ಕುಟುಂಬ ಸಮಸ್ಯೆಗೆ ಶನಿಯ ಮೊರೆಹೋದ ಮುಸ್ಲಿಂ ಮಹಿಳೆ

A Muslim woman worshiping Shani for Solve Family problems

ಕುಟುಂಬ ಸಮಸ್ಯೆಗೆ ಶನಿಯ ಮೊರೆಹೋದ ಮುಸ್ಲಿಂ ಮಹಿಳೆ

  • ಕಡು ಬಡತನ ಆಕೆಯ ಕುಟುಂಬವನ್ನು ಆವರಿಸಿತ್ತು.
  • ಸಮಸ್ಯೆಗಳ ನಿವಾರಣೆಗೆ ಯಾವ ದೇವರಾದರೇನು ಅನಿಸಿತ್ತು.
  • ಹಸಿದವನಿಗೇ ಗೊತ್ತು ಊಟದ ಬೆಲೆ ಎಂಬಂತೆ ಶನಿಯ ಮೊರೆ. 

ಯು.ಪಿ – ಮುಜಪ್ಪರ್ ನಗರ್ : ಕುಟುಂಬದಲ್ಲಿ ತಲೆ ದೊರಿದೆ ಸಮಸ್ಯೆಗಳನ್ನು ನಿವಾರಿಸು ಎಂದು ಬೇಡಿಕೊಂಡು ಶನಿ ದೇವನ ಮೋರೆಯೋದ ಮುಸ್ಲಿಂ ಮಹಿಳೆ.

ಆಕೆ ಶನಿದೇವನಿಗೆ ಪೂಜೆ ಸಲ್ಲಿಸುತ್ತಿರುವುದು ಇದೀಗ ತೀವ್ರ ಚರ್ಚೆಗೆ ಗುರಿಯಾಗಿದೆ , ಮಾಹಿತಿ ಪ್ರಕಾರ ಉತ್ತರಪ್ರದೇಶದ  ಮುಜಪ್ಪರ್ ನಗರದ ಒಬ್ಬ ಮಹಿಳೆ ಬುರ್ಕಾ ಧರಿಸಿ ಕುಟುಂಬ ಸದಸ್ಯರೊಂದಿಗೆ ಶನಿ ದೇವಾಲಯಕ್ಕೆ ಬಂದಿದ್ದಾರೆ.

ಸ್ವತಃ ಆಕೆಯ ಕುಟುಂಬ ಸದಸ್ಯರು ದೇವಾಲಯದ ಕಾರ್ಯದರ್ಶಿ ಶರತ್ ಕಪೂರ್ ಬಳಿ , ಆಕೆಗೆ ಪೂಜೆ ಮಾಡಲು ಅವಕಾಶ ಮಾಡಿ ಕೊಡಲು ಕೇಳಿಕೊಂಡಿದ್ದಾರೆ. ಮೊದಲಿಗೆ ಈ ಬಗ್ಗೆ ಆಶ್ಚರ್ಯಗೊಂಡ ದೇವಾಲಯದ ಕಾರ್ಯದರ್ಶಿ ನಂತರ ಅದರ ಕಾರಣ ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ಆಕೆ , ಶನಿದೇವನು ಮಾತ್ರ ನಮ್ಮ ಸಮಸ್ಯೆ ನಿವಾರಿಸಲು ಸಾಧ್ಯ , ನಮ್ಮ ಕಷ್ಟಗಳು ಅವನಿಂದ ಮಾತ್ರ ಪರಿಹಾರವಾಗಬಲ್ಲವು, ಈ ಬಗ್ಗೆ ಒಬ್ಬ ಬಾಬಾ ನಮಗೆ ತಿಳಿಸಿದ್ದಾರೆ. ಹಾಗೂ ನಾವು ಶನಿ ದೇವನಿಗೆ ಪೂಜೆ ಮಾಡಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದಳು.

ವಿಷಯ ತಿಳಿದ ದೇವಾಲಯ ಕಾರ್ಯದರ್ಶಿ , ಪೂಜೆ ಮಾಡಲು ಅನುಮತಿಯ ಅಗತ್ಯವಿಲ್ಲ , ಪೂಜಿಸುವ ಬಾವ ಇದ್ದರೆ , ಯಾರೇ ಆಗಲಿ ಪೂಜಿಸುವ ಅವಕಾಶವಿದೆ , ಇಲ್ಲಿ ದೇವರು, ಭಕ್ತಿ, ಯಾರ ಅಪ್ಪಣೆಯನ್ನೂ ಕೇಳೋದಲ್ಲ ತಾವು ಪೂಜಿಸ ಬಹುದು ಎಂದು ಅವರಿಗೆ ಅವಕಾಶ ಕೊಟ್ಟಿದ್ದಾರೆ.

ಆಕೆ ಶನಿದೇವನಿಗೆ ಭಕ್ತಿಯಿಂದ ಪೂಜಿಸಿ , ಅಲ್ಲೇ ಸ್ವಲ್ಪ ವಿಶ್ರಮಿಸಿ , ತಮ್ಮ ಕಷ್ಟಕಾರ್ಪಣ್ಯಗಳನ್ನು ಭಗವಂತನಲ್ಲಿ ಒಪ್ಪಿಸಿ ಅಲ್ಲಿಂದ ಹೊರಟರು.

ಇದಕ್ಕೆ ಅಲ್ಲವೇ ಹೇಳೋದು , ರಘುಪತಿ ರಾಘವ ರಾಜಾರಾಮ್ , ಪತೀತ ಪಾವನ ಸೀತಾರಾಮ್ , ಈಶ್ವರ ಅಲ್ಲಾ ತೆರೆನಾಮ್, ಸಬುಕೋ ಸನ್ಮತಿ ದೇ ಭಗವಾನ್ ಅಂತ ….. ////

WebTitle : ಕುಟುಂಬ ಸಮಸ್ಯೆಗೆ ಶನಿಯ ಮೊರೆಹೋದ ಮುಸ್ಲಿಂ ಮಹಿಳೆ-A Muslim woman worshiping Shani for Solve Family problems

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National  News Latest National  News Kannada  Latest Kannada News