Remedies For Tooth Pain-Kannada.

ನಿಮ್ಮ ಹಲ್ಲುನೋವು ತೀವ್ರವಾಗಿದ್ದರೆ ದಂತವೈದ್ಯರನ್ನು ಕಾಣುವುದು ಮರೆಯದಿರಿ.

ನಿಮ್ಮ ಹಲ್ಲುನೋವು ತೀವ್ರವಾಗಿದ್ದರೆ ಅಥವಾ ಹೆಚ್ಚು ಗಂಭೀರವಾದ ವೈದ್ಯಕೀಯ ಚಿಕಿತ್ಸೆ ಅವಶ್ಯಕವಾಗಿದ್ದರೆ, ನಿಮ್ಮ ದಂತವೈದ್ಯರನ್ನು ಬೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆಯಿರಿ. ಅನೇಕ ಹಲ್ಲು ನೋವಿಗೆ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. // ಈ ವಿಭಾಗದ ಇನ್ನಷ್ಟು   ಸುದ್ದಿಗಳಿಗೆ ಕ್ಲಿಕ್ಕಿಸಿ – Kannada Home Remedies

WebTitle : ಹಲ್ಲು ನೋವಿಗೆ ಪರಿಹಾರ-ಹಲ್ಲು ನೋವಿಗೆ ಮನೆಮದ್ದು-Home Remedies For Tooth Pain-Kannada

ಈ ಲೇಖನವನ್ನು ಓದಿ – ಗಂಟಲು ನೋವಿನ ಮನೆ ಪರಿಹಾರಗಳು-Throat Pain Home Remedies in Kannada

ಅತೀ ಶೀಘ್ರದಲ್ಲಿಯೇ ನೂತನ ಸುದ್ದಿವಾಹಿನಿ – Star-Kannada ನಿಮ್ಮ ಮುಂದೆ . . .