ಮುಂಬೈನಲ್ಲಿ ಕಟ್ಟಡ ಕುಸಿತ : 14 ಮಂದಿ ರಕ್ಷಣೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ

ಮುಂಬೈನಲ್ಲಿ ಕಟ್ಟಡ ಕುಸಿತ ದಿಂದಾಗಿ ಸಿಲುಕಿದ್ದ 14 ಜನರನ್ನು ರಕ್ಷಿಸಲಾಗಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದೆ.

ಮುಂಬೈನ ಕಂಡಿವಲಿ ಪಶ್ಚಿಮ ಪ್ರದೇಶದಲ್ಲಿ ಬೃಹತ್ ಕಟ್ಟಡವೊಂದು ಕುಸಿದು ಬಿದ್ದಿದ್ದು, ಸದ್ಯ ಇದರಲ್ಲಿ ಸಿಲುಕಿದ್ದ 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ತುರ್ತು ಕಾರ್ಯಾಚರಣೆ ನಡೆಸಿ, ಕಟ್ಟಡದ ಮೊದಲ ಅಂತಸ್ಥಿನಲ್ಲಿ ಸಿಲುಕಿದ್ದ 12 ಹಾಗೂ ನೆಲ ಅಂತಸ್ಥಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದು, ಇನ್ನೂ ಮೂರ್ನಾಲ್ಕು ಜನ ಸಿಲುಕಿರುವ ಶಂಕೆ ಇದೆ. ಹಾಗೂ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮುಂಬೈ ಕಂಡಿವಲಿ ( Kannada News ) : ಮುಂಬೈನ ಕಂಡಿವಲಿ ಪಶ್ಚಿಮ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಕಟ್ಟಡ ಕುಸಿದಿದೆ. ಮೊದಲ ಮಹಡಿಯಲ್ಲಿದ್ದ 12 ಮಂದಿ ಮತ್ತು ನೆಲ ಮಹಡಿಯ ಇಬ್ಬರು ಸೇರಿದಂತೆ ಹದಿನಾಲ್ಕು ಜನರನ್ನು ರಾಷ್ಟ್ರೀಯ ವಿಪತ್ತು ಪಡೆ (ಎನ್‌ಡಿಆರ್‌ಎಫ್) ತಂಡ ರಕ್ಷಿಸಿದೆ.

ಇಂದು ಮುಂಜಾನೆ ಸರಿ ಸುಮಾರು ಬೆಳಿಗ್ಗೆ 6 ಕ್ಕೆ ಈ ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಬೆಳಿಗ್ಗೆ 06: 10 ರ ಸುಮಾರಿಗೆ ಎಂಸಿಜಿಎಂ ವಿಪತ್ತು ನಿಯಂತ್ರಣ ಕೊಠಡಿಗೆ ಸಬ್ರಿಯಾ ಮಸೀದಿ, ದಾಲ್ಜಿ ಪಾದ, ಕಂಡಿವಲಿ (ಪಶ್ಚಿಮ) ದ ಹಿಂದೆ ಜಿ +1 ಕಟ್ಟಡ ಕುಸಿದಿದೆ ಎಂಬ ಮಾಹಿತಿ ಸಿಕ್ಕಿತ್ತು.

ಘಟನೆ ವರದಿಯಾದ ತಕ್ಷಣವೇ ಪ್ರವೃತ್ತರಾದ ಎನ್‌ಡಿಆರ್‌ಎಫ್‌ನ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಲು ಘಟನಾ ಸ್ಥಳಕ್ಕೆ ಧಾವಿಸಿತು. ಎನ್‌ಡಿಆರ್‌ಎಫ್ ತಂಡದೊಂದಿಗೆ 4 ಅಗ್ನಿಶಾಮಕ ವಾಹನ ಮತ್ತು 1 ಆಂಬ್ಯುಲೆನ್ಸ್‌, ಜೊತೆಗೆ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ.

“ಕಂದವಲಿ (ಪಶ್ಚಿಮ) ದಲ್ಲಿ ಸುಮಾರು ಬೆಳಿಗ್ಗೆ 06:00. ಕ್ಕೆ ಕಟ್ಟಡ ಕುಸಿದಿದೆ, ಕಟ್ಟಡದ ಅಡಿ ಸಿಕ್ಕಿಬಿದ್ದ ಎಲ್ಲರನ್ನು ಎಂಸಿಜಿಎಂ, ಮುಂಬೈ ಅಗ್ನಿಶಾಮಕ ದಳ, ಪೊಲೀಸರು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವುಗಳು ಸಂಭವಿಸಿಲ್ಲ, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ”ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಸತ್ಯನಾರಾಯಣ್ ಪ್ರಧಾನ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Web Title : Building collapses in Mumbai Kandivali, 14 rescued, no casualty reported