ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ನಾಳೆಯಿಂದ ರೈಲು ಸಂಚಾರ ಆರಂಭ

ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರ ನಾಳೆಯಿಂದ ರೈಲು ಸಂಚಾರ ಆರಂಭಿಸಲು ನಿರ್ಧರಿಸಿದೆ.

ಕೊರೋನಾ ಲಾಕ್​ಡೌನ್​​ ನ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಇದೇ ತಿಂಗಳು ಮೇ 12ನೇ ತಾರೀಕಿನಿಂದ, ಅಂದರೆ ನಾಳೆಯಿಂದ ವಿಶೇಷ ರೈಲು ಸಂಚಾರ ಆರಂಭಿಸಲು ನಿರ್ಧರಿಸಿದೆ. ಕೇಂದ್ರ ದೆಹಲಿಯಿಂದ 15 ಸ್ಥಳಗಳಿಗೆ ರೈಲು ಸಂಚಾರ ಪ್ರಾರಂಭ ಮಾಡಲಿದೆ.

ನವದೆಹಲಿ ( Kannada News ) : ಮೇ 12 ರಿಂದ ಪ್ರಯಾಣಿಕರ ರೈಲು ಕಾರ್ಯಾಚರಣೆಯನ್ನು ಕ್ರಮೇಣ ಪುನರಾರಂಭಿಸಲು ಭಾರತೀಯ ರೈಲ್ವೆ ಯೋಜಿಸಿದೆ. ಆರಂಭದಲ್ಲಿ, 15 ರೈಲುಗಳು ಓಡಲಿವೆ ಎಂದು ರೈಲ್ವೆ ಸಚಿವಾಲಯ ಭಾನುವಾರ ತಿಳಿಸಿದೆ.

ಇಷ್ಟು ದಿವಸ ರೈಲು ಸಂಚಾರ ಸ್ಥಗಿತಗೊಂಡಿದ್ದು, ಇದೀಗ ನಾಳೆಯಿಂದ ರೈಲು ಸಂಚಾರ ಆರಂಭವಾಗಲಿದೆ, ಎಂಬುದು ರೈಲು ಪ್ರಯಾಣಿಕರಿಗೆ ಸಂತಸ ಮೂಡಿಸದೆ. ಕೊರೋನಾ ಮಹಾಮಾರಿ ಜನರ ಜೀವನವನ್ನು ಅಸ್ತವ್ಯಸ್ತ ಮಾಡಿ, ವಲಸೆ ಕಾರ್ಮಿಕರು ದೇಶದ ನಾನಾ ಭಾಗಗಳಲ್ಲಿ ಇದ್ದಲ್ಲೇ ಸಿಲುಕಿದ್ದರು.

ರೈಲು ಸಂಚಾರ ಪ್ರಾರಂಭದ ಸುದ್ದಿ ಇದೀಗ ಅದೆಷ್ಟೋ ಅಂತಹ ಜನರಿಗೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇನ್ನೊಂದೆಡೆ ರೈಲು ಸಂಚಾರ ಆರಂಭ, ಲಾಕ್ ಡೌನ್ ಅಂತ್ಯವಾಗಬಹುದಾ ? ಎಂಬ ಸೂಚನೆಯನ್ನು ಸಹ ನೀಡಿದೆ.

ದೇಶಾದ್ಯಂತ ರೈಲು ಸಂಚಾರ ನಾಳೆಯಿಂದ ಹಂತ ಹಂತವಾಗಿ ಆರಂಭವಾಗಲಿದ್ದು, ಇಂದು ಸಂಜೆ 4 ಗಂಟೆಯಿಂದಲೇ ಆನ್ಲೈನ್ ಬುಕಿಂಗ್ ಶುರುವಾಗಲಿದ್ದು, ಪ್ರಯಾಣಿಕರು ನೇರವಾಗಿ ಟಿಕೆಟ್ ಖರಿದಿಸಲು ಅನುವಿಲ್ಲ..

ದೆಹಲಿಯಿಂದ ಬೆಂಗಳೂರು ಸೇರಿದಂತೆ ದೇಶದ 15 ವಿವಿಧ ನಗರಗಳಿಗೆ ವಿಶೇಷ ರೈಲು ಸಂಚಾರ ಮಂಗಳವಾರದಿಂದ ಆರಂಭವಾಗಲಿದೆ. ರೈಲು ಹತ್ತುವ ಮೊದಲು ಆರೋಗ್ಯ ತಪಾಸಣೆ ನಡೆಸಲಾಗುವುದು. ರೋಗಲಕ್ಷಣ ಇಲ್ಲದವರಿಗೆ ಪ್ರವೇಶ ನೀಡಲಾಗುವುದು. ಹಾಗೂ ಕಡ್ಡಯವಾಗಿ ಮಾಸ್ಕ್​ ಧರಿಸಿ ಪ್ರಯಾಣ ಮಾಡಬೇಕು ಎಂದು ಆದೇಶಿಸಲಾಗಿದೆ.

ಇನ್ನು, ರೈಲಿನಿಂದ ಇಳಿದ ಮೇಲೆ ಪ್ರಯಾಣಿಕರಿಗೆ ಸ್ಕ್ರೀನಿಂಗ್​ ಮತ್ತು ಆರೋಗ್ಯ ತಪಾಸಣೆಯಂತಹ ಟೆಸ್ಟ್​ ಮಾಡಲಾಗುತ್ತದೆ. ಜತೆಗೆ ಕೇಂದ್ರದ ಆದೇಶದಂತೆ ಸಾಮಾಜಿಕ ಅಂತರ ಕಡ್ಡಾಯ.

ಇನ್ನು ಕೌಂಟರ್ ನಲ್ಲಿ ಟಿಕೆಟ್ ಕೊಡಲಾಗುವುದಿಲ್ಲ. ಪ್ರಯಾಣಿಸುವ ಪ್ರಯಾಣಿಕರು ಮಾತ್ರ ಪ್ಲಾಟ್ಫಾರ್ಮ್ ಗೆ ಬರಬೇಕಿದೆ. ಎಲ್ಲಾ ರೈಲುಗಳಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಪ್ರಯಾಣ ದರ ನಿಗದಿ ಮಾಡಿದ್ದು ಮೊದಲ ಹಂತದಲ್ಲಿ ಎಸಿ ಕೋಚ್ ಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎನ್ನಲಾಗಿದೆ.

ದೆಹಲಿಯಿಂದ ಬೆಂಗಳೂರು, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ ಪುರ, ಭುವನೇಶ್ವರ, ಚೆನ್ನೈ, ತಿರುವನಂತಪುರ, ಮಡಗಾಂವ್, ಮುಂಬೈ ಸೆಂಟ್ರಲ್ ನಿಲ್ದಾಣಗಳಿಗೆ ವಿಶೇಷ ರೈಲುಗಳು ಸಂಚರಿಸಲಿವೆ.

ಕೋವಿಡ್ -19 ಆರೈಕೆ ಕೇಂದ್ರಗಳಿಗೆ 20,000 ಬೋಗಿಗಳನ್ನು ಕಾಯ್ದಿರಿಸಿದ ನಂತರ ಲಭ್ಯವಿರುವ ಬೋಗಿಗಳ ಆಧಾರದ ಮೇಲೆ ಭಾರತೀಯ ರೈಲ್ವೆ ಹೊಸ ಮಾರ್ಗಗಳಲ್ಲಿ ಹೆಚ್ಚಿನ ವಿಶೇಷ ಸೇವೆಗಳನ್ನು ಪ್ರಾರಂಭಿಸುತ್ತದೆ ಮತ್ತು ವಲಸಿಗರಿಗೆ ಶ್ರಮಿಕ್ ಸ್ಪೆಷಲ್ ಆಗಿ ಪ್ರತಿದಿನ 300 ರೈಲುಗಳ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲು ಸಾಕಷ್ಟು ಸಂಖ್ಯೆಯ ಬೋಗಿಗಳನ್ನು ಕಾಯ್ದಿರಿಸಲಾಗಿದೆ.

Web Title : Indian Railways plans to gradually restart passenger train operations