ಗಂಟಲು ನೋವಿಗೆ ಪರಿಹಾರ-Throat Pain Home Remedies in Kannada

Throat Pain Home Remedies in Kannada

Health Tips : (itskannada) ಗಂಟಲು ನೋವಿಗೆ ಪರಿಹಾರ ,ಗಂಟಲು ನೋವಿಗೆ ಮನೆಮದ್ದು,ಗಂಟಲು ನೋವಿಗೆ ತಕ್ಷಣದ ಪರಿಹಾರವನ್ನು ಇಲ್ಲಿ ಪಟ್ಟಿಮಾಡಲಾಗಿದೆ. ಮನೆಯಲ್ಲಿಯೇ ಸಿಗುವಂತಹ ನೈಸರ್ಗಿಕ ವಸ್ತುಗಳು ನಮ್ಮ ಕಿರಿಕಿರಿಗೆ ಕಾರಣವಾಗುವ ಗಂಟಲು ನೋವನ್ನು ನಿವಾರಿಸಲು ಅನುಕೂಲವಾಗುತ್ತವೆ .ಗಂಟಲು ನೋವಿನ ಮನೆ ಪರಿಹಾರಗಳು ಯಾವುವು ಅವುಗಳನ್ನು ನೋಡೋಣ..

ಗಂಟಲು ನೋವಿಗೆ ಪರಿಹಾರ-Throat Pain Home Remedies in Kannada

ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲ ನೋವನ್ನು ನಿವಾರಿಸಿಕೊಳ್ಳಬಹುದು. ಇಷ್ಟೇ ಅಲ್ಲದೆ ಇದು ನಿಮ್ಮ ಗಂಟಲ ನೋವಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಉಪ್ಪು ಅಷ್ಟಾಗಿ ರುಚಿಸದಿದ್ದಲ್ಲಿ, ಈ ನೀರಿಗೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಮುಕ್ಕಳಿಸಿ, ಆದರೆ ನುಂಗಬೇಡಿ. ಮುಕ್ಕಳಿಸಿದ ನೀರನ್ನು ಹೊರಗೆ ಉಗಿಯಿರಿ. ದಿನಕ್ಕೆ ನಾಲ್ಕೈದು ಬಾರಿ ಇದನ್ನು ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ.

ಲೋಜೆಂಗ್ ಬಳಸಿ ಓಟಿಸಿ ಮಾತ್ರೆಯಾಗಿರುವ ಲೋಜೆಂಗ್ ಗಂಟಲು ನೋವಿನಿಂದ ಉಪಶಮವನ್ನು ನೀಡುತ್ತದೆ. ಈ ಮಾತ್ರೆಯಲ್ಲಿ ಮೆಂತಲ್ ಇದ್ದು ಇದು ನೋಯುತ್ತಿರುವ ಗಂಟಲನ್ನು ಸರಿಪಡಿಸುತ್ತದೆ. ದಿನಕ್ಕೆ 3-4 ಲೋಜೆಂಗ್ ಮಾತ್ರೆಗಳನ್ನು ಸೇವಿಸಿ.

ನೀರು ಕುಡಿಯುತ್ತಿರಿ ಈ ಸಮಯದಲ್ಲಿ ಹೆಚ್ಚು ನೀರಿನ ಸೇವನೆ ಮಾಡುವುದು ಮತ್ತು ನೀರಿನ ಅಂಶಗಳಿರುವ ಪಾನೀಯಗಳನ್ನು ಸೇವಿಸುವುದು ಉತ್ತಮವಾಗಿದೆ. ಸೀನುವಾಗ ಮತ್ತು ಲೋಳೆಯನ್ನು ಬಿಡುಗಡೆ ಮಾಡುವಾಗ ದೇಹ ನಿರ್ಜಲೀಕರಣThroat Pain Home Remedies in Kannada-itskannadaಕ್ಕೆ ಒಳಗಾಗುತ್ತದೆ. ಆದ್ದರಿಂದ ಎಂದಿಗಿಂತಲೂ ಹೆಚ್ಚಿನ ನೀರಿನ ಸೇವನೆಯನ್ನು ನೀವು ಮಾಡಬೇಕು.

ಇನ್ನಷ್ಟು, ಗಂಟಲು ನೋವಿಗೆ ಪರಿಹಾರ-Throat Pain Home Remedies in Kannada

ಬ್ಯಾಕ್ಟೀರಿಯಾ ವಿರೋಧಿ ಹಾಗೂ ನಂಜುನಿರೋಧಕ ಗುಣವನ್ನು ಹೊಂದಿರುವಂತಹ ಬೆಳ್ಳುಳ್ಳಿಯು ಗಂಟಲು ನೋವನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯಲ್ಲಿರುವಂತಹ ಅಲಿಸಿನ್ ಎನ್ನುವಂತಹ ಅಂಶವು ಬ್ಯಾಕ್ಟೀರಿಯಾವನ್ನು ಕೊಂದು ಗಂಟಲು ನೋವನ್ನು ನಿವಾರಿಸುತ್ತದೆ. ಹಸಿ ಬೆಳ್ಳುಳ್ಳಿ ಅಥವಾ ಆಹಾರದಲ್ಲಿ ಇದನ್ನು ಬಳಸುವ ಮೂಲಕ ಸೇವಿಸಬಹುದು.

ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಜೇನುತುಪ್ಪವನ್ನು ಹಿಂದಿನ ಕಾಲದಿಂದಲೂ ಸೇವಿಸುತ್ತಾ ಇದ್ದರು. ಒಂದು ಕಪ್ ಬಿಸಿ ನೀರಿಗೆ ಒಂದರಿಂದ ಎರಡು ಚಮಚ ಜೇನುತುಪ್ಪನ್ನು ಹಾಕಿ ದಿನದಲ್ಲಿ ಎರಡರಿಂದ ಮೂರು ಸಲ ಕುಡಿಯಿರಿ ಅಥವಾ ಮಲಗುವ ಮೊದಲು ಒಂದು ಚಮಚ ಜೇನುತುಪ್ಪನ್ನು ನೇರವಾಗಿ ಸೇವಿಸಬಹುದು.

ಕಾಳುಮೆಣಸಿನ ಕಷಾಯ :ಕಾಳುಮೆಣಸು ಮತ್ತು ಏಲಕ್ಕಿಯನ್ನು ಜಜ್ಜಿ ಪುಡಿ ಮಾಡಿಕೊಳ್ಳಿ.ನಂತ್ರ ಅದನ್ನು ಒಂದು ಪಾತ್ರೆಗೆ ಹಾಕಿ. ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ . ಸುಮಾರು ಐದು ನಿಮಿಷಗಳ ಕಾಲ ಅಥವಾ ನೀರು ಮುಕ್ಕಾಲು ಕಪ್ ಆಗುವವರೆಗೆ ಕುದಿಸಿ. ಅದಕ್ಕೆ ಕಾಲು ಕಪ್ ಬಿಸಿ ಹಾಲು ಸೇರಿಸಿ. ಬೇಕಾದಲ್ಲಿ ಜಾಸ್ತಿ ಸೇರಿಸಬಹುದು. ಬಿಸಿ ಇರುವಾಗಲೇ ನಿಧಾನವಾಗಿ ಕುಡಿಯಿರಿ. ದಿನಕ್ಕೆ ಒಂದು ಬಾರಿ ಮಲಗುವ ಮುನ್ನ ಕುಡಿದರೆ ಸಾಕು. ಜೋರಿದ್ದರೆ ಎರಡು ಬಾರಿ ಕುಡಿಯಬಹುದು.

ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ, ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. ಶುಂಠಿ ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.

ಪದೇ ಪದೆ ಕಾಡುವ ಗಂಟಲು ನೋವಿಗೆ ಶುಂಠಿ ಕಷಾಯವನ್ನು ಮಾಡಿಕೊಂಡು ಕುಡಿದರೆ ತಕ್ಷಣ ನಿವಾರಣೆಯಾಗುತ್ತದೆ.
ಎರಡು ಎಳೆ ಬೆಳುಳ್ಳಿ ಜೊತೆಗೆ ಉಪ್ಪನ್ನು ಸೇರಿಸಿ ಅಗಿದು ಬೆಳಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಇದು ಯಾವುದೇ ರೀತಿಯ ಅಡ್ಡಪರಿಣಾಮ ಬೀರುವುದಿಲ್ಲ.ನಿಂಬೆ ರಸ ಮತ್ತು ಸುಣ್ಣವನ್ನು ಸಮ ಪ್ರಮಾಣದಲ್ಲಿ ಬೆರೆಸಿ ರಾತ್ರಿ ಮಲಗುವ ಮುಂಚೆ ಎರಡು ಚಮಚ ಕುಡಿದರೆ ಗಂಟThroat Pain Home Remedies in Kannada-itskannadaಲು ನೋವು ಹೋಗುತ್ತದೆ.   ಇವಿಷ್ಟು ಗಂಟಲು ನೋವಿಗೆ ಪರಿಹಾರ.// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Kannada Home Remedies – Kannada Health Tips

WebTitle : ಗಂಟಲು ನೋವಿಗೆ ಪರಿಹಾರ-Throat Pain Home Remedies in Kannada

Keyword : ಗಂಟಲು ನೋವಿಗೆ ಪರಿಹಾರ-Throat Pain Home Remedies in Kannada